Advertisement
12ನೇ ಶತಮಾನದ ಶಿವಶರಣರ ವಚನಗಳು ಸರಳ ಹಾಗೂ ನೇರವಾಗಿ ಎದೆಗೆ ನಾಟುವಂತಹವು. ಇಂತಹ ವಚನಗಳನ್ನು ನಾವು ಶರಣರ ಮುಕ್ತ ಸಂವಿಧಾನದ ಬದುಕಿನ ನೀತಿ ಅಂಥ ಎಂದು ಕರೆಯುತ್ತೇವೆ. ಇಲ್ಲಿ ತತ್ವ ಪ್ರತಿಪಾದನೆ, ವಿಮರ್ಶೆ, ಟೀಕೆ ಟಿಪ್ಪಣಿಗಳಿವೆ. ಇಂತಹ ಮುಕ್ತ ಸಂವಿಧಾನ ಎಲ್ಲಿಯೂ ಸಿಗುವುದಿಲ್ಲ. ಆದ್ದರಿಂದ ವಚನ ಸಂವಿಧಾನವೇ ಭಾರತದ ಸಂವಿಧಾನ ಆಗಬೇಕು ಎಂದು ಬಯಸುವೆ. ಹೀಗಾದಾಗ ಮಾತ್ರ 12 ಶತಮಾನದಲ್ಲಿ ಸಾಕಾರಗೊಳ್ಳದ ಆಶಯ 21ನೇ ಶತಮಾನದಲ್ಲಿ ಸಾಕಾರಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
Related Articles
Advertisement
ಜಗದೀಶ್ ಮನೋವಾರ್ತೆ, ಡಾ.ವಿಜಯಕುಮಾರಿ ಕರಿಕಲ್, ಡಾ.ಎನ್.ಕೆ.ಲೋಲಾಕ್ಷಿ, ಪ್ರೊ.ಸಿ.ನಾಗಣ್ಣ, ಪ್ರೊ.ಚ.ಸರ್ವಮಂಗಳ, ಪ್ರೊ.ಒ.ಎಲ್.ನಾಗಭೂಷಣಸ್ವಾಮಿ, ಡಾ.ಸಂತೋಷಕುಮಾರ್ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಜೇಡರ ದಾಸಿಮಯ್ಯ ಅವರ ವಚನಗಳನ್ನು ವಾಚಿಸಿದರು. ಎಚ್.ಜನಾರ್ದನ್ (ಜನ್ನಿ), ನಿತಿನ್ ರಾಜರಾಂ ಶಾಸ್ತ್ರಿ, ದೇವಾನಂದ ವರಪ್ರಸಾದ್, ಪ್ರಭುರಾವ್ ಸೊನ್ನ, ಶರಧಿ ಪಾಟೀಲ್ ವಚನ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿಚಾರವಾದಿ ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ, ಕೆ.ಎಸ್. ಭಗವಾನ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ. ಶಿವರಾಂ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಇತರರಿದ್ದರು.
ಜಿಲ್ಲೆಯ 72 ಕಾಲೇಜಿಗಳಿಗೆ ಭೇಟಿ: ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಮಾತನಾಡಿ, ವ್ಯವಸ್ಥೆಯ ದುರುದ್ದೇಶವೇ ವ್ಯವಧಾನ ಕಳೆಯೋದು. ವ್ಯವಧಾನ ಮರುಸೃಷ್ಟಿಸುವುದೇ ಮತ್ತೆ ಕಲ್ಯಾಣದ ಆಶಯ. ವಚನ ಓದು ನಮ್ಮ ಮನವರಿಕೆ ಮಾಡುತ್ತದೆ. ವಾಸ್ತವತೆಯ ಅರಿವೇ ವಚನಗಳಾಗಿವೆ ಎಂದರು. 12ನೇ ಶತಮಾನದ ಕಲ್ಯಾಣದ ಆಶಯವನ್ನು ಮರು ನೆನಪಿಗೆ ತರಲು ಆರಂಭವಾಗಿದ್ದು ಮತ್ತೆ ಕಲ್ಯಾಣ. ಜಿಲ್ಲೆಯ 8 ತಾಲೂಕುಗಳ 72 ಕಾಲೇಜಿಗಳಿಗೆ ಭೇಟಿ ನೀಡಿ ವಚನ ಚಳವಳಿಯ ದರ್ಶನ ಮಾಡಿಸಲಾಗಿದೆ. ವಚನ ಗಾಯನ, ಚಿತ್ರ ರಚನೆ ನಡೆದಿದೆ ಎಂದು ಹೇಳಿದರು.
ವಚನಗಳಿಗೆ ಚಿತ್ರ ರೂಪ: ಮೈಸೂರಿನ ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅವರು ಮತ್ತೆ ಕಲ್ಯಾಣ ಕಾರ್ಯಕ್ರಮ ಹಿನ್ನೆಲೆ ವಚನ ಸಾಹಿತ್ಯವನ್ನು ಚಿತ್ರ ರೂಪಕ್ಕೆ ಇಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ವಚನ ಕ್ರಾಂತಿ, ಕಾಯಕ ತತ್ವ, ದಲಿತೋದ್ಧಾರ, ಅನ್ನ-ಅಕ್ಷರ ದಾಸೋಹ, ಸಮಾನತೆ, ಸ್ವಾತಂತ್ರ್ಯ ಮುಂತಾದ ವಿಚಾರಗಳನ್ನೊಳಗೊಂಡ ಹಲವಾರು ಚಿತ್ರಗಳನ್ನು ರಚಿಸಿ ಪ್ರದರ್ಶನಕ್ಕೆ ಇರಿಸಿದ್ದರು.