“ನೀವು’, “ನೀವು’ ಎನ್ನುತ್ತಾ ಪರಿಚಯವಾದವರು, ಸ್ವಲ್ಪ ಹೊತ್ತಿಗೇ ನೀನು ಗೆ ಶಿಫ್ಟ್ ಆದೆವು. ನೀವು ಯೋಧ ಎಂದು ತಿಳಿದಾಗ, ನನಗೆ ಆದ ಸಂಭ್ರಮವನ್ನು ಹೇಗೆ ವಿವರಿಸಿಲಿ?
ನಮ್ಮಿಬ್ಬರ ಪರಿಚಯವಾಯ್ತಲ್ಲ; ಆ ಸಂದರ್ಭವೇ ಒಂದು ಆಕಸ್ಮಿಕ. ನಾನು ಮಲೆನಾಡಿನವಳಾದರೆ, ನೀನು ಬಯಲುಸೀಮೆಯವನು. ನಮ್ಮಿಬ್ಬರ ಪರಿಚಯ ಹೀಗೂ ಆಗಬಹುದೆಂದು ನಾನು ಕನಸೂ ಕಂಡಿರಲಿಲ್ಲ. ನಾವವತ್ತು ಮಲೆನಾಡಿನ ಕಡೆಗೆ ಹೊರಟಿದ್ದೆ, ಮಾರ್ಗ ಮಧ್ಯದಲ್ಲಿ ಬಸ್‌ಗೆ ಅದೇನಾಯಿತೋ ಗೊತ್ತಿಲ್ಲ. ನಿಂತ ಬಸ್ಸು ಮತ್ತೆ ಚಾಲೂ ಆಗಲೇ ಇಲ್ಲ. ಆದ ಕಾರಣ, ಬಸ್‌ನಿಂದ ಇಳಿದು ಮತ್ತೂಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಅದು ಮಳೆಗಾಲದ ದಿನವಾಗಿದ್ದರಿಂದ ತುಂತುರು ಮಳೆ ಮೆಲ್ಲಗೆ ಮೈ ಸೋಕುತಿತ್ತು. ನನ್ನ ಬಳಿ ಛತ್ರಿ ಇಲ್ಲದ ಕಾರಣ, ಮಳೆಹನಿಗೆ ಮೈ ಒಡ್ಡಿದ್ದೆ. ಅಷ್ಟರಲ್ಲೇ ಒಂದು ಬಸ್ ಬಂತು , ಅದನ್ನು ಏರಿ ಹಿಂದೆ ಮುಂದೆ ಕಣ್ಣು ಹಾಯಿಸಿದೆ, ಎಲ್ಲಾದರೂ ಸೀಟು ಸಿಗಬಹುದಾ ಅಂತ.
ಮೊದಲ ಡೋರ್‌ನಿಂದ 3ನೇ ಸೀಟಿನಲ್ಲಿ ಒಂದು ಸೀಟು ಖಾಲಿ ಇತ್ತು. ಆದರೆ ಆ ಸೀಟಿನ ಮೇಲೆ ಒಂದು ಬ್ಯಾಗ್ ಇತ್ತು, ಪಕ್ಕದಲ್ಲಿ ಕುಳಿತಿದ್ದವರು ನಿದ್ದೆಗೆ ಜಾರಿದ್ದರು. ಆದರೂ ಪರವಾಗಿಲ್ಲ ಎಂದು ಅವರತ್ತ ಸರಿಸಲು ಮುಂದಾದಾಗ ನನ್ನ ಕೈ ತಾಗಿ ಅವರಿಗೆ ಎಚ್ಚರವಾಯ್ತು. ಸರ್ ಈ ಸೀಟಿಗೆ ಯಾರದರು ಬರ್ತಾರ ಅಂತ ಕೇಳಿದೆ. ಇಲ್ಲ, ಅಂದಾಕ್ಷಣ ಆ ಸೀಟಲ್ಲಿ ಕುಳಿತೆ.
ನಾನು ಮಲೆನಾಡಿನವಳು ಎಂದು ತಿಳಿದಾಗ ನಿಮ್ಮ ಅಭಿಮಾನದ ಮಾತುಗಳು ನನಗಿನ್ನೂ ಜ್ಞಾಪಕವಿದೆ, ಕುವೆಂಪು ಅವರ ಕವಿತೆ , ಕಥನಗಳ ಸಾಲನ್ನು ನಾಲಗೆಯ ತುದಿಯಲ್ಲಿ ಹಿಡಿದಿಟ್ಟುಕೊಂಡಿದ್ದಿರಿ. ಆನಂತರದಲ್ಲಿ ನಿಮ್ಮ ಮಾತುಗಳು ಕವಿತೆ ಕವನ ಸಂಕಲನಗಳಿಂದ ಪ್ರಾರಂಭವಾಗಿ ಕಾದಂಬರಿಯಂತೆ ಮುಂದುವರಿಯಿತು. ಹೀಗೆ ನಿಮ್ಮ ಮಾತುಗಳನ್ನು ಕೇಳುತ್ತಾ ನಾನು ತುಸು ಮೈ ಮರೆತೆ, ನಿಮ್ಮಂಥ ಅಪರೂಪದ ವ್ಯಕ್ತಿ, ಗೆಳೆಯನಾಗಿ ಸದಾ ನನ್ನೊಂದಿಗಿದ್ದರೆ ಇನ್ನೂ ಚೆನ್ನಾಗಿರುತಿತ್ತು ಅನ್ನಿಸಿತು.
ಮಲೆನಾಡಿನ ಈ ಸೌಂದರ್ಯವನ್ನು ಬಯಲುಸೀಮೆಯ ಭಾಷೆಯಲ್ಲಿ ಕೇಳುವ ಹುಚ್ಚು ಹೆಚ್ಚಾಯಿತು. ಬಸ್ಸಿನಲ್ಲಿ ಅಕ್ಕ ಪಕ್ಕ ಕುಳಿತವರು, ಕಾಫಿ ಶಾಪ್‌ನಲ್ಲಿ ಎದುರು ಬದುರು ಕೂರಬೇಕೆನಿಸಿತು. ಮನಸ್ಸಿಗೆ ಸ್ವಲ್ಪ ಸಾಂತ್ವನ ಹೇಳಿ ಕಿಟಕಿಯಿಂದ ಆಚೆ ನೊಡಿದರೆ ನಾನು ಇಳಿಯುವ ಸ್ಥಳ ಬಂದೇ ಬಿಡೋದಾ… ನೋಡ ನೋಡುತ್ತಿದ್ದಂತೆಯೇ ಎರಡು ಗಂಟೆಯ ಹಾದಿ ಸಾಗಿತ್ತು .. ಮನಸ್ಸಿನಲ್ಲಿ ಏನನ್ನೊ ಕೇಳುವ ಬಯಕೆ ಮತ್ತೇನನ್ನೋ ಹೇಳುವ ಆಸೆ. ಹಾಗೆ ತೂತಿದ್ದವರು ನೀವು! ಬಸ್ ಪ್ರಯಾಣವೇ ಹಾಗೆ:ಅದು ಅಪರಿಚಿತರನ್ನು ಬೇಗ ಪರಿಚಯದ ವ್ಯಾಪ್ತಿಗೆ ಸೇರಿಸುತ್ತದೆ. ನಮ್ಮ ಕಥೆಯೂ ಹಾಗೇ ಆಯಿತು. “ನೀವು’, “ನೀವು’ ಎನ್ನುತ್ತಾ ಪರಿಚಯವಾದವರು, ಸ್ವಲ್ಪ ಹೊತ್ತಿಗೇ ನೀನು ಗೆ ಶಿಫ್ಟ್ ಆದೆವು. ನೀವು ಯೋಧ ಎಂದು ತಿಳಿದಾಗ, ನನಗೆ ಆದ ಸಂಭ್ರಮವನ್ನು ಹೇಗೆ ವಿವರಿಸಿಲಿ?
ಬಸ್ ಇಳಿಯುವ ಮೊದಲು ನಿಮ್ಮ ಫೋನ್ ನಂಬರ್ ಸಿಗಬಹುದಾ ಎಂದೆ. ಆ ಕ್ಷಣದಲ್ಲಿ ನಿನ್ನ ಮೊಗದಲ್ಲಿ ಕಿರುನಗೆ ಮೂಡಿತು, ಬಹುಶಃ ನಿನ್ನ ಮನಸ್ಸು ಕೂಡ ಇದನ್ನೇ ಬಯಸುತ್ತಿತ್ತೇನೊ ಅನ್ನಿಸಿತು…
ನಾನು ಎರಡನೇ ಬಾರಿ ಬಂದಾಗ, ಬಸ್ ಇಳಿದು ಬಸ್ ಸ್ಟಾಂಡ್‌ನಲ್ಲಿ ನಿಂತಿದ್ದೆ . ಅದೇ ಸಮಯಕ್ಕೆ ನನ್ನ ಮೊಬೈಲ್ ಬಡಿದುಕೊಳ್ಳುತಿತ್ತು ನೋಡಿದರೆ ನಿನ್ನದೇ ನಂಬರ್. ಆವತ್ತು, ಕಾಲ್ ರಿಸೀವ್ ಆದಾ, ಇಬ್ಬರೂ ಏಕಕಾಲಕ್ಕೆ – ಕಾಫಿಗೆ ಹೋಗೋಣ್ವಾ ಅಂದಿದ್ವಿ… ನೆನಪು ಬಂತಾ?
ಅಮೃತ ಚಂದ್ರಶೇಖರ ತೀರ್ಥಹಳ್ಳಿ