ಬೆಂಗಳೂರು: ಕನ್ನಡ ಪತ್ರಿಕೆಗಳನ್ನು ಓದುವು ದರ ಜತೆಗೆ ಕನ್ನಡ ನಾಟಕ, ಕನ್ನಡದ ಸಿನಿಮಾಗಳನ್ನು ನೋಡುತ್ತಾ ಕನ್ನಡ ಭಾಷೆ ಮತ್ತು ಸಂಸ್ಕೃತಿ ಯನ್ನು ಮತ್ತಷ್ಟು ಬೆಳೆಸೋಣ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು. “ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗ ವಾಗಿ ಜಯನಗರದ ಚಂದ್ರಗುಪ್ತ ಮೌರ್ಯ (ಶಾಲಿನಿ)ಆಟದ ಮೈದಾನದಲ್ಲಿ ಗುರುವಾರ ನಡೆಯದ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆ ಕನ್ನಡದ ಸಂಸ್ಕೃತಿ ಹಾಗೂ ಕನ್ನಡ ನಡವಳಿಕೆ ಈ ಮೂರು ಕೂಡ ಕನ್ನಡದ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ ಎಂದರು. ಒಂದು ಲಕ್ಷ ಕಂಠದ ಗಾಯನದ ಕಾರ್ಯ ಕ್ರಮದಲ್ಲಿ ಸುಮಾರು 5 ಲಕ್ಷ ಜನರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆಯಿತ್ತು.
ಆದರೆ ನಿರೀಕ್ಷೆಗೂ ಮೀರಿ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಕನ್ನಡ ಸಾಮೂಹಿಕ ಗೀತೆಗಳ ಗಾಯನ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದಾರೆ ಈ ಮೂಲಕ ಕನ್ನಡದ ಪ್ರೇಮವನ್ನು ಬಹು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡಿ ದ್ದಾರೆ ಇದು ಸಂತಸ ಪಡುವ ಸಂಗತಿಯಾಗಿದೆ ಎಂದು ತಿಳಿಸಿದರು. ನಮ್ಮ ಮನೆಗಳಲ್ಲಿ ಕನ್ನಡ ಮಾತನಾಡೋಣ, ಸ್ನೇಹಿತರ ಜತೆಗೆ ಕನ್ನಡ ಮಾತ ನಾಡೋಣ ಹಾಗೆಯೇ ಕನ್ನಡದ ಹಾಡುಗಳನ್ನು ಉಳಿದವರಿಗೆ ಕಲಿಸೋಣ ಆ ಮೂಲಕ ಕನ್ನಡ ಸಂಸ್ಕೃತಿ, ಕನ್ನಡದ ನಡವಳಿಕೆ ಮತ್ತು ಕನ್ನಡದ ಭಾಷೆಯನ್ನು ಬೆಳೆಸೋಣ ಎಂದು ಹೇಳಿದರು.
ಇದನ್ನೂ ಓದಿ;- ರೌಡಿಕೊಲೆ: 11 ಮಂದಿ ಬಂಧನ
ಕನ್ನಡ ರಾಜ್ಯೋತ್ಸವ ಒಂದು ಕಾರ್ಯಕ್ರಮ ಅಲ್ಲ ರಾಜ್ಯೋತ್ಸವ ಎಂಬುವುದು ನಮ್ಮ ನಡವಳಿಕೆಯಲ್ಲಿ ನಿರ್ಮಾಣವಾಗ ಬೇಕು.ನಮ್ಮ ಮನೆಗಳಲ್ಲಿ ಮೂಡಿಬರಬೇಕು ಆ ರೀತಿಯ ಪ್ರಯತ್ನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವತ್ತು ಆರಂಭ ಮಾಡಿದೆ.ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗೋಣ ಎಂದು ತಿಳಿಸಿದರು. ಕನ್ನಡದ ಹಾಡು ಅಂದಾಗ ಕುಣಿದು ಕುಪ್ಪಳಿಸಿದ್ದೀರಿ ವಿಧಾನ ಸೌಧದ ಮೆಟ್ಟಿಲಿನಿಂದ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಜನರು ಕನ್ನಡ ಸಾಮೂಹಿ ಗೀತಗಾಯನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದಾರೆ. ಅದಕ್ಕಾಗಿ ಧನ್ಯವಾದ ಕನ್ನಡದ ಜತೆಗೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಕನ್ನಡ ಪ್ರೀತಿ ಅಕ್ಟೋಬರ್‌ನಿಂದಲೆ ಹಬ್ಬಿದೆ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪ್ರತಿ ಸಲ ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್ ಅವರ ಪ್ರಯತ್ನದಿಂದಾಗಿ ಈ ವರ್ಷ ಅಕ್ಟೋಬರ್ ನಿಂದಲೇ ಕನ್ನಡದ ಜ್ವರ,ಕನ್ನಡದ ಪ್ರೀತಿ ಈಗಾಗಲೇ ಹಬ್ಬಿದೆ ಎಂದರು.