ಶಿರಸಿ: ಮನುಷ್ಯನ ಇತಿಹಾಸ ಅಧ್ಯಯನಕ್ಕೆ ಸಿಗುವ ಆಕರಗಳು ಕಡಿಮೆ. ಈ ಕಾರಣದಿಂದ ಡಿಎನ್‌ಎ ಸೇರಿದಂತೆ ವೈಜ್ಞಾನಿಕವಾಗಿಯೂ ಅಧ್ಯಯನದ ವಿಸ್ತಾರ ಆಗಬೇಕಾಗಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರಮೋದ ಗಾಯಿ ಹೇಳಿದರು.
ಸಾಮಂತರ ಇತಿಹಾಸ ಸೇರಿದಂತೆ ಯಾವುದೇ ಇತಿಹಾಸದ ಅಧ್ಯಯನಗಳು, ಸಂಶೋಧನೆಗಳು ಹೆಚ್ಚಾದಂತೆ ಮಾನವನ ಉಗಮ ಕಂಡು ಹಿಡಿಯುವ ವಿಧಾನ ಕೂಡ ಬದಲಾಗುತ್ತವೆ. ಇದಕ್ಕಾಗಿ ಜಗತ್ತಿನಲ್ಲಿ ಸತತ ಪ್ರಯತ್ನ ಆಗುತ್ತಿದೆ. ಇತಿಹಾಸ ಶೋಧನೆಗಳು ಆಕರಗಳು ಬೇಕಿದೆ. ಮಾನವನ ಗತ ಕಾಲದ ಬದುಕಿನಲ್ಲಿ ನಡೆದ ಘಟನೆಗಳು ಆಧರಿಸಿ ಅಧ್ಯಯನ ನಡೆಯುತ್ತದೆ ಎಂದರು.
ಇತಿಹಾಸ ತಜ್ಞ ಡಾ| ಅ.ಸುಂದರ್ ಮಾತನಾಡಿ, ಭಾರತೀಯ ಶಿಲ್ಪಗಳಲ್ಲಿ ವೈಜ್ಞಾನಿಕವಾಗಿಯೇ ಆಧ್ಯಾತ್ಮಿಕತೆ ಅಳವಡಿಸಿಕೊಳ್ಳಲಾಗಿದೆ ಎಂದರು.
ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ, ರಾಷ್ಟ್ರಕೂಟರು ಹಾವೇರಿ ಮತ್ತು ಉತ್ತರ ಕನ್ನಡ ಭಾಗಕ್ಕೆ ವಲಸೆ ಬಂದಿದ್ದರು. ಅವರು ಏಕೆ ಇಲ್ಲಿ ಬಂದರು ಎಂಬ ಬಗ್ಗೆ ಇದುವರೆಗೂ ಹೆಚ್ಚಿನ ಸಂಶೋಧನೆಗಳು ಆಗಿಲ್ಲ. ಅವರ ಅವಧಿಯಲ್ಲಿ ಸ್ಥಾಪಿಸಿರುವ ಕೋಣನ ತಲೆ ಕಲ್ಲುಗಳ ಬಗ್ಗೆ ಅಧ್ಯಯನ ಮಾಡಲು ಯುವ ಸಂಶೋಧಕರಿಗೆ ಅವಕಾಶವಿದೆ ಎಂದರು.
Advertisement
ತಾಲೂಕಿನ ಸ್ವರ್ಣವಲ್ಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಇತಿಹಾಸ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ದಿನದ 24 ಗಂಟೆಯಲ್ಲಿ ಇತಿಹಾಸದ ದಾಖಲೆ ಸಿಗುವುದು ಕೇವಲ ಒಂದು ನಿಮಿಷ ಮಾತ್ರ. ಉಳಿದವುಗಳಿಗೆ ದಾಖಲೆ ಇಲ್ಲ. ಈ ಕಾರಣದಿಂದ ಎಲುಬುಗಳು ಸಿಕ್ಕರೂ ಅದರ ಡಿಎನ್‌ಎ ನೋಡಿಯೂ ವಿಸ್ತಾರ ಮಾಡಿಕೊಳ್ಳಬೇಕು ಎಂದ ಅವರು, ಇದಕ್ಕಾಗಿ ಇತಿಹಾಸದ ವಿಸ್ತಾರ ಅಧ್ಯಯನ ನಡೆಯಬೇಕು ಎಂದು ಪ್ರತಿಪಾದಿಸಿದರು.
Related Articles
Advertisement
ಐಸಿಎಚ್ಆರ್ ಸದಸ್ಯ ಡಾ| ಎಂ. ಕೊಟ್ರೇಶ, ಇಡೀ ಕರ್ನಾಟಕ ಪ್ರಾದೇಶಿಕ ಇತಿಹಾಸಕ್ಕೆ ಐತಿಹಾಸಿಕ ಸಮ್ಮೇಳನ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ, ನೆಲ, ಜಲ ವೃಕ್ಷಕ್ಕೆ ಅದರದ್ದೇ ಆದ ಇತಿಹಾಸ ಮಹತ್ವವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಚಾಲಕ ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ, ಪ್ರಾದೇಶಿಕ ಇತಿಹಾಸಗಳನ್ನು ಜೋಡಿಸುವ ಕಾರ್ಯ ಇದು. ಇತಿಹಾಸ ಅಕಾಡೆಮಿ, ಇತಿಹಾಸ ಕಾಂಗ್ರೆಸ್ ಬಿಟ್ಟರೆ ಜಾಗೃತ ವೇದಿಕೆಯೇ ಸಮ್ಮೇಳನ, ಇತಿಹಾಸ ಜಾಗೃತಿ ಮಾಡುತ್ತಿದೆ ಎಂದರು. ಸಂಸ್ಕೃಗಳ ಚಿಂತಕ ಬಾಲಸುಬ್ರಹ್ಮಣ್ಯ ಕೆಸ್ತೂರು, ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಚಂದ್ರರಾಜ ಜೈನ್, ಎನ್.ಎನ್. ಹೆಗಡೆ ವಾಜಗದ್ದೆ, ಎನ್.ಎನ್. ಹೆಗಡೆ ಕಲಗದ್ದೆ, ಸುಧೀರ ಪರಂಜಪೆ, ರತ್ನಾಕರ ಬಾಡಲಕೊಪ್ಪ ಇದ್ದರು. ವಿನಾಯಕ ಎಂ. ಭಟ್ಟ ನಿರ್ವಹಿಸಿದರು.