Advertisement

ಜಾತಿಯ ಸಂಕೋಲೆ ಕಳಚೋಣ ಭವ್ಯ ಭಾರತನ್ನು ಕಟ್ಟೋಣ: ಚಕ್ರವರ್ತಿ ಸೂಲಿಬೆಲೆ

03:10 PM Apr 24, 2017 | Team Udayavani |

ಕಿನ್ನಿಗೋಳಿ: ದೇಶ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ  ರಾಮಾನುಜಾ ಚಾರ್ಯರು ಸಾವಿರದ ವರ್ಷಗಳ ಹಿಂದೆ ಜಾತಿಯ ಪರಿಕಲ್ಪನೆಯನ್ನು ಮೆಟ್ಟಿ ನಿಂತವರು. ಅದೇ ರೀತಿ 100 ವರ್ಷಗಳ ಹಿಂದೆ ಡಾ| ಬಿ. ಆರ್‌. ಅಂಬೇಡ್ಕರ್‌ ಕೂಡ ಜಾತಿಯ ಸಾಮರಸ್ಯಕ್ಕಾಗಿ ಜೀವನವನ್ನು ಸವೆಸಿದರು ಎಂದು ಖ್ಯಾತ ಅಂಕಣಕಾರ ಯುವಾ ಬ್ರಿಗೇಡ್‌ ಮಾಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 

Advertisement

ಅವರು ಎ. 23ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ   ಕಿನ್ನಿಗೋಳಿ ರೋಟರ್ಯಾಕ್ಟ್ ಕ್ಲಬ್‌ ಯುವ ಬ್ರಿಗೇಡ್‌ ಕಿನ್ನಿಗೋಳಿ ಇದರ ಆಶ್ರಯದಲ್ಲಿ ಸಾವಿರದ ಜಯಂತಿಯ  “ಜಾತಿಯ ಸಂಕೋಲೆಯನ್ನು ಕಳಚೋಣ ಬನ್ನಿ’ ಎಂಬ ಕಾರ್ಯಕ್ರಮದಲ್ಲಿ  ಮಾತನಾಡಿ, ಇಂಥವರನ್ನು ನೆನಸಿಕೊಂಡು ಶತಮಾನಗಳಿಂದ ಅಂಟಿಕೊಂಡಿರುವ ಜಾತಿಯ ಕೊಳೆಯನ್ನು  ತೊಳೆದು ಬಿಡಲು ನಾವು ಯಾಕೇ ಪ್ರಯತ್ನ ಮಾಡಬಾರದು ಎಂದು ಪ್ರಶ್ನಿಸಿದರು. ಮೇಲ್ವರ್ಗ ಹಾಗೂ ಕೆಳವರ್ಗ ಎಂಬ ಮನೋಧರ್ಮ ಹಿಂದಿನ ಕಾಲದಿಂದಲೂ ಬಂದಿದೆ.  ಅದನ್ನು  ವಿರೋಧಿಸಿದ್ದ ರಾಮಾನುಜಾಚಾರ್ಯರು ಮತ್ತು ಎಲ್ಲ ಅವಮಾನಗಳ ವಿರುದ್ಧ ಸೆಟೆದು ನಿಂತು ಸಮಾಜದ ಉದ್ಧಾರಕ್ಕೆ ಕಟಿಬದ್ಧರಾದ ಡಾ| ಅಂಬೇಡ್ಕರರ ಅವರನ್ನು  ನೆನಪಿಸುವುದು ಅಗತ್ಯ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next