Advertisement

ನಾಡು-ನುಡಿ-ಸಂಸ್ಕೃತಿ ಉಳಿಸಿ ಬೆಳೆಸೋಣ: ದಂದಗೆ

05:28 PM Oct 29, 2021 | Team Udayavani |

ಬೀದರ: ನಮ್ಮ ನಾಡು-ನುಡಿ ಸಂಸ್ಕೃತಿಗೆ ದೊಡ್ಡ ಪರಂಪರೆ ಇದೆ. ಅದನ್ನು ಉಳಿಸಿ-ಬೆಳೆಸಲು ಕಟ್ಟುಬದ್ದರಾಗಬೇಕು. ಕರ್ನಾಟಕದಲ್ಲಿ ಏಕಕಾಲದಲ್ಲಿ ಕನ್ನಡ ಗೀತ ಗಾಯನ ಹಮ್ಮಿಕೊಂಡಿರುವುದು ಅಭಿಮಾನ. ಇಂದಿನ ಯುವ ಜನಾಂಗ ಎಚ್ಚೆತ್ತುಕೊಂಡರೆ ನಾಡಿನ ಸಂಸ್ಕೃತಿ ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನುಡಿದರು.

Advertisement

ನಗರದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಗುರುವಾರ “ಮಾತಾಡ್‌ ಮಾತಾಡ್‌ ಕನ್ನಡ’ ಕಾರ್ಯಕ್ರಮ ಅಂಗವಾಗಿ ತರಬೇತಿದಾರರಿಗೆ ಸಂಕಲ್ಪ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ಇಂದು ಜವಾಬ್ದಾರಿಯಿಂದ ಕನ್ನಡ ಮಾತಾನಾಡಿ. ಬರೆದರೆ ಅದು ಉಳಿಯುತ್ತದೆ. ಪ್ರೀತಿಯಿಂದ, ಸೌಹಾರ್ದದಿಂದ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುವ ಪಣತೋಡುವ ಸಂಕಲ್ಪ ಮಾಡೋಣ ಎಂದರು.

ಮೊದಲಿಗೆ ನಾಡಗೀತೆ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಸಾಮೂಹಿಕ ಗೀತೆ ಮೊಳಗಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು, ತರಬೇತಿದಾರರು ಪಾಲ್ಗೊಂಡು ಸಾಥ್‌ ನೀಡಿದರು. ಜಿಲ್ಲಾ ಐಟಿಐ ನೋಡಲ್‌ ಅಧಿಕಾರಿ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ, ತಂತ್ರಜ್ಞಾನದ ಕೌಶಲತೆ ಜೊತೆಗೆ ಕನ್ನಡದ ಬೆಳಕು ಪ್ರಜ್ವಲಿಸಲಿ. ಅನೇಕ ಸಂದರ್ಭಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಕನ್ನಡ ಬೆಳೆಸಿರಿ. ಕನ್ನಡ ಬೆಳೆದರೆ ನಾವು ಬೆಳೆದಂತೆ, ಇದು ತಾಯಿ ಭಾಷೆ. ಸಂಸ್ಕೃತಿ ಹಾಳಾದರೆ ಜನಾಂಗ ಹಾಳಾದಂತೆ. ಇದರ ಸಂರಕ್ಷಣೆಗಾಗಿ ನಾವು ಕಟ್ಟಿ ಬದ್ದರಾಗೋಣ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next