Advertisement
ಇದು ಜನರೇಶನ್ ಗ್ಯಾಪ್ ಅಥವಾ ತಲೆಮಾರುಗಳ ಅಂತರ. ಇಲ್ಲಿ ಸಮಸ್ಯೆಯ ಮೂಲ ಎಂದರೆ, ಹಳೆಯ ತಲೆಮಾರು ಅಥವಾ ಅಪ್ಪ-ಅಮ್ಮ ತಮಗೆ ವಯಸ್ಸಾಗಿದೆ ಎಂಬುದನ್ನು ಅರ್ಥ ಮಾಡಿ ಕೊಳ್ಳುವುದಿಲ್ಲ; ಯುವ ಜನಾಂಗ ತಾನು ಪ್ರೌಢನಾಗಿದ್ದೇನೆ ಎಂದು ಕೊಳ್ಳುತ್ತದೆ. ಎರಡು ತಲೆಮಾರುಗಳ ನಡುವೆ ಕಿಡಿ ಹೊತ್ತಿಕೊಳ್ಳು ವುದಕ್ಕೆ ಮೂಲ ಕಾರಣ ಇದು. ಒಂದು ತಲೆಮಾರು ಇರುವ ಅವಕಾಶವನ್ನು ಇನ್ನೊಂದು ತಲೆಮಾರು ಆಕ್ರಮಿಸಿಕೊಳ್ಳಲು ಮುಂದಾ ಗುವುದರಿಂದ ಸಮಸ್ಯೆ ತಲೆದೋರುತ್ತದೆ.
Related Articles
Advertisement
ನಾವು ತಾಯ್ತಂದೆಯರು, ಅವರು ನಮ್ಮ ಮಕ್ಕಳು ಎಂಬುದು ಭಾವನೆಗಳ ವಿಚಾರ. ಆದರೆ ಬದುಕಿನ ಸ್ತರದಲ್ಲಿ ತಾಯಿ- ತಂದೆ ಹಿಂಡಿನ ಹಿರಿಯಾನೆಗಳಂತೆ, ಮಕ್ಕಳು ಪುಂಡಾನೆಗಳಂತೆ. ಅವರಿಗೆ ಅವಕಾಶ ಬೇಕು. ಹೆತ್ತವರಿಂದ ದೂರ ಇರುವ ಮಕ್ಕಳು ತಾಯಿ ತಂದೆಯರನ್ನು ಹೆಚ್ಚು ಪ್ರೀತಿ ಸುವುದು, ಜತೆಗೇ ಇರುವ ವರು ಜಗಳವಾಡು ವುದು ಇದೇ ಕಾರಣದಿಂದ. ನಾವು ಕೆಟ್ಟವರು ಅಥವಾ ನಮ್ಮ ಮಕ್ಕಳು ಕೆಟ್ಟವರು ಎನ್ನು ವುದು ಇದಕ್ಕೆ ಕಾರಣ ಅಲ್ಲ. ಅದು ಪ್ರಾಣಿಸಹಜ.
ಹಾಗಾದರೆ ಇದನ್ನು ನಿಭಾಯಿಸುವುದು ಹೇಗೆ? ಹಿರಿಯ ತಲೆ ಮಾರು ಒಂದು ನಿರ್ದಿಷ್ಟ ವಯೋಮಾನದಲ್ಲಿ ಒಂದು ಹೆಜ್ಜೆ ಹಿಂದಕ್ಕೆ ನಿಂತು, ಹೊಸ ತಲೆಮಾರಿಗೆ ಅವಕಾಶ ಮಾಡಿಕೊಡಬೇಕು. ಆಗ ನೀರಿನಂತೆ ಹಳೆಯದರ ಜಾಗವನ್ನು ಹೊಸದು ತುಂಬುತ್ತದೆ. ಒಂದು ಬಗೆಯ ಮಾಗಿದ ವಿವೇಕ ಮತ್ತು ಅನುಭವ ಪ್ರೌಢಿಮೆಯನ್ನು ಹಿರಿಯ ತಲೆಮಾರು ಪ್ರದರ್ಶಿಸಬೇಕು. ನಮಗೆ ವಯಸ್ಸಾದಂತೆ ನಾವು ಒಂದು ನಿರ್ದಿಷ್ಟ ಮಟ್ಟದ ಮಾಗು ವಿಕೆಯನ್ನು, ಅನುಭವಗಳನ್ನು ಗಳಿಸುತ್ತೇವೆ. ಕಿರಿಯ ತಲೆಮಾರು ಇನ್ನಷ್ಟೇ ಅದನ್ನು ಪಡೆಯಬೇಕಿದೆ; ಅದು ಆ ಮಾರ್ಗ ದರ್ಶನಕ್ಕಾಗಿ ನಮ್ಮತ್ತ ನೋಡುತ್ತದೆ. ಆ ಕೆಲಸ ನಮ್ಮಿಂದಾಗಬೇಕು.
ಇದು ಸಾಧ್ಯವಾದರೆ ಹೆಚ್ಚು ಕಮ್ಮಿ ಒಂದೇ ಅವಕಾಶದಲ್ಲಿ – ಮನೆಯ ಮೇಲಂತಸ್ತಿನಲ್ಲಿ ಹಿರಿಯರು, ಕೆಳ ಅಂತಸ್ತಿನಲ್ಲಿ ಕಿರಿಯರು ನೆಲೆಸಿ ಬದುಕಲು ಸಾಧ್ಯವಾಗುತ್ತದೆ!
(ಸಾರ ಸಂಗ್ರಹ)