ನ್ಯೂಯಾರ್ಕ್: ದೀಪಾವಳಿ ಎನ್ನುವುದು ರಜೆಯ ಸಮಯ ಅಲ್ಲ. ಅದು ನಮ್ಮ ಜೀವನದಲ್ಲಿ ಜ್ಞಾನದ ಬೆಳಕು ನೀಡುವಂತಾಗಬೇಕು ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆ್ಯಡಮ್ಸ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಯುದ್ಧದಿಂದ ಎಲ್ಲೆಲ್ಲೂ ಕತ್ತಲು ಕಾಣಿಸುತ್ತಿರುವ ಈ ಹೊತ್ತಿನಲ್ಲಿ ನಾವು ಜ್ಞಾನದ ಬೆಳಕನ್ನು ಹೊತ್ತಿಸಬೇಕು. ರಾಮಾಯಣದ ಶ್ರೀರಾಮಪ್ರಭು, ಸೀತಾಮಾತೆ ಹಾಗೂ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸಬೇಕು.
ನಾವು ಕೇವಲ ಆರಾಧಕರಾಗಬಾರದು, ಅವುಗಳನ್ನು ಆಚರಣೆಗೂ ತರಬೇಕು ಎಂದು ಕರೆ ನೀಡಿದ್ದಾರೆ. ದೀಪಾವಳಿ ಕೇವಲ ದೀಪ ಬೆಳಗುವ ಹಬ್ಬವಲ್ಲ, ಕತ್ತಲನ್ನು ದೂರತಳ್ಳಬೇಕು. ಕತ್ತಲಿನ ಕಾರಣ ಎಲ್ಲೆಲ್ಲೂ ಮುಗ್ಧಜೀವಗಳು ಬಲಿಯಾಗುತ್ತಿವೆ. ಇದು ನಮ್ಮ ಭವಿಷ್ಯವನ್ನು, ಮಾನವ ಜನಾಂಗವನ್ನು ಆವರಿಸಿಕೊಳ್ಳುವುದನ್ನು ತಡೆಯಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯರು, ದ.ಏಷ್ಯಾ ಸಮುದಾಯದವರು ಪಾಲ್ಗೊಂಡಿದ್ದರು.