Advertisement

Maharashtra ಕೋಟೆಗಳ ಇತಿಹಾಸವನ್ನು ತಿಳಿಯೋಣ!

01:24 PM Oct 11, 2024 | Team Udayavani |

ಮುಂಬಯಿ/ಬೆಂಗಳೂರು: ಮಹೋನ್ನತ ಇತಿಹಾಸ ಮತ್ತು ಸಂಸ್ಕೃತಿಯ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ 350ಕ್ಕೂ ಅಧಿಕ ಇತಿಹಾಸಪ್ರಸಿದ್ಧ ಕೋಟೆಗಳಿದ್ದು, ಅವುಗಳಿಗೆ ಯಾನ ಕೈಗೊಳ್ಳಲು ಸಾರ್ವಜನಿಕರಿಗೆ ಅವಕಾಶವಿದೆ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

Advertisement

ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಅವರ ಮರಾಠ ಅರಸೊತ್ತಿಗೆಯಿಂದ ನಿರ್ಮಾಣಗೊಂಡಿರುವ ಈ ಕೋಟೆಗಳು ವಾಸ್ತುಶಿಲ್ಪದ ವೈಭವಗಳಾಗಿವೆ.

ವರ್ತಮಾನದಲ್ಲಿ ಇತಿಹಾಸವನ್ನು ಅನುಭವಿಸಿ
ಸಿಂಧುದುರ್ಗ ಕೋಟೆ: ಛತ್ರಪತಿ ಶಿವಾಜಿ ಅವರಿಂದ 17ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಕೋಟೆ ಮರಾಠಾ ಕ್ಷಾತ್ರ ತೇಜಸ್ಸಿಗೆ ಒಂದು ಉದಾಹರಣೆಯಾಗಿ ನಿಂತಿದೆ. ಮರಾಠಾ ಕಾಲದ ನೌಕಾನೆಲೆಯೂ ಇಲ್ಲಿದೆ.

ಮುರುಡ್‌ ಜಂಜೀರಾ: ಮುಂಬಯಿಯಿಂದ 165 ಕಿ.ಮೀ. ದೂರದಲ್ಲಿ ಇರುವ ಈ ಕೋಟೆಯು ಹತ್ತು ಹಲವು ಫಿರಂಗಿ ನೆಲೆಗಳನ್ನು ಹೊಂದಿದೆ.

ವಿಜಯದುರ್ಗ ಕೋಟೆ: ಪೂರ್ವದ ಜಿಬ್ರಾಲ್ಟರ್‌ ಎಂದೇ ಹೆಸರಾಗಿರುವ ಈ ಮಹೋನ್ನತ ಕೋಟೆಯನ್ನು ಛತ್ರಪತಿ ಶಿವಾಜಿಯವರು ಸ್ವತಃ ಹೋರಾಡಿ ಗೆದ್ದುಕೊಂಡಿದ್ದರು. ಇದರ ಸಂಬಂಧವಾಗಿ ನಡೆದ ಕದನವು ಮರಾಠಾ ಇತಿಹಾಸದಲ್ಲಿ ಒಂದು ಗಮನಾರ್ಹ ಘಟನೆಯಾಗಿದೆ.

Advertisement

 

ಹಾಗೆಯೇ ಶಿವನೇರಿ ಕೋಟೆ ಛತ್ರಪತಿ ಶಿವಾಜಿಯವರ ಜನ್ಮಸ್ಥಳವಾಗಿದೆ. ಸಿಂಹಗಢ ಕೋಟೆಯು ಸಮುದ್ರ ಮಟ್ಟಕ್ಕಿಂತ 1,316 ಮೀ. ಎತ್ತರದಲ್ಲಿದ್ದು, ಇಲ್ಲಿಂದ ಸುತ್ತಲಿನ ಸಮುದ್ರ ಮತ್ತು ಭೂದೃಶ್ಯಗಳನ್ನು ವೀಕ್ಷಿಸುವುದು ಒಂದು ರೋಮಾಂಚಕಾರಿ ಅನುಭವವಾಗಿದೆ. ಪ್ರತಾಪಗಢ ಕೋಟೆಯನ್ನು ಕ್ರಿ.ಶ. 1656-58ರಲ್ಲಿ ನಿರ್ಮಿಸಲಾಗಿದ್ದು, ಎರಡು ಸುತ್ತಿನ ಗೋಡೆಗಳನ್ನು ಹೊಂದಿದೆ. ನೀವು ಸಾಹಸಮಯ ಪ್ರವಾಸವನ್ನು ಬಯಸುವವರಾಗಿದ್ದರೆ ಮಹಾರಾಷ್ಟ್ರದ ಅತೀ ಪುರಾತನ ಕೋಟೆಯಾಗಿರುವ ಲೋಹಗಢ ಕೋಟೆಯ ಯಾನ ನಿಮ್ಮನ್ನು ಸೆಳೆಯದಿರದು. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಅಥವಾ www.maharashtratourism.gov.in  ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next