ಧಾರವಾಡ: ಭಾರತದಲ್ಲಿನ ಮಹಿಳೆ ಋತುಚಕ್ರದ ಸಮಯದಲ್ಲಿ ತನ್ನ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರ ಬಗ್ಗೆ ಗಮನ ನೀಡಬೇಕು ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಷನ್ ಆಫ್ ಇಂಡಿಯಾ ಮೌಲ್ಯಮಾಪನ ಅಧಿ ಕಾರಿ ಸುಮನ್ ಹೆಬ್ಳಿಕರ್ ಹೇಳಿದರು.
ವಿಶ್ವದಲ್ಲಿ ಆಚರಿಸುವ ಋತುಚಕ್ರದ ಸಮಯದ ವೈಯಕ್ತಿಕ ಸ್ವಚ್ಛತೆ ದಿನದ ಅಂಗವಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಷನ್ ಆಫ್ ಇಂಡಿಯಾ ಧಾರವಾಡ ಶಾಖೆ ಮತ್ತು ಯನಿ ಅಬೆಕ್ಸ್‌ಅಲೋಯ್ ಪೊಡೆಕ್ಸ್ ಲಿಮಿಟೆಡ್ ಸಹಯೋಗದಲ್ಲಿ ನರೇಂದ್ರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಋತುಚಕ್ರದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮತ್ತು ಸಾನಿಟರಿ ನ್ಯಾಪಕಿನ್ ಹಂಚಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಶೇ.71ರಷ್ಟು ಮಹಿಳೆಯರು ಋತುಚಕ್ರದ ಸಮಯದಲ್ಲಿ ತಮ್ಮ ವೈಯಕ್ತಿಕ ಸ್ವಚ್ಛತೆ ಬಗ್ಗೆ ಸರಿಯಾಗಿ ಗಮನ ಹರಿಸುವುದಿಲ್ಲ. ಆದ್ದರಿಂದ ಶೇ.30ರಷ್ಟು ಮಹಿಳೆಯರು ಸಂತಾನೋತ್ಪತ್ತಿ ಮಾರ್ಗದ ಸೋಂಕಿನಿಂದ ಬಳಲುತ್ತಿದ್ದಾರೆ. ಶೇ.40ರಷ್ಟು ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳು ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ ಎಂದರು.
ಹದಿಹರೆಯದವರು ಈ ಸಮಯದಲ್ಲಿ ತಮ್ಮ ವೈಯಕ್ತಿಕ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು. ಹದಿಹರೆಯದ ವಯಸ್ಸಿನ ಬದಲಾವಣೆ ಮತ್ತು ಋತುಚಕ್ರದಲ್ಲಿ ಉಪಯೋಗಿಸುವ ಸಾನಿಟರಿ ನ್ಯಾಪಕಿನ್ ಆಯ್ಕೆ, ಸಮಯಕ್ಕೆ ಸರಿಯಾಗಿ ಬದಲಾಯಿಸುವುದು, ವೈಯಕ್ತಿಕ ಸ್ವಚ್ಛತೆ ಕಾಡಿಕೊಳ್ಳುವುದರ ಬಗ್ಗೆ ತಿಳಿವಳಿಕೆ ನೀಡಲಾಯಿತು.
ಇದೇ ಸಮಯದಲ್ಲಿ ಯನಿ ಅಬೆಕ್ಸ್‌ಅಲೋಯ್ ಪೊÅಡೆಕ್ಟ್ ಲಿಮಿಟೆಡ್ ಧಾರವಾಡ ಇವರ ವತಿಯಿಂದ 50 ವಿದ್ಯಾರ್ಥಿನಿಯರಿಗೆ ಸಾನಿಟರಿ ನ್ಯಾಪಕಿನ್ ಅನ್ನುಉಚಿತವಾಗಿ ಕೊಡಲಾಯಿತು. ಪ್ರಾಶುಂಪಾಲ ಗುರುಶಾಂತಯ್ಯ ಮತ್ತು ಶಿಕ್ಷಕ ವರ್ಗದವರು, ಪ್ಲಾನಿಂಗ್ ಅಸೋಶಿಯೇಷನ್‌ಆಫ್ ಇಂಡಿಯಾದ ಪ್ರಕಾಶ ಜೋಡಳ್ಳಿ ಇದ್ದರು.