Advertisement

ಕನ್ನಡ ಶಾಲೆಗಳನ್ನು ಉಳಿಸೋಣ:ಅಭಯಚಂದ್ರ ಜೈನ್‌ 

11:51 AM Jan 01, 2018 | Team Udayavani |

ಮೂಡಬಿದಿರೆ: ಕನ್ನಡ ಶಾಲೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ 50 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾದಾನ ಮಾಡುತ್ತಿರುವ ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಗೆ ಕೂಡಲೇ ಅನುದಾನ ಒದಗಿಸಿಕೊಡುವುದಾಗಿ ಶಾಸಕ ಕೆ. ಅಭಯಚಂದ್ರ ಜೈನ್‌ ಹೇಳಿದರು.

Advertisement

ಸರ್ವೋದಯ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಸರ್ವೋದಯ ಪ್ರೌಢ ಶಾಲೆಯ ಸ್ಥಾಪನೆಗೆ ಕಾರಣರಾದ ಮಾಲ್ದಬೆಟ್ಟು ಶ್ರೀಧರ ಪಡಿವಾಳ್‌, ಎಸ್‌. ಎನ್‌. ಮೂಡಬಿದ್ರಿ, ಸ್ಥಾಪಕ ಮುಖ್ಯೋಪಾಧ್ಯಾಯ ಪಿ. ಗಣಪತಿ ಪ್ರಭು ಸಹಿತ ಶಿಕ್ಷಕರ ಶ್ರದ್ಧೆ, ಪರಿಶ್ರಮದಿಂದಾಗಿ ಸಮಾಜಕ್ಕೆ ಎಷ್ಟೋ ಮಂದಿ ಕೊಡುಗೆಯಾಗಿ ಒದಗಿಬಂದಿದ್ದಾರೆ’ ಎಂದು ಸ್ಮರಿಸಿಕೊಂಡರು. ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಉದ್ಘಾಟಿಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು ಉಪಸ್ಥಿತರಿದ್ದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಶಾಲಾ ಹಳೆ ವಿದ್ಯಾರ್ಥಿ, ಪುತ್ತೂರು ಸೈ. ಫಿಲೋಮಿನಾ ಚರ್ಚ್‌ನ ರೆ| ಫಾ| ಆಲ್ಫ್ರೆಡ್  ಪಿಂಟೋ ಶುಭಾಶಂಸನೆಗೈದರು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಶುಭ ಹಾರೈಸಿದರು. ಶಾಲಾ ಸಂಚಾಲಕ ಜಯಪ್ರಕಾಶ ದೇವಾಡಿಗ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ವಸಂತ ದೇವಾಡಿಗ ವರದಿ ವಾಚಿಸಿದರು. ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್‌ ಕುಮಾರ್‌ ಹೆಗ್ಡೆ ಪ್ರಸ್ತಾವನೆಗೈದರು.

ಜಯಶ್ರೀ ಸಂದೇಶ ವಾಚಿಸಿದರು. ಸದಾನಂದ ಪೂಜಾರಿ, ಶಂಕರ ನಾಯಕ್‌, ಧೀರಜ್‌ ಜೈನ್‌ ಬಹುಮಾನಿತರ ವಿವರ ನೀಡಿದರು. ನಿಕಟಪೂರ್ವ ಮುಖ್ಯೋಪಾಧ್ಯಾಯ ಎಸ್‌. ಪಶುಪತಿ ಶಾಸ್ತ್ರಿ ದಾನಿಗಳ ವಿವರ ಪ್ರಕಟಿಸಿದರು. ಗುರು ಎಂ.ಪಿ. ನಿರೂಪಿಸಿದರು.

ಸಮ್ಮಾನ
ನಿವೃತ್ತ ಶಿಕ್ಷಕರ ಪೈಕಿ ಪಿ. ಚಂದ್ರಶೇಖರ ಭಟ್‌, ಎಸ್‌. ಎಲ್‌. ಶೆಟ್ಟಿಗಾರ್‌, ಯಶೋದಾ ಬಾಯಿ, ಎನ್‌. ಎಸ್‌. ಭಂಡಾರಿ, ನರಸಿಂಹ ಎಂ., ಎಸ್‌.ಪಿ. ಶಾಸ್ತ್ರಿ, ನಿವೃತ್ತ ಶಿಕ್ಷಕೇತರ ಸಿಬಂದಿಗಳಾದ ರಮೇಶ ಭಟ್‌, ಜಗದೀಶ ರಾವ್‌, ರಮಾನಂದ ಮತ್ತು ಪೌಲ್‌ ಸೇರಾ ಅವರನ್ನು ಸಮ್ಮಾನಿಸಲಾಯಿತು. ಸಾಧಕ ಹಳೆವಿದ್ಯಾರ್ಥಿಗಳು ಹಾಗೂ
ದಾನಿಗಳನ್ನು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next