Advertisement

ಕಿವೀಸ್‌ಗೆ ಮತ್ತೆ ನಂ.1 ಆಗುವ ಅವಕಾಶ

07:00 AM Nov 10, 2017 | |

ವೆಲ್ಲಿಂಗ್ಟನ್‌: ಭಾರತ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡ ನ್ಯೂಜಿಲ್ಯಾಂಡ್‌ “ಟೀಮ್‌ ರ್‍ಯಾಂಕಿಂಗ್‌’ ಯಾದಿಯ ಅಗ್ರಸ್ಥಾನದಿಂದ ಕೆಳಗಿಳಿದಿದೆ. ಕಿವೀಸ್‌ ಈಗ 2ನೇ ಸ್ಥಾನಕ್ಕೆ ಜಾರಿದ್ದು, ಪಾಕಿಸ್ಥಾನ ನಂ.1 ತಂಡವಾಗಿ ಮೂಡಿಬಂದಿದೆ.

Advertisement

ಆದರೆ ನ್ಯೂಜಿಲ್ಯಾಂಡಿಗೆ ಅತೀ ಶೀಘ್ರದಲ್ಲೇ ಅಗ್ರಸ್ಥಾನವನ್ನು ಅಲಂಕರಿಸುವ ಅವಕಾಶವೊಂದು ತೆರೆಯಲ್ಪಡಲಿದೆ. ಸದ್ಯದಲ್ಲೇ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡ ನ್ಯೂಜಿಲ್ಯಾಂಡಿಗೆ ಆಗಮಿಸಲಿದ್ದು, 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಯನ್ನು ಗೆದ್ದರೆ ನ್ಯೂಜಿಲ್ಯಾಂಡ್‌ ಮತ್ತೆ ನಂ.1 ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸದ್ಯ ನ್ಯೂಜಿಲ್ಯಾಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಲಾ 120 ರೇಟಿಂಗ್‌ ಅಂಕಗಳನ್ನು ಹೊಂದಿವೆ. ದಶಮಾಂಶ ಲೆಕ್ಕಾಚಾರದಲ್ಲಿ ನ್ಯೂಜಿಲ್ಯಾಂಡೇ ಮುಂದಿದೆ. ಅಗ್ರಸ್ಥಾನಿ ಪಾಕ್‌ ಹೊಂದಿರುವ ಅಂಕ 124.

ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲೆರಡು ಪಂದ್ಯಗಳನ್ನು ಗೆದ್ದರೆ 6 ಅಂಕಗಳನ್ನು ಸಂಪಾದಿಸಲಿರುವ ನ್ಯೂಜಿಲ್ಯಾಂಡ್‌, ಆಗ ಪಾಕಿಸ್ಥಾನವನ್ನು ಹಿಂದಿಕ್ಕಲಿದೆ. ಸರಣಿಯನ್ನು ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡರೆ ಕಿವೀಸ್‌ ಅಂಕ 128ಕ್ಕೆ ಏರಲಿದೆ. ಆಗ ನ್ಯೂಜಿಲ್ಯಾಂಡನ್ನು ಅಗ್ರಸ್ಥಾನದಿಂದ ಕದಲಿಸುವುದು ಕಷ್ಟವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next