Advertisement

ರೆಸಾರ್ಟ್‌ ರಾಜಕಾರಣಕ್ಕೆ ಮತದಾರರು ಬುದ್ಧಿ ಕಲಿಸಲಿ

09:24 PM Jul 16, 2019 | Lakshmi GovindaRaj |

ದೇವನಹಳ್ಳಿ: ರಾಜ್ಯದಲ್ಲಿ ಬರಗಾಲ ಆವರಸಿ ರೈತರು ಹಾಗೂ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ರಾಜಕಾರಣಿಗಳು ತಮ್ಮ ಸ್ವಾರ್ಥ ಮತ್ತು ಅಧಿಕಾರದ ದುರಾಸೆಗಾಗಿ ಜನಹಿತ ಮರೆತಿದ್ದಾರೆ ಎಂದು ರಾಜ್ಯ ಪ್ರಜಾ ವಿಮೋಚನೆ ಚಳವಳಿ (ಸ್ವಾಭಿಮಾನಿ) ಅಧ್ಯಕ್ಷ ಮುನಿ ಆಂಜನಪ್ಪ ಆಕ್ರೋಶ ವ್ಯಕ್ತ ಪಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಜಾ ವಿಮೋಚನೆ ಚಳವಳಿ (ಸ್ವಾಭಿಮಾನ)ಯಿಂದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

Advertisement

ರೆಸಾರ್ಟ್‌ ರಾಜಕಾರಣಕ್ಕೆ ಖಂಡನೆ: ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರೆಸಾರ್ಟ್‌ ರಾಜಕಾರಣವನ್ನು ಖಂಡಿಸುತ್ತೇವೆ. ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿರುವ ರಾಜಕಾರಣಿಗಳನ್ನು ಮುಂದಿನ ದಿನಗಳಲ್ಲಿ ಸೋಲಿಸುವ ಮುಖಾಂತರ ಮತದಾರರು ಬುದ್ಧಿ ಕಲಿಸಬೇಕು. ಬರಗಾಲದಿಂದ ಜನ, ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ಕಾಡುತ್ತಿದೆ.

ಆದರೆ ರಾಜಕಾರಣಿಗಳು ರೆಸಾರ್ಟ್‌ನಲ್ಲಿ ಮೋಜು ಮಸ್ತಿಯಿಂದ ಶಾಸಕರು ಜನರ ಹಿತ ಮರೆತಿದ್ದಾರೆ. ಸಮಿಶ್ರ ಸರ್ಕಾರ ರಚನೆಯಾದ ಮೇಲೂ ಅಧಿಕಾರದ ಆಸೆಗಾಗಿ ಕಚ್ಚಾಡಿಕೊಂಡಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಹಾಗೆ ಉಳಿದುಕೊಂಡಿವೆ ಎಂದು ಹೇಳಿದರು.

ಶೀಘ್ರ ಸಭೆ ಕರೆಯಿರಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಡಾ. ಬಿ.ಆರ್‌ ಅಂಬೇಡ್ಕರ್‌ ಪುತ್ತಳಿ ನಿರ್ಮಾಣ ಮಾಡಲು ಸರ್ಕಾರದಿಂದ ಆದೇಶ ಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಭೆ ಕರೆಯುವಂತೆ ತಿಳಿಸಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೂಡಲೇ ಸಭೆ ಕರೆಯದಿದ್ದರೆ ಜು.24ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು.

ಪೊರಕೆ ಚಳವಳಿ, ಚಪ್ಪಲಿ ಚಳವಳಿ ಸೇರಿದಂತೆ ಇನ್ನಿತರೆ ಚಳವಳಿ ಮಾಡಲಾಗುವುದು. 2018 ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಮ್ಮುಖದಲ್ಲಿ ಸಬೇ ಮಾಡಲಾಗಿತ್ತು. 5 ತಿಂಗಳಾದರೂ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಕ್ರಮ ಕೈ ಗೊಂಡಿಲ್ಲ ಎಂದು ಆರೋಪಿಸಿದರು.

Advertisement

ತಾಲೂಕು ಪ್ರಜಾ ವಿಮೋಚನ ಚಳವಳಿ (ಸ್ವಾಭಿಮಾನ) ಅಧ್ಯಕ್ಷ ಸೋಲೂರು ನಾಗರಾಜ್‌, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹನುಮಣ್ಣ ಗುಳಾ, ಬೆಂಗಳೂರು ನಗರ ಅಧ್ಯಕ್ಷ ಆಯುಬ್‌ ಖಾನ್‌, ಜಿಲ್ಲಾ ಉಪಾಧ್ಯಕ್ಷ ಕೊನಘ‌ಟ್ಟ ಬೈರಪ್ಪ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಮದ್ದೂರಪ್ಪ, ಬೆಂಗಳೂರು ನಗರ ಕಾರ್ಯದರ್ಶಿ ನಿಂಗಣ್ಣ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮುನಿರತ್ನಮ್ಮ, ತಾಲೂಕು ಉಪಾಧ್ಯಕ್ಷ ರಾಮ ಪ್ರಿಯನ್‌, ತಾಲೂಕು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next