Advertisement

“ಜಲಸಂರಕ್ಷಣೆ ಒಲವು ಎಲ್ಲೆಡೆ ಪಸರಿಸಲಿ’

08:04 PM Dec 09, 2019 | Team Udayavani |

ವೇಣೂರು: ಜನಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ನೀರಿನ ಬೇಡಿಕೆಯೂ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕಾಡದಿರಬೇಕಾದರೆ ಅಂತರ್ಜಲ ಮಟ್ಟ ಹೆಚ್ಚಳವಾಗಬೇಕು. ನದಿಗಳಲ್ಲಿ ಹರಿಯುವ ನೀರನ್ನು ತಡೆಯುವ ಎನ್ನೆಸ್ಸೆಸ್‌ನ ಕಾರ್ಯ ಎಲ್ಲರಿಗೂ ಸ್ಫೂರ್ತಿ ದಾಯಕ. ಈ ಮೂಲಕ ಜಲಸಂರಕ್ಷಣೆ ಒಲವು ಎಲ್ಲೆಡೆ ಪಸರಿಸಲಿ ಎಂದು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಹೇಳಿದರು.

Advertisement

ಮೂಡುಬಿದಿರೆ ಆಳ್ವಾಸ್‌ ಕಾಲೇಜು ಎನ್ನೆಸ್ಸೆಸ್‌ ಘಟಕ, ನಾರಾವಿ ಗ್ರಾ.ಪಂ., ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಊರವರ ಸಹಕಾರದಲ್ಲಿ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌ ನೇತೃತ್ವದಲ್ಲಿ ಸೋಮವಾರ ನಾರಾವಿ ಫಲ್ಗುಣಿ ನದಿಗೆ ಜಲ ಸಾಕ್ಷರತೆ ಮೂಡಿಸುವ ಸಾಂಪ್ರದಾಯಿಕ ಕಟ್ಟ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌ ಮಾತ ನಾಡಿ, ಕಳೆದ ಬಾರಿ ವಿವಿಧ ಗ್ರಾಮದ ಸುಮಾರು 10 ಕಡೆಗಳಲ್ಲಿ ವಿವಿಧ ಕಾಲೇಜಿನ ಎನ್ನೆನ್ನೆಸ್‌ ವಿದ್ಯಾರ್ಥಿಗಳ ಸಹಕಾರದಲ್ಲಿ ಸಾಂಪ್ರದಾಯಿಕ ಕಟ್ಟ ನಿರ್ಮಿಸಲಾಗಿತ್ತು. ಈ ಬಾರಿ ಈಗಾಗಲೇ 19 ಗ್ರಾ.ಪಂ.ಗಳ 50 ಕಡೆಗಳಲ್ಲಿ ಕಟ್ಟ ನಿರ್ಮಿಸಲು ಬೇಡಿಕೆ ಬಂದಿದೆ. ಕೃಷಿಕರು, ವಿವಿಧ ಕಾಲೇಜುಗಳ ಎನ್ನೆನ್ನೆಸ್‌ ವಿದ್ಯಾರ್ಥಿ ಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಲ್ಲಿ ಕಟ್ಟ ನಿರ್ಮಾಣ ಮಾಡಲಾಗು ವುದು. ಕೃಷಿ ಇಲಾಖೆ, ಜಲಾನಯನ, ಜಿ.ಪಂ. ಎಂಜಿನಿಯರಿಂಗ್‌ ವಿಭಾಗದಿಂದ ಅಲ್ಲಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಿ ಪುನಶ್ಚೇತನಗೊಳಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಆಳ್ವಾಸ್‌ ಕಾಲೇಜಿನ ಎನ್ನೆಸ್ಸೆಸ್‌ ಘಟಕದ ಶಿಬಿರಾಧಿಕಾರಿ ಪ್ರೊ| ವಸಂತ್‌ ಮಾತನಾಡಿ, ನಮ್ಮ ಘಟಕದಿಂದ ಈ ಬಾರಿ 7 ಕಡೆಗಳಲ್ಲಿ ನದಿಗೆ ಕಟ್ಟ ನಿರ್ಮಿಸುವ ಯೋಜನೆ ಇದೆ. ಕಳೆದ 10 ವರ್ಷಗಳಿಂದ ನಮ್ಮ ಘಟಕವು ಈ ಕಾರ್ಯ ಮಾಡುತ್ತಿದ್ದು, ಜನಮನ್ನಣೆ ವ್ಯಕ್ತವಾಗುತ್ತಿದೆ. ಘಟಕದಿಂದ ಜಲಜಾಗೃತಿ ಮೂಡಿಸಿರುವ ತೃಪ್ತಿ ಇದೆ ಎಂದರು.

ಆಳ್ವಾಸ್‌ ಕಾಲೇಜಿನ ಸುಮಾರು 100 ಮಂದಿ ಎನ್ನೆಸ್ಸೆಸ್‌ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಜಲಸಂರಕ್ಷಣೆಯ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ, ಸದಸ್ಯರು, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ, ಗ್ರಾಮಲೆಕ್ಕಿಗರಾದ ನಾರಾಯಣ ಕುಲಾಲ್‌, ಅಕ್ಷತ್‌, ಸುಜಿತ್‌, ಶಿಬಿರಾಧಿ ಕಾರಿಗಳಾದ ಪ್ರೊ| ವಿನೋದ್‌ ಕುಮಾರ್‌, ಪ್ರೊ| ದೀಕ್ಷಿತಾ, ಪ್ರೊ| ಸಂಗೀತಾ ಶ್ಯಾನುಭೋಗ್‌ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advertisement

ಹಾರೆ ಹಿಡಿದ ತಹಶೀಲ್ದಾರ್‌
ಜಲಸಂರಕ್ಷಣೆ ಎಂಬುದು ಪುಣ್ಯ ಕಾರ್ಯ. ಜಲಸಾಕ್ಷರತೆಯ ಮನಸ್ಥಿತಿ ಎಲ್ಲ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಬೇಕು ಎಂದು ತಿಳಿಸಿದ ತಹಶೀಲ್ದಾರ್‌ ತಾವೇ ಹಾರೆ-ಪಿಕ್ಕಾಸು ಹಿಡಿಯುವ ಮೂಲಕ ಕಟ್ಟ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ತಹಶೀಲ್ದಾರ್‌ ಕಳೆದ ಬಾರಿಯೂ ವೇಣೂರಿನ ಹಲವು ಕಡೆಗಳಲ್ಲಿ ಸಾಂಪ್ರದಾಯಿಕ ಕಟ್ಟ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು.

ಪೋಲು ತಡೆಗೆ ಕ್ರಮ
ಉಚಿತವಾಗಿ ಒದಗಿಸಲಾಗಿರುವ ಕೃಷಿ ನೀರಾವರಿ ವಿದ್ಯುತ್‌ ವ್ಯವಸ್ಥೆಯಲ್ಲಿ ನೀರನ್ನು ಮಿತವ್ಯಯವಾಗಿ ಬಳಸಬೇಕಿದೆ. ಬೇಸಗೆ ಕಾಲದಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತದೆ. ನೀರಿನ ಪೋಲನ್ನು ತಪ್ಪಿಸಲು ನಿಯಂತ್ರಣ ಹೇರುವ ಬಗ್ಗೆ ಚಿಂತನೆ ನಡೆಸಲಾಗಿದೆ
– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next