ಹರಪನಹಳ್ಳಿ: ಪರಿಸರ ಉಳಿಸದೆ ಹೋದಲ್ಲಿ ಮನುಷ್ಯನಿಗೆ ಉಸಿರು ಇಲ್ಲದಂತಾಗುತ್ತದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ಜೀವನ ಮಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ಹಡಗಲಿ, ಹರಪನಹಳ್ಳಿ ಗವಿಮಠದ ಡಾ|ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿ ಎ.ಎಂ.ಪಿ.ಅಜ್ಜಯ್ಯ ಸಮಾಜ ಮುಖೀ ಟ್ರಸ್ಟ್, ಕರ್ನಾಟಕ ರಕ್ಷಣ ವೇದಿಕೆ ಹಾಗೂ ಜೀವಜಲ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಎಎಂಪಿ ವಾಗೀಶ್ ಅವರ ಜನ್ಮದಿನದ ಅಂಗವಾಗಿ ಅಯೊಜಿಸಿದ್ದ ರಕ್ತದಾನ ಶಿಬಿರ, ರೈತರಿಗೆ, ಮಾಜಿ ಸೈನಿಕರಿಗೆ, ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವಾಟರ್ ಬಾಟಲಿಗಳನ್ನು ಖರೀದಿಸಿ ಕೊಂಡೊಯ್ಯುವಂತೆ, ಮುಂದಿನ ದಿನಗಳಲ್ಲಿ ಆಮ್ಲಜನಕ ಕೊರತೆಯಾಗಿ ಸಿಲಿಂಡರ್ ಹೊತ್ತು ಸಾಗುವ ಪರಿಸ್ಥಿತಿ ಎದುರಾಗದಂತೆ ಪರಿಸರವನ್ನು ಉಳಿಸಲು ಸಹಸ್ರ ಸಂಖ್ಯೆಯ ಗಿಡಗಳನ್ನು ಬೆಳೆಸಬೇಕು ಎಂದರು.
ಹಿರೇಮಲ್ಲನಕೇರಿ ಶ್ರೀ ಚನ್ನಬಸವಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಹುಟ್ಟು ಸಾವು ಭಗವಂತನದ್ದು, ಬದುಕು ನಮ್ಮದಾಗಿದ್ದು ಇರುವರೆಗೂ ಉತ್ತಮರಾಗಿ ಸಾಧನೆ ಹಾದಿಯಲ್ಲಿ ಬೆಳೆಯಬೇಕು. ಕೆಡು ಬಯಸದೆ ಒಳಿತು ಮಾಡಿದರೆ ಮಾತ್ರ ಅಪ್ಪಿಕೊಳ್ತಾರೆ ಇದಕ್ಕೆ ವಾಗೀಶ್ ಸಾಕ್ಷಿಯಾಗಿದ್ದಾರೆ ಎಂದರು. ಮಾಜಿ ಸೈನಿಕ ಬಸವರಾಜಚಾರ್ಯ, ಶಿಕ್ಷಕಿ ಜಯಲಕೀÒ ¾, ರೈತರಿಗೆ ಹಾಗೂ ರಕ್ತದಾನಿಗಳಿಗೆಸನ್ಮಾನಿಸಿಗೌರವಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಇಲಾಖೆ ಸಿಬ್ಬಂದಿ ರಕ್ತದಾನ ಮಾಡಿದರು. ಟಿಎಚ್‌ಒ ಹಾಲಸ್ವಾಮಿ, ಈಶ್ವರ, ಬಿಸಿಎಂ ಅಧಿಕಾರಿಗಳಾದ ಭೀಮಪ್ಪ ಕೊಳಚಿ, ಎಂಪಿಎಂ ಅಶೋಕ, ವಿ. ರಮೇಶ್, ಜೀವಜಲ ಟ್ರಸ್ಟ್ ಹೇಮಣ್ಣ ಮೋರಿಗೆರಿ, ನಿಲಯ ಮೇಲ್ವಿಚಾರಕರಾದ ಬಿ.ಎಚ್. ಚಂದ್ರಪ್ಪ, ಎನ್.ಜಿ.ಬಸವರಾಜ, ಕರವೇ ಬಸವರಾಜ ಹುಲಿಯಪ್ಪನವರ, ಪ್ರಕಾಶ, ಯು. ನಾರಾಯಣ, ಡಾ| ವೆಂಕಟೇಶ್, ಡಾ| ದತ್ತಾತ್ರೇಯ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.