Advertisement
ಜೀವನ ಕಲ್ಲು ಮುಳ್ಳುಗಳ ಹಾದಿ. ಇಲ್ಲಿ ಗೆಲುವು ಸೋಲು ಎಂಬುದು ಸಾಮಾನ್ಯ. ಎಲ್ಲ ಸಂದರ್ಭಗಳಲ್ಲಿಯೂ ನಮಗೆ ನಲಿವೊಂದೇ ಸಿಗಬೇಕು ಎಂದು ಮನಸ್ಸು ಬಯಸುವುದು ಸಹಜ. ಆದರೆ ಸಮಯ ಹಾಗಲ್ಲ. ಕೆಲವೊಮ್ಮೆ ದುಃಖದ ರುಚಿಯನ್ನೂ ತೋರಿಸುತ್ತದೆ. ಕೆಲವೊಮ್ಮೆ ಡಿಪ್ರಷನ್‌ಗೆ ಜಾರುವ ಸಂಭವವೂ ಇರುತ್ತದೆ. ವಾಸ್ತವವನ್ನು ಬಿಟ್ಟು ಕಾಲ್ಪನಿಕ ಜಗತ್ತಿನಲ್ಲೇ ಹೆಚ್ಚು ಕಾಲ ಸುತ್ತುತ್ತಿರುವ ಮನಸ್ಸಿಗೆ ಹೀಗಾಗುವುದು ಸಹಜ. ಋಣಾತ್ಮಕ ಜಗತ್ತಿನತ್ತ ವಾಲುವ ಮನಸ್ಸನ್ನು ಕಟ್ಟಿ ಹಾಕಿಕೊಳ್ಳುವ, ಕ್ರಿಯಾ ಶೀಲತೆಯಲ್ಲಿ ತೊಡಗಿಸಿ ಕೊಳ್ಳುವ ಕಲೆ ಗೊತ್ತಿಲ್ಲದೇ ಹೋದಾಗ ಇಂತಹ ಸಮಸ್ಯೆಗಳು ನಮ್ಮದಾಗುತ್ತವೆ. ಹಾಗಾದರೆ ನಮ್ಮ ಸುಂದರ ಮನಸ್ಸನ್ನು ಸದಾ ಕಾಲ ಸಂತೋಷ ವಾಗಿಟ್ಟುಕೊಳ್ಳುವುದು, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವಂತೆ ಬಲಿಷ್ಠಗೊಳಿಸಿ ಕೊಳ್ಳಲು ಧನಾತ್ಮಕತೆಯನ್ನು ತುಂಬಿಕೊಳ್ಳುವುದು ಹೇಗೆ?
ನಾವು ನಮ್ಮನ್ನು ಪ್ರೀತಿಸು ವುದನ್ನು ಮೊದಲು ಕಲಿಯ ಬೇಕು. ನಮ್ಮಲ್ಲಿ ಜೀವನ ಪ್ರೀತಿ ಬತ್ತಿದರೆ ಮತ್ತೆ ಬದುಕುವ ಉತ್ಸಾಹವೇ ಉಡುಗಿ ಹೋಗುತ್ತದೆ. ನಕಾರಾತ್ಮಕ ಸಂಗತಿಗಳು ನಮ್ಮನ್ನು ಹೆಚ್ಚು ಕಾಡುವುದಕ್ಕೆ ಆರಂಭವಾಗುತ್ತವೆ. ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯದೇ ಹೋದರೆ ನಾವು ಇನ್ನೊಬ್ಬರನ್ನು ಒಪ್ಪಿಕೊಳ್ಳುವ, ಪ್ರೀತಿ ಮಾಡುವ ಗುಣ ನಮ್ಮೊಳಗೆ ಹುಟ್ಟಿಕೊಳ್ಳದು.ಯಾವುದೇ ಕೆಲಸ ಪೂರ್ಣಗೊಳಿಸಬೇಕಾದರೂ ಈ ಒಂದು ಅಂಶ ನಮ್ಮ ಮನಸ್ಸಿನಲ್ಲಿದ್ದರೆ ಸಾಕು. ಫಲಿತಾಂಶ ಏನೇ ಇದ್ದರೂ ಅದನ್ನು ಆತ್ಮವಿಶ್ವಾಸದ ಮೂಲಕವೇ ಒಪ್ಪಿಕೊಳ್ಳುವ ಗಟ್ಟಿತನ ಮೂಡುತ್ತದೆ. ಮುಗುಳು ನಗುವಿಗೂ ಈ ಅದಮ್ಯ ಜೀವನೋತ್ಸಾಹವೇ ಕಾರಣ. ನಮ್ಮನ್ನು ನೋಡಿ ಇತರರೂ ಆತ್ಮವಿಶ್ವಾಸ ಬೆಳೆಸಿ ಕೊಳ್ಳುವುದು ಆಗಲೇ. ನೀವು ಖುಷಿಪಡುವ ಕೆಲಸಗಳಲ್ಲಿ ತೊಡಗಿಕೊಳ್ಳಿ
ಇದು ಬಹಳ ಮುಖ್ಯವಾದುದು. ಮನಸ್ಸನ್ನು ಉಲ್ಲಸಿತವಾಗಿಡುವುದೇ ಅದು. ಋಣಾತ್ಮಕ ಯೋಚನೆಗಳು ನಮ್ಮಿಂದ ದೂರವಾಗಿಡುವುದಕ್ಕೆ ಇದು ಸಹಕಾರಿ ಯಾದೀತು. ಯಾವುದೇ ನಿಮಗಿಷ್ಟವಾಗುವ ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳಿ. ಹಲವು ಸಂದರ್ಭಗಳಿಗೆ ಸರಿಯಾಗಿ ನಮ್ಮನ್ನು ನಾವು ಹೊಂದಿಸಿ ಕೊಳ್ಳುವುದರಿಂದಲು ನಮ್ಮ ಮನಸ್ಸಿನೊಳಗೆ ಶಕ್ತಿ ಸಂಚಲನ ಸಾಧ್ಯ. ಹಾಗಾಗಿ ಸಂಗೀತ ಕೇಳುವುದು, ಮನಸ್ಸಿಗೆ ಹತ್ತಿರವಾದವರ ಜತೆಯಲ್ಲಿ ಸಮಯ ಕಳೆಯುವುದು, ಪುಸ್ತಕಗಳನ್ನು ಓದುವುದು, ಪ್ರವಾಸ, ಚಾರಣ, ಹಳೆಯ ನೆನಪುಗಳನ್ನು ಮತ್ತೆ ನೆನಪಿಸಿಕೊಳ್ಳುವುದನ್ನು ಮಾಡಿದಾಗ ಮನಸ್ಸು ಖುಷಿಗೊಳ್ಳುತ್ತದೆ.
Related Articles
Advertisement
ಮನಸಾರೆ ಅತ್ತುಬಿಡಿದುಃಖವಿದ್ದರಷ್ಟೆ ಸುಖದ ಅರಿವು ನಮಗಾಗುವುದು ಸಾಧ್ಯ. ಸಂತೋಷವನ್ನು ಹೇಗೆ ಆಸ್ವಾದಿಸುತ್ತೇವೆಯೋ ಹಾಗೆಯೇ ನೋವನ್ನು ಅನುಭವಿಸುವುದಕ್ಕೂ ನಾವು ಸಿದ್ಧರಾಗಿರಬೇಕು. ಮನಸ್ಸು ದುಃಖದಿಂದ ವಿಚಲಿವಾದಾಗ ಅದರಿಂದ ಹೊರ ಬರುವುದಕ್ಕೆ ಕೊಂಚ ಮಟ್ಟಿಗೆ ಸಹಾಯ ಮಾಡುವುದು ಕಣ್ಣೀರು. ಕೊರಗುವುದಕ್ಕಿಂತ ಮನಸಾರೆ ಅತ್ತು ಬಿಟ್ಟರೆ ನಿರಾಳತೆ ನಮ್ಮದಾಗುತ್ತದೆ. ನೋವಿನಿಂದ ಹೊರಬರುವ ದಾರಿಯನ್ನು ಯೋಚಿಸುವುದಕ್ಕೂ ಇದು ನಮಗೆ ಅನೇಕ ಬಾರಿ ಸಹಾಯ ಮಾಡುತ್ತದೆ. ಆಗ ನಿರಾಳವಾಗುವ ಮನಸ್ಸು ಸಕಾರಾತ್ಮಕ ಯೋಚನೆಗಳ ನೂರಾರು ಹಾದಿಯನ್ನು ತೆರೆಯಬಲ್ಲದು. ಧ್ಯಾನ
ಜೀವಕ್ಕೆ ಆಹಾರ ಹೇಗೆ ಚೈತನ್ಯ ನೀಡುತ್ತದೆಯೋ ಹಾಗೆಯೇ ಜೀವನಕ್ಕೆ ಉಲ್ಲಾಸ ತುಂಬುವ ಕೆಲಸವನ್ನು ಧ್ಯಾನ ಮಾಡುತ್ತದೆ. ನಿತ್ಯವೂ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನ ಧ್ಯಾನ ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಬೇಕಾದ ತಾಳ್ಮೆ ಮತ್ತು ಇಚ್ಛಾಶಕ್ತಿ ಯನ್ನು ಬೆಳೆಸಿಕೊಳ್ಳಲು ಧ್ಯಾನ ದಿವ್ಯಾಸ್ತ್ರವೇ ಸರಿ. ನಮ್ಮೊಳಗೆ ಧನಾತ್ಮಕತೆ ಭಾವನೆ ಗಳನ್ನು ಹೆಚ್ಚು ಮಾಡುವುದಕ್ಕೂ ಇದು ದಿವೌÂಷಧ. – ಭುವನ ಬಾಬು, ಪುತ್ತೂರು