Advertisement

ಭ್ರಷ್ಟಾಚಾರ, ಕೋಮುವಾದದಿಂದ ಮುಕ್ತಗೊಳಿಸಿ, 2022ಕ್ಕೆ ನವಭಾರತ: ಮೋದಿ

01:53 PM Aug 09, 2017 | Sharanya Alva |

ನವದೆಹಲಿ: ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕೋಮುವಾದದಿಂದ ದೇಶವನ್ನು ಮುಕ್ತಗೊಳಿಸುವ ಮೂಲಕ 2022ರ ವೇಳೆಗೆ ನವಭಾರತವನ್ನು ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ಪ್ರತಿಯೊಬ್ಬರು ದುಡಿಯಬೇಕಾಗಿದೆ ಎಂದು ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತ ಕರೆ ನೀಡಿದರು.

Advertisement

ಬಡತನ, ಶಿಕ್ಷಣದ ಕೊರತೆ ಹಾಗೂ ಪೌಷ್ಠಿಕಾಂಶದ ಕೊರತೆ ದೇಶದ ಪ್ರಮುಖ ಸಮಸ್ಯೆಯಾಗಿದೆ. ಭ್ರಷ್ಟಾಚಾರ ದೇಶದ ಪ್ರಗತಿಗೆ ಅಡ್ಡಿಯಾಗಿದೆ. ಆ ನಿಟ್ಟಿನಲ್ಲಿ ನಾವು ಧನಾತ್ಮಕ ಬದಲಾವಣೆಯೊಂದಿಗೆ ಹೆಜ್ಜೆ ಇರಿಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಬುಧವಾರ ಲೋಕಸಭೆಯ ವಿಶೇಷ ಅಧೀವೇಶನದಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾಷಣ ಮಾಡಿದ ಅವರು, ಮಾಡು ಇಲ್ಲವೇ ಮಡಿ ಎಂಬ ಮಹಾತ್ಮ ಗಾಂಧಿ ಅವರ ಕರೆಯನ್ನು ಜನರು ಅನುಸರಿಸಬೇಕಾಗಿದೆ ಎಂದರು.

ನಮ್ಮ ಸ್ವಾತಂತ್ರ್ಯ ಕೇವಲ ನಮ್ಮ ದೇಶಕ್ಕೆ ಮಾತ್ರವಲ್ಲ, ಇದು ಜಗತ್ತಿನಾದ್ಯಂತ ಹಬ್ಬಿರುವ ವಸಾಹತುಶಾಹಿಯನ್ನು ಅಂತ್ಯಗೊಳಿಸುವುದು ಕೂಡಾ ಆಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next