Advertisement

ಗೋಡ್ಸೆ ದೇಶದ್ರೋಹಿ ಎಂದು ಹೇಳಿ ನೋಡೋಣ

11:00 PM Mar 09, 2020 | Lakshmi GovindaRaj |

ವಿಧಾನಸಭೆ: “ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದೀರಿ. ಅದಕ್ಕೆ ನಾನು ಬೇಸರಪಟ್ಟುಕೊಳ್ಳುವುದಿಲ್ಲ. ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್‌ ಗೋಡ್ಸೆ ದೇಶದ್ರೋಹಿ ಎಂದು ನಿಮಗೆ ತಾಕತ್ತಿದ್ದರೆ ಹೇಳಿಬಿಡಿ ಸಾಕು. ನಾನು ನಿಮ್ಮನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಕಾಂಗ್ರೆಸ್‌ನ ಯು.ಟಿ.ಖಾದರ್‌ ಬಿಜೆಪಿಯ ಶಾಸಕ ಹರೀಶ್‌ ಪೂಂಜಾಗೆ ಸವಾಲು ಹಾಕಿದರು.

Advertisement

ಸಂವಿಧಾನದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಯು.ಟಿ.ಖಾದರ್‌ ಮಾತನಾಡುವಾಗ ಮಧ್ಯಪ್ರವೇಶಿಸಿದ ಹರೀಶ್‌ ಪೂಂಜಾ, ನೀವು ಬೆಂಕಿ ಹಚ್ಚುವ ಹೇಳಿಕೆ ಕೊಟ್ಟವರು ಎಂದು ದೂರಿದರು. ಅದಕ್ಕೆ ಖಾದರ್‌, ನೀವು ಏನೇನೋ ಮಾತನಾಡಬೇಡ, ನಿಮ್ಮ ಸಂಸದರೇ ಆ ಮಾತು ಹೇಳಿದ್ದು, ನಾನಲ್ಲ. ನನ್ನನ್ನು ದೇಶದ್ರೋಹಿ ಎಂದು ಹೇಳಿದ್ದೀರಿ, ನನಗೇನೂ ಬೇಸರವಿಲ್ಲ.

ಆದರೆ, ಗಾಂಧೀಜಿ ಕೊಂದ ನಾಥೂರಾಮ್‌ ಗೋಡ್ಸೆ ದೇಶದ್ರೋಹಿ ಎಂದು ಹೇಳು, ನಾನು ಒಪ್ಪುತ್ತೇನೆ ಎಂದರು. ಆಗ, ಬಿಜೆಪಿಯ ಅರಗ ಜ್ಞಾನೇಂದ್ರ ಸದಸ್ಯರನ್ನು ಏಕ ವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದರು. ಆಗ, ಖಾದರ್‌, ಅವನು ನನ್ನ ಸೋದರ ಇದ್ದಂತೆ. ಹೀಗಾಗಿ, ನಾನು ಏಕವಚನದಲ್ಲಿ ಮಾತನಾಡಿದರೆ ತಪ್ಪಿಲ್ಲ ಎಂದು ಹೇಳಿದರು.

ಮಾತು ಮುಂದುವರಿಸಿದ ಖಾದರ್‌, ಸಂವಿಧಾನದ ಆಶಯಗಳ ಪ್ರಕಾರ ನಾವು ಎಲ್ಲ ವರ್ಗದವರಿಗೆ ಸಮಾನತೆ, ಸಾಮಾಜಿಕ ನ್ಯಾಯ ಕೊಡಬೇಕಾಗಿದೆ. ಆದರೆ, ಅದನ್ನು ಕೊಟ್ಟಿದ್ದೀವಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಸಿಎಎ, ಎನ್‌ಪಿಆರ್‌ ಚರ್ಚೆ ನಡೆಯುತ್ತಿದೆ. ಸಿಎಎಯಿಂದ ಏನೂ ಆಗುವುದಿಲ್ಲ, ಎನ್‌ಪಿಆರ್‌ ಸಮಸ್ಯೆಯೊಡ್ಡುತ್ತದೆ. ಆದರೆ, ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next