ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೆಸರು ಪ್ರಸ್ತಾಪಿಸದೇ ಮಾತಿನ ಸಮರ ಮುಂದುವರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಈ ಕ್ಷೇತ್ರದಲ್ಲಿ ಶಾಸಕಿ ಮತ್ತೆ ಗೆದ್ದು ಬಂದರೆ ಅವರಿಗೆ ಹಾರ ಹಾಕೋಣ ಎಂದು ವ್ಯಂಗವಾಡಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ನಾವು ಯಾವ ರೀತಿ ತಯಾರಿ ಮಾಡಿದ್ದೆವು ಎಂಬುದು ಜನರಿಗೆ ಗೊತ್ತು. ಆಗ ಜನರು ನನ್ನ ನಂಬಿ ಮತ ಹಾಕಿದ್ದರು. ಆದರೆ ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ಶಾಸಕಿ ಅದನ್ನು ಬೇರೆ ರೀತಿ ಉಪಯೋಗ ಮಾಡಿಕೊಂಡರು.
ಇದನ್ನೂ ಓದಿ:ಮೂತ್ರಕೋಶ ನೋವು ಕಾಯಿಲೆ ಬ್ಲಾಡರ್ ಪೇಯ್ನ ಸಿಂಡ್ರೋಮ್ (ಬಿಪಿಎಸ್)
ಬೆಳಗಾವಿ ಗ್ರಾಮೀಣ ಶಾಸಕಿ ಬಗ್ಗೆ ಮಾತನಾಡದಿರುವಂತೆ ಬಿಜೆಪಿ ವರಿಷ್ಠರು ನನಗೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಆರು ತಿಂಗಳಿಂದ ಸುಮ್ಮನಿದ್ದೇನೆ. ನಾನು ಯಾರ ಮೇಲೂ ಸೇಡು ತೀರಿಸಿ ಕೊಳ್ಳು ವುದಿಲ್ಲ. ಆದರೆ ನಮ್ಮ ಕ್ಷೇತ್ರವನ್ನು ಮರಳಿ ತೆಗೆದುಕೊಳ್ಳುವಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ಚುನಾವಣೆಯಲ್ಲಿ ನನ್ನನ್ನು ನಂಬಿ ಮತ ಹಾಕಿದ್ದ ಬೆಳಗಾವಿ ಗ್ರಾಮೀಣ ಜನರ ವಿಶ್ವಾಸ ಉಳಿಸಿಕೊಳ್ಳಬೇಕಿದೆ ಎಂದರು.
ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಆಪ್ತರಲ್ಲಿ ಒಬ್ಬರಾದ ಯುವರಾಜ ಕದಂ ಬಿಜೆಪಿಗೆ ಬರುವುದು ಅಥವಾ ಬಿಡುವುದು ಅವರ ವೈಯಕ್ತಿಕ ವಿಚಾರ. ಇದರಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ ಎಂದರು.