ಬೆಂಗಳೂರು: ಯಡಿಯೂರಪ್ಪ ಅವರ ಬಗ್ಗೆ ಗೌರವ ಇದ್ದಿದ್ದರೆ ಸಿಎಂ ಸ್ಥಾನದಿಂದ ಯಾಕೆ ಕೆಳಗೆ ಇಳಿಸಿದರು? ಪ್ರೀತಿ ಇದ್ದರೆ ಅವರನ್ನ ಸಿಎಂ ಎಂದು ಘೋಷಿಸಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಣ ಎಂ.ಬಿ ಪಾಟೀಲ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರು ಹಿರಿಯರು,ಅವರಿಗೆ ಒಳ್ಳೆಯದಾಗಲಿ ಅಂತಾ ಆಶಿಸುತ್ತೇನೆ.75 ವರ್ಷವಾದ ಕಾರಣ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದರು.ಈಗ ಸಂಸದೀಯ ಮಂಡಳಿಯಲ್ಲಿ ಸ್ಥಾನಮಾನ ಕೊಟ್ಟಿದ್ದಾರೆ. ಅವರು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ, ಸಿಎಂ ಆಗುವ ಅವಕಾಶ ಇಲ್ಲ. ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದ ಬಿಜೆಪಿಗೆ ಯಡಿಯೂರಪ್ಪ ಮೇಲೆ ವಿಶೇಷ, ಇನ್ನಿಲ್ಲದ ಪ್ರೀತಿ ಬಂದಿದೆ ಎಂದರು.
ಸಿದ್ದರಾಮೋತ್ಸವದಿಂದ ಬಿಜೆಪಿ ನೆಲ ಕಚ್ಚಿದೆ. ಐಸಿಯುನಲ್ಲಿ ಬಿಜೆಪಿ ಪಕ್ಷ ಇರುವ ಕಾರಣ ಪ್ರೀತಿ ತೋರಿಸಿದ್ದಾರೆ ಅಷ್ಟೇ. ಮುಂದಿನ ಚುನಾವಣೆಗೆ ಅಸ್ತಿತ್ವ ಉಳಿಸಿಕೊಳ್ಳಲು ನೇಮಕ ಮಾಡಿದ್ದಾರೆ .
ನಾನು ಲಿಂಗಾಯತ ಮತ ಸೆಳೆಯಲು ಪ್ರವಾಸ ಮಾಡುತ್ತಿಲ್ಲ. ನಮಗೆ ಎಲ್ಲಾ ಜಾತಿಗಳೂ ಬಹಳ ಮುಖ್ಯ. ಎಲ್ಲಾ ಸಮುದಾಯದ ಮಠಗಳಿಗೂ ಭೇಟಿ ನೀಡುತ್ತಿದ್ದೇನೆ. ಲಿಂಗಾಯತ ಸಮುದಾಯದ ಜನರು ಅಷ್ಟೇನೂ ಮೂರ್ಖರಲ್ಲ ಎಂದರು.
ಇದನ್ನೂ ಓದಿ: ಲಿಂಗಾಯತ ಮತ ಬೇಟೆ ನಾಚಿಗೆಗೇಡಿನ ಸಂಗತಿ: ಕೈ ನಾಯಕರಿಗೆ ಬಿಜೆಪಿ ಟಾಂಗ್