ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಊರಲ್ಲೇ ಉದ್ಯೋಗ ಪಡೆಯಿರಿ ಎಂದು (ಮನರೇಗಾ) ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ ಕರೆ ನೀಡಿದರು. ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಮನರೇಗಾ ಯೋಜನೆಯಲ್ಲಿ ಮಹಿಳೆ ಸಹಭಾಗಿತ್ವ ಅತಿ ಕಡಿಮೆ ಇರುವ ಗ್ರಾಪಂಗಳಾದ ಕೋರಹಳ್ಳಿ, ಬಮ್ಮನಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಮಹಿಳಾ ಕಾಯಕೋತ್ಸವ ಅಭಿಯಾನದಲ್ಲಿ ಅವರು ಮಾತನಾಡಿದರು.
Advertisement
ಮಹಿಳಾ ಸಮಾನತೆಯೆಂಬುದನ್ನು ಇಲ್ಲಿನ ಮಣ್ಣಿನ ಕಣ ಕಣದಲ್ಲಿ 12ನೇ ಶತಮಾನದಲ್ಲೇ ಬಸವೇಶ್ವರು ಸಾರಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಮಹಿಳಾ ಭಾವಹಿಸುವಿಕೆ ತುಂಬಾ ಕಡಿಮೆ ಇರುವುದು ಸರಿಯಲ್ಲ. ಕೊರಹಳ್ಳಿ ಗ್ರಾಮದಲ್ಲಿ ಶೇ. 24.25, ಬಮ್ಮನಹಳ್ಳಿ ಗ್ರಾಮದಲ್ಲಿ. ಶೇ. 23.30 ಮಹಿಳೆಯರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ, ಗ್ರಾಮೀಣ ಪ್ರದೇಶದ ಮಹಿಳೆಯರು ನರೇಗಾ ಯೋಜನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಉದ್ಯೋಗ ಚೀಟಿಗಳು ಸಕ್ರಿಯಾಗಿವೆ. ಸಮೀಕ್ಷೆ ವೇಳೆ ಉದ್ಯೋಗ ಚೀಟಿ ಸಂಖ್ಯೆ ಹೊಂದಿದ್ದು ಭೌತಿಕ ಪುಸ್ತಕ ಹೊಂದಿಲ್ಲದ ಕುಟುಂಬಗಳಿಗೆ ಸರ್ವೇ ಸಮಯದಲ್ಲಿ ಸ್ಥಳದಲ್ಲೇ ಉದ್ಯೋಗ ಚೀಟಿ ನೀಡುವಂತೆ ಸೂಚಿಸಿದರು. ಸಮೀಕ್ಷಾ ಅವ ಧಿಯಲ್ಲಿ ಕೊರಹಳ್ಳಿ ಗ್ರಾಮದಲ್ಲಿ ಬದು ನಿರ್ಮಾಣಕ್ಕೆ 35, ಕೃಷಿಹೊಂಡ 22, ತೆರೆದ ಬಾವಿಗೆ 1, ಜಾನುವಾರು ಶೇಡ್ 33, ಕಾಮಗಾರಿಗೆ ಬೇಡಿಕೆ ಪಡೆಯಲಾಗಿದೆ. ಸಕ್ರಿಯಾವಾಗಿರುವ ಉದ್ಯೋಗ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.
Related Articles
Advertisement