Advertisement

Congress meeting ಎರಡೂವರೆ ವರ್ಷ ಬಳಿಕ ಸಚಿವ ಸ್ಥಾನ ತೊರೆಯೋಣ: ಸಚಿವ ಕೆ.ಎಚ್‌. ಮುನಿಯಪ್ಪ

11:30 PM Aug 14, 2023 | Team Udayavani |

ಬೆಂಗಳೂರು: ಎರಡೂವರೆ ವರ್ಷಗಳ ಬಳಿಕ ಈಗಿರುವ ಎಲ್ಲ 32 ಸಚಿವರ ಬದಲಾವಣೆ ಆಗಬೇಕು. ಆ ಮೂಲಕ ಬೇರೆಯವರಿಗೂ ಅವಕಾಶ ಸಿಗುವಂತಾಗಬೇಕು ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಸೋಮ ವಾರ ಕಾಂಗ್ರೆಸ್‌ ಸಮಿತಿ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಆಯ್ಕೆ ಹೈಕಮಾಂಡ್‌ ತೀರ್ಮಾನವಾಗಿದ್ದು, ಅಲ್ಲಿ ಅಂತಿಮಗೊಳ್ಳುತ್ತದೆ. ಅದನ್ನು ಹೊರತುಪಡಿಸಿ, ಸರಕಾರಕ್ಕೆ ಎರಡೂವರೆ ವರ್ಷಗಳು ಪೂರೈಸಿದ ಬಳಿಕ ನಾನೂ ಸಹಿತ ಎಲ್ಲ 32 ಸಚಿವರ ಬದಲಾವಣೆ ಆಗಬೇಕು. ಇದರೊಂದಿಗೆ ಪಕ್ಷದ ಗೆಲುವಿಗೆ ದುಡಿದ ಉಳಿದವ ರಿಗೆ ಅವಕಾಶ ನೀಡಬೇಕು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಅವರು ಕೂಡ ಮುನಿಯಪ್ಪ ಮಾತಿಗೆ ದನಿಗೂಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಮಾತನಾಡಿ, ಮುಂದಿನ ದಿನಗಳಲ್ಲಿ ಕೆಪಿಸಿಸಿಯಲ್ಲೂ ಬದಲಾವಣೆ
ಮಾಡಬೇಕಾಗುತ್ತದೆ. ಕೆಲವು ಮಂತ್ರಿಗಳನ್ನು ಬದಲಾಯಿಸಬೇಕಾಗುತ್ತದೆ. ಪಕ್ಷಕ್ಕೆ ಕೊಡುಗೆ ನೀಡದವರನ್ನು ಬದ ಲಾಯಿಸಲೇಬೇಕಾಗುತ್ತದೆ. ಬ್ಲಾಕ್‌ ನಿಂದ ಜಿಲ್ಲಾ ಹಾಗೂ ಕೆಪಿಸಿಸಿ ಮಟ್ಟದ ವರೆಗೂ ಈ ಪ್ರಕ್ರಿಯೆ ನಡೆಯಲಿದೆ ಎಂಬ ಸುಳಿವು ನೀಡಿದರು.

ಪ್ರತಿ ಜಿಲ್ಲೆಯ ಶಾಸಕರಿಗೆ ನೀಡಿದಂತೆಯೇ ಪಕ್ಷದ ಜಿಲ್ಲಾ ಪದಾಧಿ ಕಾರಿಗಳಿಗೂ ಪ್ರತ್ಯೇಕ ಸಮಯ ನಿಗದಿಪಡಿಸಿ, ನಿಯಮಿತವಾಗಿ ಅಹವಾಲು ಸ್ವೀಕಾರ ಸಹಿತ ಸಮಾಲೋಚನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.

Advertisement

ಮಾಜಿ ಸಿಎಂ ವೀರಪ್ಪ ಮೊಲಿ, ಸಚಿವರಾದ ದಿನೇಶ್‌ ಗುಂಡೂರಾವ್‌, ರಾಮಲಿಂಗಾ ರೆಡ್ಡಿ, ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಕೆ. ರೆಹಮಾನ್‌ ಖಾನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next