ವಿದ್ಯಾರ್ಥಿಗಳ ಪರವಾಗಿ ತನ್ನ ಮನದಾಳ ಬಿಚ್ಚಿಟ್ಟ ಈ ಬಾರಿಯ
ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಎಂ.ಮನ್ವಿತ್ ಪ್ರಭು “ನಾನು 2ನೇ ರ್‍ಯಾಂಕ್ ಪಡೆಯಲು ಬಾಲ್ಯದಿಂದ ನನಗೆ ಕಲಿಸಿದ ಗುರುಗಳು, ಪ್ರೋತ್ಸಾಹ ನೀಡಿದ ಹೆತ್ತವರು ಕಾರಣ. ಶಿಕ್ಷಣ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಡಾ| ಜಿ.ಶಂಕರ್ ಅವರು ಪ್ರತಿಭಾವಂತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಿಂದ ಸಹಾಯ ನೀಡುತ್ತಿದ್ದಾರೆ. ಇಂಥ ಮಾದರಿ ಸಂಸ್ಥೆಯಿಂದ ಪುರಸ್ಕಾರ ಪಡೆಯುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಮುಂದೆ ನಾವು ಉನ್ನತ ಹುದ್ದೆಗೆ ಹೋಗಿ ಇದೇ ರೀತಿ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಹೇಳಿದರು.
ಮೊದಲ ಬಾರಿಗೆ ಇಂಥ ಖುಷಿ
ಅತ್ಯಧಿಕ ಅಂಕ ಗಳಿಸಿ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಶುಭಶ್ರೀ ಎಸ್.ಶೆಣೈ ಅವರು ಮಾತನಾಡಿ “ನನ್ನ ಜೀವನದಲ್ಲಿ ಈ ರೀತಿಯ ಪುರಸ್ಕಾರ ಮೊದಲ ಬಾರಿಗೆ ಪಡೆಯುತ್ತಿದ್ದೇನೆ. ಜಿ.ಶಂಕರ್ ಅವರು ಮುನ್ನಡೆಸುತ್ತಿರುವ ಶ್ಯಾಮಿಲಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಜಿ.ಶಂಕರ್ ಅವರು ಜಾತಿ ಮತ ಭೇದವಿಲ್ಲದೆ ಎಲ್ಲ ಸಮಾಜದವರಿಗೂ ಸಹಾಯ ಮಾಡುತ್ತಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಡುತ್ತಿದೆ’ ಎಂದು ಹೇಳಿದರು.
ಕಲಾವಿದರಿಗೆ ಸಹಾಯಧನ
ಯಕ್ಷಗಾನ ಕಲಾವಿದರಾದ ಕೊಕ್ಕುಡ್ತಿ ಕೃಷ್ಣಮೂರ್ತಿ ತೀರ್ಥಹಳ್ಳಿ, ಗಜಾನನ ಭಂಡಾರಿ ಹೊನ್ನಾವರ, ಮೂರೂರು ವಿಷ್ಣುಭಟ್ ಕುಮಟಾ, ಕೆಂಜಿ ನಾಗು ಗೌಡ, ಶಿವರಾಮ ಶೆಟ್ಟಿ ಹೊಸಕೊಪ್ಪ, ಸದಾಶಿವ ಕುಲಾಲ್ ವೇಣೂರು, ಕೂಡ್ಲು ಆನಂದ, ನಾರಾಯಣ ಪುರುಷ ಸಜಂಕಿಲ, ಕೂಡ್ಲು ಜಯ ಬಲ್ಯಾಯ, ತಾರಾನಾಥ ವರ್ಕಾಡಿ ಅವರಿಗೆ ಸಹಾಯಧನ ವಿತರಿಸಲಾಯಿತು.
ಜಿ.ಶಂಕರ್ ಅವರು ನೀಡುತ್ತಿರುವ ಸಹಾಯಧನ ನಮ್ಮಂಥ ಅಶಕ್ತರಿಗೆ ಮರುಭೂಮಿಯಲ್ಲಿ ಸಿಕ್ಕಿದ ಓಯಸಿಸ್. ಶ್ರೀಮಂತಿಕೆ, ಪದವಿ ಇದ್ದರೂ ಮನುಷ್ಯತ್ವ ಇಲ್ಲದಿದ್ದರೆ ಪ್ರಯೋಜನವಿಲ್ಲ. ವಿದ್ಯೆ ಶ್ರೇಷ್ಠ ಮೌಲ್ಯ ಬೆಳೆಸುತ್ತದೆ. ಡಾ| ಜಿ.ಶಂಕರ್ ಅವರು ಜಾತಿ ಮತ ಭೇದವಿಲ್ಲದೆ ವಿಶ್ವಮಾನವರಾಗಿ ಸಹಾಯ ಮಾಡುತ್ತಿದ್ದಾರೆ. ಅವರ ಆದರ್ಶ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ.
– ತಾರಾನಾಥ ವರ್ಕಾಡಿ, ಯಕ್ಷಗಾನ ಕಲಾವಿದರು