Advertisement

ಜವಾಬ್ದಾರೀನ ಹಂಚ್ಕೊಳ್ಳೋಣ ಪ್ರೀತಿಗೆ ಜೈ ಅನ್ನೋಣ…

06:30 AM Feb 20, 2018 | |

ಆ ದೊಡ್ಡ ಕೋಟೆ ಹತ್ತೋವಾಗ ನಾವಿಬ್ರೂ ಒಟ್ಟೊಟ್ಟಿಗೆ ಇಟ್ಟ ಹೆಜ್ಜೆ ಜನ್ಮಪೂರ್ತಿ ನೆನಪಿರೋದು. ನಮ್ಮಿಬ್ರ ನಡುವೆ ಯಾರಾದ್ರೂ ಬಂದ್‌ ಕೂಡ್ಲೆ ನಾವಿಬ್ರೂ ಸಾಹಸಪಟ್ಟು ಅವ್ರಿಗೇ ಗೊತ್ತಾಗದ ಹಾಗೆ ಮತ್ತೆ ಫಾಸ್ಟ್‌ ಆಗಿ ನಡೆದು ಮುಂದೆ ಒಟ್ಟಾಗ್ತಿದ್ದಿದ್ದು ಒಳ್ಳೇ ಮಜಾ ಕೊಡ್ತಿತ್ತು. 

Advertisement

ಪ್ರವಾಸ ಅನ್ನೋದು ಎಷ್ಟೊಂದು ಆಹ್ಲಾದಕರ ಭಾವ ಕೊಡುತ್ತೆ ಅಲ್ವಾ? ಪ್ರವಾಸಕ್ಕೆ ಗಂಟುಮೂಟೆ ಕಟ್ಟೋದು, ಹೋಗುವಾಗ ದಾರಿಯ ಆಚೀಚೆ ನೋಡ್ತಾ ತಂಗಾಳಿಗೆ ಮುಖಕೊಟ್ಟು ಮಲಗಿ ಪ್ರೀತಿಸಿದ ಜೀವವನ್ನ ನೆನೆಸಿಕೊಳ್ಳೋದು. ಹೊಸ ಜಾಗ, ಹೊಸ ಜನ, ಅಲ್ಲಿನ ಜೀವನ, ಎಲ್ಲವೂ ಸೇರಿ ಬದುಕಲ್ಲಿ ಯಾವ ತರಗತಿಯೂ ಕಲಿಸದೇ ಇರೋ ಪಾಠ ಕಲ್ಸುತ್ತೆ ಅಲ್ವಾ? ಆದ್ರೆ, ಆ ಪ್ರವಾಸದಲ್ಲಿ ಪ್ರೀತಿಸಿದ ಜೀವ ಪಕ್ಕದಲ್ಲೇ ಉಸಿರಾಡ್ತಾ ಇದ್ರೆ ಅದ್ರಲ್ಲಿ ಸಿಗೋ ಸುಖ ಬೇರೆ ಯಾವುದರಲ್ಲೂ ಇರಲ್ಲ ಅಂತ ನಿನೊjತೆ ದೂರದೂರಿಗೆ ಪ್ರಯಾಣ ಬೆಳೆಸಿದಾಗ್ಲೆ ಗೊತ್ತಾಗಿದ್ದು.

ಬೆಳ್ಳಂಬೆಳಗ್ಗೆ ಚಳಿ ಆಗ್ತಾ ಇರೋ ಹೊತ್ನಲ್ಲೇ ಒಂದ್ಕಡೆ ಆ ಘಟ್ಟಹತ್ತೋ ಭಾಗ್ಯ ಪಡೀತಾ, ಇನ್ನೊಂದ್‌ ಕಡೆ ನಿನ್ನ ಸಾಂಗತ್ಯ ಪಡೆದ ಅದೃಷ್ಟಶಾಲಿ ನಾನು. ಮೊದ್ಲು ನಿನ್‌ ಫ್ರೆಂಡ್ಸ್‌ ಜೊತೇನೇ ಕಾಲ ಕಳª ನೀನು, ಆಮೇಲೆ ನೇರಾಗಿ ಯಾರ್‌ ಭಯಾನೂ ಇಲೆªà ನನ್‌ ಪಕ್ಕಾನೇ ಬಂದ್‌ ಕೂತಾಗ ಖುಷಿ ಆಯ್ತು. ಅಲ್ಲಿ ನಿನ್‌ ಫ್ರೆಂಡ್ಸ್‌ ಎಲ್ರೂ ಅವ್ರವ್ರ ಲೋಕದಲ್ಲಿ ಇರೋವಾಗ, ನೀನ್‌ ತಿಂತಿದ್‌ ಐಸ್‌ಕ್ರೀಂನ ನನ್‌ ಬಾಯಿಗೆ ತುರುಕಿ “ಪ್ಲೀಸ್‌, ಟೇಸ್ಟ್‌ ಮಾಡಿ’ ಅನ್ನೋವಾಗ “ಅಯ್ಯೋ ಹುಚ್ಚು ತರಲೆ’ ಅಂತ ಮನಸ್ಸು ಹೇಳ್ತು. ಆಮೇಲೆ ಬಸ್ಸಲ್ಲಿ ನನ್‌ ಪಕ್ಕಾನೇ  ಅದೂ ಇದೂ ಮಾತಾಡ್ತಾ,

ಹರಟಾ¤ ಕೂತಾಗ, ಊರ್ತುಂಬ ಓಡಾಡ್ತಿದ್ದ ಆ ನಿನ್ನ ತಲೆಕೂದ್ಲು ಎಳ್ಕೊಂಡು ನನ್‌ ಮುಖಕ್ಕೆ ಹರವಿ ಕಚಗುಳಿ ಅನುಭವಿಸ್ಬೇಕು ಅನ್ಸಿದ್ದು ಸುಳ್ಳಲ್ಲ. ಅದ್ರ ನಡುವೆ ಆ ದೊಡ್ಡ ಕೋಟೆ ಹತ್ತೋವಾಗ ನಾವಿಬ್ರೂ ಒಟ್ಟೊಟ್ಟಿಗೆ ಇಟ್ಟ ಹೆಜ್ಜೆ ಜನ್ಮಪೂರ್ತಿ ನೆನಪಿರೋದು. ನಮ್ಮಿಬ್ರ ನಡುವೆ ಯಾರಾದ್ರೂ ಬಂದ್‌ ಕೂಡ್ಲೆà ನಾವಿಬ್ರೂ ಸಾಹಸಪಟ್ಟು ಅವ್ರಿಗೇ ಗೊತ್ತಾಗದ ಹಾಗೆ ಮತ್ತೆ ಫಾಸ್ಟ್‌ ಆಗಿ ನಡೆದು ಮುಂದೆ ಒಟ್ಟಾಗ್ತಿದ್ದಿದ್ದು ಒಳ್ಳೇ ಮಜಾ ಕೊಡ್ತಿತ್ತು.

ಜೊತೆಗೇ ಕಳುª ಗಂಟೆ ಆದ್ರೂ ಅದು ನಿಮಿಷದ ಥರ ಕಾಣಿ ಊಟಕ್ಕೆ ನಿಲ್ಸೊà ಜಾಗಕ್ಕೆ ಬಂದಾಗ ನಾನು ಬಾಯ್ಬಿಟ್ಟು, “ಪ್ಲೀಸ್‌ ಸಂಜೆವರೆಗೂ ನನ್‌ ಜೊತೆನೇ ಕೂತ್ಕೊ’ ಅಂತ ಹೇಳೆಬೇಕಾಯ್ತು. ಅಂತೂ ನೀನು ನಿನ್‌ ಬ್ಯಾಗ್‌ ನನ್‌ ಪಕ್ಕದ ಸೀಟಲ್ಲಿ ಇಟ್ಟಾಗ್ಲೆà ಮನ್ಸಿಗೆ ಒಂದಿಷ್ಟು ಸಮಾಧಾನ ಅಂತ ಆಗಿದ್ದು. ಹಾಗೋ ಹೀಗೋ ನಾವು ಬರೆಲàಬಾರ್ದು ಅಂತ ಅಂದ್ಕೊಂಡ್‌ ಸಾಯಂಕಾಲ ಬಂದೇ ಬಿಡು.

Advertisement

ನೀನೋ ಒಳ್ಳೇ ಮಂಕು ಬಡ್‌ª ಹಾಗೆ ಕೂತಿದ್ದೆ. ಆದ್ರೆ ಬೆಳಿಗ್ಗೆ ದೂರದೂರ ಕೂತಿದ್ದ ನಾವು ಸಂಜೆ ಆಗೋದೊಳ್ಗೆ ಆ ಜಾಗ ತುಂಬಾ¤ ನನ್‌ ಭುಜಕ್ಕೆ ನೀನ್‌ ಒರೊ ಮಟ್ಟಕ್ಕೆ ಹತ್ರ ಆದ್ಯಲ್ಲ ಅದೇ ಆ ಪ್ರವಾಸದ ವಿಶೇಷ. ಮುಂದೆ ಲೈಫಿನ ಟ್ರಿಪ್‌ನಲ್ಲಿ ನಾವಿಬ್ರೂ ಜೊತೆಯಾದ್ರೆ ಈ ಜನ್ಮದಲ್ಲೇ ಸ್ವರ್ಗಾ ಕಾಣಿ¤àವಲ್ಲ ಅಂತೆಲ್ಲಾ ನಾನು ಯೋಚೆ° ಮಾಡಿºಟ್ಟೆ. ಆನಂತರದಲ್ಲಿ ಹುಟ್ಕೊಂಡ ಒಂದಿಷ್ಟ್ ಹೊಸ ಕನಸನ್ನ ಹೇಳ್ತೀನಿ ಕೇಳು ಪ್ಲೀಸ್‌. 

ನಿನ್ನನ್ನ ನನ್ನಿಷ್ಟದ ಅಮೃತಸರಕ್ಕೆ ಕರೊRಂಡ್‌ ಹೋಗ್ಬೇಕು. ಅಲ್ಲಿನ ಸ್ವರ್ಣಮಂದಿರದ ಕೊಳದಲ್ಲಿರೋ ನೀರನ್ನ ನಿನ್‌ ತಲೆಮೇಲೆ ಚಿಮುಕ್ಸಿದಾಗ ನೀನು ನಾಲಿಗೆ ಹೊರಚಾಚಿ ನಿನ್‌ ಹಳೇ ಸ್ಟೈಲಲ್ಲಿ ಕಣ್‌ ಹೊಡೀಬೇಕು! ಆಮೇಲೆ ನಿನ್ನಿಷ್ಟದ ತಾಜ್‌ಮಹಲ್‌ನಲ್ಲಿ ರೊಮ್ಯಾಂಟಿಕ್‌ ಆಗಿ ನಾನ್‌ ನಿಂಗೆ ಪ್ರಪೋಸ್‌ ಮಾಡ್ಬೇಕು. ನೀನು ಸರಿಯಾಗಿ ಸತಾಯ್ಸಿ ಆಮೇಲೆ ಒಪ್ಕೊಂಡು ನನ್ನ ಪೂರ್ತಿ ಮುದ್ದು ಮಾಡ್ಬೇಕು! ಅಲ್ಲಿಂದ ಮೇಘಾಲಯದ ಮೋಡ,

ಕೊನಾರ್ಕ್‌ನ ಸೂರ್ಯದೇವಾಲಯ, ರಾಮೇಶ್ವರಂ, ಕನ್ಯಾಕುಮಾರಿ, ಮುನ್ನಾರ್‌ ಎಲ್ಲಾ ನೋಡ್ಕೊಂಡು ಮತ್ತೆ ನಮ್ಮೂರಿಗೆ ವಾಪಸಾಗ್ಬೇಕು. ಹ್ಞಾಂ, ಪ್ರತಿ ಹೊಸ ಜಾಗ ನೋಡಿದ್‌ ಮೇಲೂ ಕಡ್ಡಾಯವಾಗಿ ನಂಗೆ ಕನಿಷ್ಠ ಒಂದು ಪಪ್ಪಿ ಬೇಕು, ಕಾಂಪ್ಲಿಮೆಂಟರಿ ಅಂತ ಎಷ್ಟ್ ಬೇಕಾದ್ರೂ ಕೊಡೊದು! ನಮ್ಮಿಬ್ರ ಪ್ರೀತಿಗೆ ಒಂದು ವರ್ಷ ಕಳೀತು. ಇದೇ ಖುಷೀಲಿ ದೂರದ್‌ ಯಾವಾªದ್ರೂ ಟ್ರಿಪ್ಪಿಗೆ ಹೋಗಿ ಬರೋಣ್ವ? ಈ ಬಾಳಪ್ರವಾಸದಲ್ಲಿ ನಗು, ಅಳು, ಖುಷಿ, ಬೇಜಾರು, ಕಾಳಜಿ, ಪ್ರೀತಿ, ಜವಾಬ್ದಾರಿ ಎಲ್ಲಾನೂ ಹಂಚ್ಕೊಂಡು ಬದುಕನ್ನು ಸಾರ್ಥಕ ಮಾಡ್ಕೊಳ್ಳೋಣ. 

* ಅರ್ಜುನ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next