ಗಂಗಾವತಿ: ಸ್ವಾತಂತ್ರÂ ಪೂರ್ವದಲ್ಲೇ ಮಹಿಳೆಯರಿಗೆ ಶಿಕ್ಷಣ ಕೊಡುವ ಮೂಲಕ ದೇಶದ ಪ್ರಥಮ ಶಿಕ್ಷಕಿಯಾಗಿದ್ದ ಸಾವಿತ್ರಿ ಜ್ಯೋತಿಬಾಯಿ ಫುಲೆಯವರಂತೆ ಎಲ್ಲಾ ಮಹಿಳೆಯರು ಶೈಕ್ಷಣಿಕ ಜಾಗೃತಿ ಹೊಂದಬೇಕು. ಮಹಿಳೆಯರ ಸಾಧನೆಗೆ ಪುರುಷರು ಸಹಕಾರ ನೀಡುವಂತೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಸರೋಜಮ್ಮ ಕಾಲೇಜಿನಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಮೂಢನಂಬಿಕೆ ಮತ್ತು ಮಹಿಳೆಯರನ್ನು ಶೋಷಣೆ ಮಾಡುವ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ಹಾಗೂ ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೆ ಪ್ರತ್ಯೇಕ ಶಾಲೆ ಆರಂಭ ಮಾಡಿ ಸಮಾಜದ ವಿರೋಧದ ಮಧ್ಯೆ ಮಹಿಳೆಯರಿಗೆ ಶಿಕ್ಷಣ ಕೊಟ್ಟರು.
ಅಂದು ಸಮಾಜದ ಪಟ್ಟಭದ್ರರು ಜ್ಯೋತಿಬಾ ಫುಲೆ ಹಾಗೂ ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರಿಗೆ ಚಿತ್ರ ಹಿಂಸೆ ನೀಡಿ, ಅವಮಾನ ಮಾಡಿದರೂ ಲೆಕ್ಕಿಸದೇ ಶಿಕ್ಷಣ ನೀಡಿ ಮಹಿಳೆಯರನ್ನು ಜಾಗೃತಗೊಳಿಸಿದ್ದರು. ಸ್ವಾತಂತ್ರÂ ನಂತರ ಹೆಣ್ಣು, ಗಂಡು ಎಂಬ ಬೇಧವಿಲ್ಲದೇ ಸರ್ವರಿಗೂ ಶಿಕ್ಷಣ ನೀಡಲಾಗುತ್ತಿದೆ. ಸರ್ವರೂ ಶಿಕ್ಷಣ ಪಡೆದು ಸಂವಿಧಾನದ ಆಶಯಗಳನ್ನು ಅನುಷ್ಠಾನ ಮಾಡಬೇಕಿದೆ ಎಂದರು.
ಕಲ್ಮಠದ ಡಾ| ಕೊಟ್ಟೂರು ಮಹಾಸ್ವಾಮಿ, ತಹಶೀಲ್ದಾರ್ ವಿ.ಎಚ್. ಹೊರಪೇಟೆ, ಇಒ ಡಾ| ಮೋಹನ್, ಬಿಇಒ ಸೋಮಶೇಖರಗೌಡ, ಕೊಟ್ಟೂರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶರಣೇಗೌಡ, ಪ್ರಾಚಾರ್ಯ ಡಾ| ರವಿ ಚವ್ಹಾಣ ಸೇರಿ ಅನೇಕರಿದ್ದರು.