Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಸೀಕರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಜಲಶಕ್ತಿ ಅಭಿಯಾನ ಅನುಷ್ಠಾನ ಕುರಿತು ಅಧಿಕಾರಿ ಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಜಲ ಸಂವರ್ಧನೆ ಮತ್ತು ಜಲ ಸಾಕ್ಷರತೆಗೆ ಹೆಚ್ಚು ಆದ್ಯತೆ ನೀಡಬೇಕು. ಬರಪೀಡಿತ ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆ ಯುವುದು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು. ಅಕ್ರಮವಾಗಿ ತೆಗೆಯುವವರಿಗೆ ಶಿಕ್ಷೆ ವಿಧಿಸಿ ನಿಯಮಾ ವಳಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸ ಬೇಕು. ಜೊತೆಗೆ ಈ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಗೆ ಪರಿಣಾಮ ಕಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದರು.
Related Articles
Advertisement
ಜಿಲ್ಲೆಯಲ್ಲಿ ಈವರೆಗೆ ಕೈಗೊಂಡಿರುವ ಕೆರೆಗಳ ಅಭಿವೃದ್ಧಿ ಯೋಜನೆಗಳ ಜಲಸಂರಕ್ಷಣೆಗೆ ಪ್ರಯತ್ನಗಳ ಬಗ್ಗೆ ಸುಶೀಲ್ ಕುಮಾರ್ ಹಾಗೂ ವಿವೇಕ್ ಗುಪ್ತ ಮೆಚ್ಚುಗೆ ವ್ಯಕ್ತಪಡಿಸಿದರು. ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಎಲ್ಲಾ ಕಲ್ಯಾಣಿ ಗಳನ್ನು ಆಂದೋಲನ ರೂಪದಲ್ಲಿ ಸ್ವಚ್ಛಗೊಳಿಸಬೇಕು. ಒಂದೆರಡು ಹೊಸ ಕಲ್ಯಾಣಿಗಳನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಸುಶಿಕ್ಷಿತ ಜನರು, ಉದ್ಯೋಗಿಗಳು, ನಿವೃತ್ತ ಅಧಿಕಾರಿ ಸಿಬ್ಬಂದಿ, ಸ್ವಯಂ ಉದ್ಯೋಗಿಗಳ ಸಂಪರ್ಕ ಜಾಲ ಮಾಡಿ ಎಲ್ಲರ ನೆರವು ಪಡೆದು ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಎಲ್ಲ ಗಣ್ಯರು, ಸಾಧಕರನ್ನು ಆಹ್ವಾನಿಸಿ ಆಂದೋಲನಕ್ಕೆ ಹೆಚ್ಚು ಚುರುಕು ನೀಡಿ ಎಂದು ಸುಶೀಲ್ ಕುಮಾರ್ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಜಿಲ್ಲೆಯಲ್ಲಿ ಈವರೆಗೆ ಜಲ ಸಂರಕ್ಷಣೆ, ಜಲ ಸಾಕ್ಷರತೆ, ಜಲ ಮರು ಪೂರಣ ಯೋಜನೆಯಡಿ ಕೈಗೊಂಡಿರುವ ಕ್ರಮಗಳು, ಸಂಘ ಸಂಸ್ಥೆಗಳು- ಸಾರ್ವಜನಿಕರ ಪ್ರತಿಸ್ಪಂದನೆ ಬಗ್ಗೆ ವಿವರಿಸಿದರು.
ಜಲ ಸಂರಕ್ಷಣೆ ಆಂದೋಲನ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜಲ ಸಂರಕ್ಷಣೆಯನ್ನು ಸಮುದಾಯ ಪಾಲ್ಗೊಳ್ಳುವಿಕೆ ಅಧಾರದ ಮೇಲೆ ಅಭಿವೃದ್ಧಿ ಪಡಿಸ ಲಾಗುತ್ತಿದೆ ಮುಂದಿನ 3 ತಿಂಗಳಲ್ಲಿ ಈ ಆಂದೋಲನ ವನ್ನು ಯಶಸ್ಸುಗೊಳಿಸಲು ಜಿಲ್ಲಾಡಳಿತ ಎಲ್ಲಾ ನೆರವು ನೀಡಲಿದೆ ಎಂದರು.
ಹಸಿರು ಭೂಮಿ ಪ್ರತಿಷ್ಠಾನದ ಪ್ರಮುಖರಾದ ಆರ್.ಪಿ ವೆಂಕಟೇಶ್ ಮೂರ್ತಿ, ಸುಬ್ಬಸ್ವಾಮಿ, ಪಾಷಾ, ಹರಿಪ್ರಸಾದ್, ಚಾ.ನಂ. ಅಶೋಕ್ ಮತ್ತಿತರರು ತಮ್ಮ ಸಂಘಟನೆ ಮೂಲಕ ಜಿಲ್ಲೆಯ ವಿವಿಧೆಡೆ ಮಾಡಿರುವ ಜಲ ಸಂರಕ್ಷಣಾ ಕಾರ್ಯಗಳು ಹಾಗೂ ಜಲ ಸಂರಕ್ಷಣೆಯನ್ನು ಆಂದೋಲನವನ್ನಾಗಿ ರೂಪಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ವಿವರಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಆನಂದ್ ಅವರು ಅರಸೀಕೆರೆ ಮತ್ತು ಚನ್ನರಾಯ ಪಟ್ಟಣ ತಾಲೂಕುಗಳಲ್ಲಿ ಕೈಗೊಳ್ಳಲಾಗಿರುವ ಜಲ ಸಂರಕ್ಷಣಾ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ, ವೇದಾವತಿ ನದಿ ಪುನಶ್ಚೇತನಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ವಿವರಿಸಿದರು.
ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಕಾಧಿಕಾರಿ ಎಂ.ಎಲ್.ವೈಶಾಲಿ, ಯೋಜನಾ ನಿರ್ದೇಶಕ ಅರುಣ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಕೃಷಿ ಕಾಲೇಜು ಡೀನ್ ದೇವಕುಮಾರ್, ಜಂಟಿ ಕೃಷಿ ನಿರ್ದೇಶಕ ಮಧುಸೂಧನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸುಧಾ ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಹನಿ ನೀರಾವರಿ ಅನುಷ್ಠಾನಗೊಳಿಸಿ:ಬರ ಪೀಡಿತ ಪ್ರದೇಶಗಳಲ್ಲಿ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹನಿ ನೀರಾವರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಸಾರ್ವಜನಿಕರಿಗೆ ಇದರ ಬಳಕೆ, ಸಬ್ಸಿಡಿಗಳ ಬಗ್ಗೆ ಮಾಹಿತಿ ನೀಡಬೇಕು ಜಲ ಸಂರಕ್ಷಣೆಗೆ ಈ ಇಲಾಖಾ ಅಧಿಕಾರಿಗಳು ಪ್ರಯತ್ನ ನಡೆಸಬೇಕು ಎಂದು ಸುಶೀಲ್ ಕುಮಾರ್ ಹೇಳಿದರು.