Advertisement

ಅರಣ್ಯ ಉಳಿಸಿ ಬೆಳೆಸುವ ಕಾರ್ಯ ನಡೆಯಲಿ: ಸವದಿ

08:43 AM Jul 22, 2020 | Suhan S |

ತೇರದಾಳ: ಬೀಜದುಂಡೆಗಳ ಮೂಲಕ ಸಿಡತಾನ ಬಿತ್ತನೆ ಕಾರ್ಯಕ್ರಮವು ತೇರದಾಳ ಮತಕ್ಷೇತ್ರದಲ್ಲಿ ಯುವಕರಿಂದ ನಡೆದಿರುವುದು ಉತ್ತಮ ಕಾರ್ಯವಾಗಿದೆ. ಅರಣ್ಯ ಉಳಿಸಿ ಬೆಳೆಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ಯುವತಂಡವು ಹಮ್ಮಿಕೊಂಡ ಕೋಟಿ ವೃಕ್ಷ ಬೆಳೆಸುವ ಅಭಿಯಾನದಲ್ಲಿ ಬೀಜ ಬಿತ್ತನೆ ಮಾಡುವುದರ ಮೂಲಕ ಪಾಲ್ಕೊಂಡು ಅವರು ಮಾತನಾಡಿದರು. ಮಾನವನ ಜೀವನ ಆರೋಗ್ಯಪೂರ್ಣವಾಗಿರಬೇಕಾದರೆ ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ಹಸಿರು ಬೆಳೆಸುವ ಕಾರ್ಯ ನಡೆಯಲೇಬೇಕು. ಮುಂದಿನ ದಿನಗಳಲ್ಲಿ ಪರಿಸರ ಬೆಳವಣಿಗೆಗಾಗಿ ಯುವಕರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಾಗುವುದು. ಪರಿಸರ ಪ್ರಜ್ಞೆ ಎಲ್ಲರಲ್ಲೂ ಜಾಗೃತಗೊಳ್ಳಬೇಕು ಎಂದರು.

ಯುವ ಪರಿಸರವಾದಿ ನಂದು ಗಾಯಕವಾಡ ಮಾತನಾಡಿ, ಹುಬ್ಬಳ್ಳಿಯ ಯುವಕರಿಂದ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನವನ್ನು ನಮ್ಮ ಭಾಗದಲ್ಲೂ ಪಸರಿಸಲಾಗುತ್ತಿದೆ. ಹತ್ತು ಲಕ್ಷ ಬೀಜಗಳ ಬಿತ್ತನೆ ಕಾರ್ಯವು ಅಂತಿಮ ಹಂತಕ್ಕೆ ಬಂದಿದೆ. ಪರಿಸರ ರಕ್ಷಣೆಯೆ ಜೀವಿಗಳ ರಕ್ಷಣೆಯಾಗುತ್ತದೆ. ಅದುವೆ ಎಲ್ಲರ ಗುರಿಯಾಗಿರಬೇಕು ಎಂದರು. ಬಿಜೆಪಿ ಮುಖಂಡ ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ಮನ್ಷಿ, ಈಶ್ವರ ಹೂಗಾರ, ಸಿದ್ದು ಇರಳಿ, ಶ್ರೀಶೈಲ ಕೊಪ್ಪದ, ರವಿ ಕೋರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next