Advertisement
ಕಾಲ್ಚೆಂಡಿನ ಆಟ ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ನ್ಯಾಶನಲ್ ಫುಟ್‌ಬಾಲ್ ಲೀಗ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್. ಆದರೆ ಭಾರತವು ಸಮರ್ಥ ಫುಟ್‌ಬಾಲ್ ಆಟಗಾರರನ್ನು ಹೊಂದಿದ್ದರೂ, ಹಲವು ಚಾಂಪಿಯನ್‌ಶಿಪ್‌ಗ್ಳನ್ನು ಗೆದ್ದಿದ್ದರೂ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸುವಲ್ಲಿ ವಿಫಲವಾಗಿದೆ. ಫಿಫಾ ವರ್ಲ್ಡ್ ರ್‍ಯಾಂಕಿಂಗ್‌ನಲ್ಲೂ ನೂರರೊಳಗಿನ ಸ್ಥಾನ ಪಡೆಯಲು ಭಾರತ ಹೆಣಗಾಡುತ್ತಿರುವುದನ್ನು ಕಂಡಾಗ ದೇಶದಲ್ಲಿ ಫುಟ್‌ಬಾಲ್ ಕ್ರೀಡೆ ಯಾವ ಹಂತದಲ್ಲಿದೆ ಎಂಬುದನ್ನು ನಾವೆಲ್ಲರೂ ಊಹಿಸಬಹುದಾಗಿದೆ.
ಜಗತ್ತಿನಲ್ಲಿರುವ ವಿವಿಧ ಫುಟ್‌ಬಾಲ್ ತಂಡಗಳ ಪ್ರದರ್ಶನವನ್ನು ಆಧರಿಸಿ ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ಫುಟ್‌ಬಾಲ್ ಅಸೋಸಿಯೇಶನ್ (ಫಿಫಾ) ತಂಡಗಳಿಗೆ ರ್‍ಯಾಂಕಿಂಗ್ ಅನ್ನು ನೀಡುತ್ತದೆ. 1992ರಿಂದ ಈ ರ್‍ಯಾಂಕಿಂಗ್ ಅನ್ನು ಫಿಫಾ ನೀಡುತ್ತಾ ಬಂದಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದ ಮೊದಲ 31 ದೇಶಗಳು ಮಾತ್ರ ಫಿಫಾ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲಿದೆ. ಈ ಬಾರಿಯ ರ್‍ಯಾಂಕಿಂಗ್‌ನಲ್ಲಿ ಫುಟ್‌ಬಾಲ್ ಕ್ರೀಡೆಯಲ್ಲೇ ಅತ್ಯಂತ ಖ್ಯಾತಿ ಗಳಿಸಿರುವ ಅರ್ಜೆಂಟೀನಾ ಮೊದಲ ಸ್ಥಾನವನ್ನು ಗಳಿಸಿದ್ದರೆ, ಬ್ರೆಝಿಲ್ ಎರಡನೇ ಸ್ಥಾನದಲ್ಲಿದೆ. ಈ ರ್‍ಯಾಂಕಿಂಗ್‌ನಲ್ಲಿ ಬ್ರೆಝಿಲ್ ಈಗಾಗಲೇ 13 ಬಾರಿ ಮೊದಲನೇ ಸ್ಥಾನವನ್ನು ಗಳಿಸಿದೆ. ಅರ್ಜೆಂಟೀನಾ ಮೂರನೇ ಬಾರಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.
Related Articles
ಭಾರತದಲ್ಲಿ ಕ್ರಿಕೆಟ್‌ಗಿರುವಷ್ಟು ಅಭಿಮಾನಿಗಳು, ಅದಕ್ಕಿರುವಷ್ಟು ಜನಪ್ರಿಯತೆ ಫುಟ್‌ಬಾಲ್‌ಗಿಲ್ಲ. ಇದು ಸಹ ಫುಟ್‌ಬಾಲ್‌ನ ಜನಪ್ರಿಯತೆಗೆ ತೊಡಕಾಗಿರುವುದು ಕಾಣಬಹುದು. ಕ್ರಿಕೆಟ್‌ನಲ್ಲಿ ಭಾರತ ಎರಡೆರಡು ವಿಶ್ವಕಪ್ ಗೆದ್ದ ಮೇಲಂತೂ ವ್ಯಾವಹಾರಿಕ ದೃಷ್ಟಿಯಿಂದಲೂ ಕ್ರಿಕೆಟ್ ಬಹಳಷ್ಟು ಎತ್ತರಕ್ಕೆ ಏರಿದೆ. ಇದು ನೇರವಾಗಿ ಇತರ ಕ್ರೀಡೆಗಳ ಮೇಲೂ ಪ್ರಭಾವ ಬೀರಿದೆ. ಒಂದು ವೇಳೆ ನಮ್ಮ ಫುಟ್‌ಬಾಲ್ ತಂಡ ಕೂಡ ಪ್ರತಿಷ್ಠಿತ ಪಂದ್ಯಾವಳಿಯನ್ನು ಗೆದ್ದಿದ್ದರೆ, ಕ್ರಿಕೆಟ್‌ನೊಂದಿಗೆ ಫುಟ್‌ಬಾಲ್‌ನಲ್ಲೂ ಭಾರತ ಬಲಿಷ್ಠ ತಂಡಗಳಲ್ಲೊಂದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿರುತ್ತಿತ್ತೇನೋ?
Advertisement
ಭಾರತೀಯ ಫುಟ್‌ಬಾಲ್‌ಗೆ ಭರವಸೆ ತುಂಬುತ್ತಿರುವ ಚೆಟ್ರಿಸ್ಯಾಫ್ ಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಭಾರತದ ಯಶಸ್ಸಿನ ಬಹುಪಾಲು ಶ್ರೇಯ ಸಲ್ಲುವುದು ನಾಯಕ ಸುನಿಲ್ ಚೆಟ್ರಿಗೆ. 2012ರಿಂದ ಸತತವಾಗಿ ಭಾರತ ಫುಟ್‌ಬಾಲ್ ತಂಡವನ್ನು ಮುನ್ನಡೆಸುತ್ತಿರುವ ಚೆಟ್ರಿ ಭಾರತ ಫುಟ್‌ಬಾಲ್‌ನ ಅತ್ಯಂತ ಯಶಸ್ವಿ ನಾಯಕ. ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರೆ ಅದರ ಮುಖ್ಯ ರೂವಾರಿ ಸುನಿಲ್ ಚೆಟ್ರಿ. 2005ರಲ್ಲಿ ರಾಷ್ಟ್ರೀಯ ಫುಟ್‌ಬಾಲ್ ಅಂಗಳಕ್ಕೆ ಪದಾರ್ಪಣೆ ಮಾಡಿರುವ ಚೆಟ್ರಿ ತಮ್ಮ ಸುದೀರ್ಘ ಎರಡು ದಶಕಗಳ ಫುಟ್‌ಬಾಲ್ ಜೀವನದಲ್ಲಿ ಭಾರತದ ಫುಟ್‌ಬಾಲ್ ಲೋಕದಲ್ಲಿ ಬೀರಿದ ಛಾಪು ಚಿಕ್ಕದಲ್ಲ.
ಭಾರತದಲ್ಲಿ ಕ್ರಿಕೆಟ್‌ಗಿರುವಷ್ಟು ಅಭಿಮಾನಿಗಳು, ಅದಕ್ಕಿರುವಷ್ಟು ಜನಪ್ರಿಯತೆ ಫುಟ್‌ಬಾಲ್‌ಗಿಲ್ಲ. ಇದು ಸಹ ಫುಟ್‌ಬಾಲ್‌ನ ಜನಪ್ರಿಯತೆಗೆ ತೊಡಕಾಗಿರುವುದು ಕಾಣಬಹುದು. ಕ್ರಿಕೆಟ್‌ನಲ್ಲಿ ಭಾರತ ಎರಡೆರಡು ವಿಶ್ವಕಪ್ ಗೆದ್ದ ಮೇಲಂತೂ ವ್ಯಾವಹಾರಿಕ ದೃಷ್ಟಿಯಿಂದಲೂ ಕ್ರಿಕೆಟ್ ಬಹಳಷ್ಟು ಎತ್ತರಕ್ಕೆ ಏರಿದೆ. ಇದು ನೇರವಾಗಿ ಇತರ ಕ್ರೀಡೆಗಳ ಮೇಲೂ ಪ್ರಭಾವ ಬೀರಿದೆ. ಒಂದು ವೇಳೆ ನಮ್ಮ ಫುಟ್‌ಬಾಲ್ ತಂಡ ಕೂಡ ಪ್ರತಿಷ್ಠಿತ ಪಂದ್ಯಾವಳಿಯನ್ನು ಗೆದ್ದಿದ್ದರೆ, ಕ್ರಿಕೆಟ್‌ನೊಂದಿಗೆ ಫುಟ್‌ಬಾಲ್‌ನಲ್ಲೂ ಭಾರತ ಬಲಿಷ್ಠ ತಂಡಗಳಲ್ಲೊಂದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿರುತ್ತಿತ್ತೇನೋ? 1950ರಲ್ಲಿ ವಿಶ್ವಕಪ್ ಅರ್ಹತೆ ಗಳಿಸಿತ್ತು ಭಾರತ!
1950-1960ರ ದಶಕವನ್ನು ಭಾರತೀಯ ಫುಟ್‌ಬಾಲ್‌ನ ಸುವರ್ಣಯುಗವೆಂದೇ ಪರಿಗಣಿಸಲಾಗಿದೆ. ಬ್ರೆಝಿಲ್‌ನಲ್ಲಿ ನಡೆದ 1950ರ ಫಿಫಾ ವಿಶ್ವಕಪ್‌ನಲ್ಲಿ ಆಡಲು ಭಾರತ ನೇರ ಅರ್ಹತೆ ಪಡೆದಿತ್ತು. ಆದರೆ ಬರಿಗಾಲಿನಲ್ಲಿ ಆಡುವುದಕ್ಕೆ ಫಿಫಾ ನಿರಾಕರಿಸಿದ್ದರಿಂದ ಭಾರತ ಟೂರ್ನಿಯಿಂದ ಹಿಂದುಳಿಯಿತು. ಆದರೆ ಇನ್ನೊಂದು ಮೂಲದ ಪ್ರಕಾರ ಪ್ರಯಾಣದ ವೆಚ್ಚ ಭರಿಸುವುದು, ಅಭ್ಯಾಸಕ್ಕೆ ಕಾಡಿದ ಸಮಯದ ಅಭಾವ ಮತ್ತು ವಿಶ್ವಕಪ್‌ಗಿಂತ ಒಲಿಂಪಿಕ್ಸ್‌ಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರಿಂದ ಭಾರತ ವಿಶ್ವಕಪ್‌ನಿಂದ ಹಿಂದಕ್ಕೆ ಸರಿಯಿತು ಎನ್ನಲಾಗುತ್ತದೆ. ಅನಂತರ ಭಾರತ ಫಿಫಾ ವಿಶ್ವಕಪ್ ಆಡಲು ಅರ್ಹತೆ ಪಡೆದಿಲ್ಲ. ಒಂದು ವೇಳೆ ಭಾರತ ಅಂದು ವಿಶ್ವಕಪ್‌ನಿಂದ ಹಿಂದೆ ಸರಿಯದೇ ಇದ್ದಿದ್ದರೆ ಇಂದು ಭಾರತದಲ್ಲಿ ಫುಟ್‌ಬಾಲ್ ಜನಪ್ರಿಯ ಕ್ರೀಡೆಯಾಗಿರುತ್ತಿತ್ತೇನೋ? ಸ್ಥಾನ ಪಡೆದಿದ್ದೇ ಭಾರತದ ಅತ್ಯುತ್ತಮ ರ್‍ಯಾಂಕಿಂಗ್
ಈ ಬಾರಿಯ ಫಿಫಾ ರ್‍ಯಾಂಕಿಂಗ್‌ನಲ್ಲಿ ಭಾರತ 100ನೇ ಸ್ಥಾನವನ್ನು ಗಳಿಸಿದೆ. ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಫೈನಲ್ ತಲುಪುವ ಮೂಲಕ ಭಾರತದ ಫುಟ್‌ಬಾಲ್ ತಂಡ ಫಿಫಾ ರ್‍ಯಾಂಕಿಂಗ್‌ನಲ್ಲಿ ಮತ್ತೆ ನೂರರೊಳಗಿನ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಿದೆ. 2019ರಲ್ಲಿ 96ನೇ ರ್‍ಯಾಂಕ್ ಪಡೆದಿದ್ದರೆ, 1996ರಲ್ಲಿ 94ನೇ ಸ್ಥಾನ ಪಡೆದಿದ್ದೇ ಇಲ್ಲಿಯವರೆಗಿನ ಭಾರತದ
ಉತ್ತಮ ರ್‍ಯಾಂಕಿಂಗ್ ಆಗಿದೆ. ಬದಲಾಗುತ್ತಿರುವ ಸಮಯ…!
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಂತಹ ಟೂರ್ನಮೆಂಟ್‌ಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಯೂರೋಪಿನ ಜನಪ್ರಿಯ ಕ್ಲಬ್‌ಗಳು ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗೆ ನೆರವಾಗಲು ಆಸಕ್ತಿ ತೋರುತ್ತಿರುವುದು ಸಂತಸದ ವಿಷಯವಾದರೂ ದೇಶಿಯ ಪ್ರೋತ್ಸಾಹದ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಎಐಎಫ್ಎಫ್ ಮತ್ತು ರಾಜ್ಯ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ಎಲ್ಲ ವಯೋಮಾನದ ತಂಡಗಳನ್ನು ರಚಿಸಿ, ಅವುಗಳ ನಡುವೆ ಸ್ಪರ್ಧೆ ಏರ್ಪಡಿಸುತ್ತಿರಬೇಕು. ಪ್ರತೀ ರಾಜ್ಯದಲ್ಲಿಯೂ ಫುಟ್‌ಬಾಲ್‌ಗೆಂದೇ ಪ್ರತ್ಯೇಕ ಕ್ರೀಡಾಂಗಣದ ವ್ಯವಸ್ಥೆ ಮಾಡಬೇಕು. ರಣಜಿಯಂತೆ ದೇಶೀಯ ಪಂದ್ಯಾವಳಿಗಳನ್ನು ಆಯೋಜಿಸಬೇಕು. ಗ್ರಾಮ ಮಟ್ಟದಲ್ಲಿಯೇ ತರಬೇತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಪ್ರತಿಭಾನ್ವಿತ ಆಟಗಾರರಿಗೆ ಪ್ರೋತ್ಸಾಹ ನೀಡಬೇಕು. ಆಟಗಾರರಿಗೆ ಎಲ್ಲ ರೀತಿಯ ಉತ್ತಮ ಮಟ್ಟದ ಮೂಲ ಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಫುಟ್‌ಬಾಲ್ ಅಭಿವೃದ್ಧಿಗೆ ಪೂರಕವಾಗಿ ಈ ರೀತಿಯ ಇನ್ನಷ್ಟು ಕ್ರಮಗಳನ್ನು ಕೈಗೊಂಡಲ್ಲಿ ಭಾರತವು ಫುಟ್‌ಬಾಲ್‌ನಲ್ಲಿ ಬಲಿಷ್ಠ ತಂಡವಾಗಿ ಬೆಳೆಯಲು ಸಾಧ್ಯ. ದೇಶಿಯವಾಗಿ ಫುಟ್‌ಬಾಲ್‌ಗೆ ಮನ್ನಣೆ ದೊರತರೆ ಫಿಫಾ ವಿಶ್ವಕಪ್‌ನಲ್ಲಿ ಆಡುವ ಕನಸು ನನಸಾಗಬಹುದು. -ಸುಶ್ಮಿತಾ ನೇರಳಕಟ್ಟೆ