ಕೇಪು: ಹೆತ್ತವರು ಮಕ್ಕಳನ್ನು ತಿದ್ದುವ ನೆಪದಲ್ಲಿ ಅವರ ಆತ್ಮಸ್ಥೈರ್ಯ ವನ್ನು ಕುಗ್ಗಿಸುವಂತಾಗಬಾರದು. ಎಲ್ಲರ ಮುಂದೆ ಬುದ್ಧಿ ಹೇಳುವ ಸಂದರ್ಭ ಹೀಯಾಳಿಸಬಾರದು. ಪ್ರತೀ ಹಂತದಲ್ಲಿಯೂ ಮಕ್ಕಳನ್ನು ಪ್ರೇರೇಪಿಸುವಂತ ಬುದ್ಧಿಮಾತುಗಳು ವ್ಯಕ್ತವಾಗಬೇಕು ಎಂದು ಮಂಗಳೂರು ಗೋಕರ್ಣನಾಥೇಶ್ವರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೆ.ಪಿ. ನಾಗರಾಜ್ ಹೇಳಿದರು.
ಕೇಪು ಮೈರ ಶ್ರೀ ದುರ್ಗಾ ಮಿತ್ರ ವೃಂದದ ವಾರ್ಷಿಕೋತ್ಸವ, ಸಮ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಕಾರ್ಯ ದರ್ಶಿ ಚಂದ್ರಶೇಖರ ಭಟ್ ಎಸ್. ಅವರು ಮಾತನಾಡಿ, ಶ್ರೀ ದುರ್ಗಾ ಮಿತ್ರ ವೃಂದವು ಸಮಾಜಮುಖೀ ಕೈಂಕರ್ಯದಲ್ಲಿ ತೊಡಗಿ ಸಿಕೊಂಡಿರುವುದು ಶ್ಲಾಘನೀಯ. ಶಿಸ್ತು, ಕ್ರಿಯಾಶೀಲ ಚಟುವಟಿಕೆಗಳಿಂದ ಈ ಸಂಸ್ಥೆ ಉನ್ನತ ಸ್ಥಾನವನ್ನು ಗಳಿಸಿದೆ ಎಂದರು.
ಗೌರವಾಧ್ಯಕ್ಷ ಜಗಜ್ಜೀವನ್‌ರಾಮ್ ಶೆಟ್ಟಿ, ಸ್ಥಾಪಕ ಸದಸ್ಯ ವಿಜಯಕುಮಾರ್ ಮೈರ, ಉಪಾಧ್ಯಕ್ಷ ಉಮೇಶ್ ಕಲ್ಲಪಾಪು, ಪುರುಷೋತ್ತಮ ಗೌಡ ಕಲ್ಲಂಗಳ, ರಾಜೇಶ್ ಕರವೀರ, ಕಾರ್ಯದರ್ಶಿ ಯರಾದ ಸತೀಶ್ ಕೇಪು, ನಿರಂಜನ್ ಕಲ್ಲಪಾಪು, ಕ್ರೀಡಾ ಕಾರ್ಯದರ್ಶಿ ಗಿರೀಶ್ ಕಲ್ಲಪಾಪು, ಜಗದೀಶ್ ಮೈರ, ಭರತ್ ಮೈರ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಸಂತೋಷ್ ಕರವೀರ, ಸೇಸಪ್ಪ ನಾಯಕ್ ಕಲ್ಲಪಾಪು, ಅಶೋಕ್ ಕರವೀರ, ಸಂಘ ಟನ ಕಾರ್ಯದರ್ಶಿಗಳಾದ ಬಾಲಕೃಷ್ಣ ಪೆಲತ್ತಡಿ, ಪದ್ಮನಾಭ ಕಲ್ಲಂಗಳ, ಬಾಲಕೃಷ್ಣ ಮೈರ, ಮೋನಪ್ಪ ಕುಲಾಲ್ ಮೈರ, ಸಿದ್ದೀಕ್ ಸಿ.ಎಂ.ಅಡ್ಯನಡ್ಕ ಉಪಸ್ಥಿತರಿದ್ದರು.
ವೃಂದದ ಅಧ್ಯಕ್ಷ ಅಶೋಕ್ ಎ. ಇರಾಮೂಲೆ ಸ್ವಾಗತಿಸಿ, ಶೀನ ನಾಯ್ಕ ಕಲ್ಲಪಾಪು ಸಮ್ಮಾನಪತ್ರ ವಾಚಿಸಿದರು. ತೇಜಸ್ ಎ.ಕೆ. ಆಶಯಗೀತೆ ಹಾಡಿದರು. ಸುರೇಶ್ ನಾಯ್ಕ ಕೋಡಂದೂರು ವರದಿ ಮಂಡಿಸಿದರು. ಮಹಮ್ಮದ್ ಹ್ಯಾರಿಸ್, ಮನೀಶ್ ಎಂ., ಶ್ರವಣ್ ಆಚಾರ್ಯ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಪುರುಷೋತ್ತಮ ಮೈರ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ ನಿರೂಪಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಅಂಗನವಾಡಿ, ಸ್ಥಳೀಯ ಶಾಲೆಗಳ ಮಕ್ಕಳಿಂದ ನೃತ್ಯ ವೈವಿಧ್ಯ, ಮೈರ ಪುಗರ್ತೆ ಕಲಾವಿದರಿಂದ “ಅರ್ಥ ಆಪುಜಿ’ ತುಳು ಹಾಸ್ಯಮಯ ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮ್ಮಾನ, ಪ್ರತಿಭಾ ಪುರಸ್ಕಾರ
ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಕೇಪು ಗ್ರಾಮದ ಪ್ರತಿಭಾವಂತರಾದ ವಿಶ್ರುತ್, ಶಾರದಾ ಎನ್.ಕೆ., ಎಂ.ಬಿ. ಆಶ್ರಿತಾ, ಸ್ತುತಿ ಎ.ಎಸ್., ತೃಪ್ತಿ, ದೀಕ್ಷಿತ್ ಕುಮಾರ್, ಯಶಸ್ವಿ, ಚೇತನ್ ಪಿ., ಮನೀಶ್ ಎಂ., ವರುಣ್ ಆಚಾರ್ಯ, ರೂಪಾ, ರಶ್ಮಿ ಎಸ್.ಜಿ., ರೇಖಾ, ಶ್ರವಣ್ ಆಚಾರ್ಯ, ತೇಜಸ್ ಎ.ಕೆ., ಗಾಯತ್ರಿ, ಜಯಪ್ರಕಾಶ್, ಶಿವಪ್ರಸಾದ್, ಭೂಮಿಕಾ, ನಮಿತಾ ಅವರನ್ನು ಪುರಸ್ಕರಿಸಲಾಯಿತು. ಶ್ರೀ ದುರ್ಗಾ ಕ್ರಿಯೇಶನ್ಸ್ ಲಾಂಛನದಲ್ಲಿ ಅಭಿಸಾಯ ನಿರ್ಮಾಪಕತ್ವದಲ್ಲಿ ನಿತಿನ್ ಹೊಸಂಗಡಿ ರಚಿಸಿ ನಿರ್ದೇಶಿಸಿದ ತುಳು ಕಿರುಚಿತ್ರ ಒಂಜಿ ನಿಮಿಷವನ್ನು ಕೆ.ಪಿ.ನಾಗರಾಜ್ ಅವರು ಬಿಡುಗಡೆಗೊಳಿಸಿದರು.