Advertisement

ವರ್ಣ ವಿರಾಸತ್‌ ಸಮಾಪನ

09:37 AM Jan 15, 2018 | Team Udayavani |

ಮೂಡಬಿದಿರೆ: ಕಲಾ ಶಿಕ್ಷಣವೂ ಒಳಗೊಂಡಂತೆ ಚಿತ್ರಕಲೆಯ ಬಹು ವಿಧ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತ ಬರುತ್ತಿರುವ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದಲ್ಲಿ ಅತ್ಯುತ್ತಮವಾದ ಸಮಕಾಲೀನ ಚಿತ್ರಕಲಾ ಗ್ಯಾಲರಿ ಸ್ಥಾಪನೆಯಾಗಲಿ’ ಎಂದು ಜಮ್ಮು ಸುಭಹ್‌ ಆರ್ಟ್‌ ಗ್ಯಾಲರಿಯ ನಿರ್ದೇಶಕ ಕೆ.ಕೆ. ಗಾಂಧಿ ಆಶಯ ವ್ಯಕ್ತಪಡಿಸಿದರು.

Advertisement

ವಿದ್ಯಾಗಿರಿಯಲ್ಲಿ ಆರುದಿನಗಳ ಪರ್ಯಂತ ನಡೆದ ರಾಷ್ಟ್ರ ಮಟ್ಟದ ಚಿತ್ರಕಲಾವಿದರ ಶಿಬಿರ ಆಳ್ವಾಸ್‌ ವರ್ಣ ವಿರಾಸತ್‌ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ಆಳ್ವಾಸ್‌ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು, ಆಳ್ವಾಸ್‌ ವಿರಾಸತ್‌, ಕಲಾ ಶಿಬಿರಗಳು ಎಲ್ಲವೂ ಇಲ್ಲಿಯೇ ಇದೆ ನಿಜವಾದ ಭಾರತ ಎಂಬುದನ್ನು ಸಾಕ್ಷೀಕರಿಸುತ್ತಿವೆ. ಇಲ್ಲಿನ ಶಿಸ್ತು, ಸೌಂದರ್ಯಪ್ರಜ್ಞೆ, ಸಂಘಟನಾ ಸಾಮರ್ಥ್ಯ ಅನ್ಯತ್ರ ಕಾಣಸಿಗದು ಎಂದೆನಿಸಿದೆ. ವಿನೀತ ಕಲಾವಿದನಾಗಿ ನಿಮ್ಮ ನಡುವೆ ಇದ್ದೇನೆ’ ಎಂದು ಅವರು ಉದ್ಗರಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಚಿತ್ರಕಲಾವಿದರ ಶಿಬಿರದಲ್ಲಿ ಪಾಲ್ಗೊಂಡ 20 ಮಂದಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು. ಶಿಬಿರದ ಗೌರವ ಸಲಹೆಗಾರರಾದ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್‌ ಆಳ್ವ, ಪುರುಷೋತ್ತಮ ಅಡ್ವೆ ವೇದಿಕೆಯಲ್ಲಿದ್ದರು. ಚಿತ್ರಕಲಾ ಶಿಕ್ಷಕ ಭಾಸ್ಕರ ನೆಲ್ಯಾಡಿ ಉಪಸ್ಥಿತರಿದ್ದರು. ಯೋಗಿತ್‌ ಬಿದ್ದಪ್ಪ ನಿರೂಪಿಸಿದರು.

ಅಭಿನಂದನೀಯ
ಆಳ್ವಾಸ್‌ ವರ್ಣ ವಿರಾಸತ್‌ 2018 ಪ್ರಶಸ್ತಿಗೆ ಆಯ್ಕೆಯಾಗಿರುವ ಹೊಸ ದಿಲ್ಲಿಯ ಹಿರಿಯ ಚಿತ್ರ ಕಲಾವಿದೆ ಶೋಭಾ ಬ್ರೂಟ ಅವರು ‘ಭಾರತೀಯ ಚಿತ್ರಕಲಾವಿದರ ಸೃಜನಶೀಲತೆಯ ದರ್ಶನವಾಗುತ್ತಿದೆ ಇಲ್ಲಿ. ಭಾರತದ ಎಲ್ಲ ವರ್ಗಗಳ ಕಲಾವಿದರನ್ನು, ಅವರ ಸೃಜನ ಶೀಲತೆಯನ್ನು ಆಳ್ವಾಸ್‌ ಪ್ರೋತ್ಸಾಹಿಸುತ್ತಿರುವ ಪರಿ ನಿಜಕ್ಕೂ ಅವರ್ಣನೀಯ, ಅಭಿನಂದನೀಯ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next