Advertisement
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ-ಅಮಿತ್ ಶಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಕುಳಿತು ಕೈಗೊಳ್ಳುವ ತೀರ್ಮಾನವೇ ಅಂತಿಮ. ಹೀಗಾಗಿ, ನಾನು ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಎದುರಿಸಲು ಸಜ್ಜಾಗುತ್ತಿದ್ದೇನೆ ಎಂದು ತಿಳಿಸಿದರು. ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಯಾಕೆ ಮಾಡಿದಿರಿ ಎಂದು ಹಲವಾರು ಕಾರ್ಯಕರ್ತರು, ಮುಖಂಡರು ನನ್ನ ಬಳಿ ಕೇಳಿದ್ದುಂಟು. ಆದರೆ, ನಾನು ಯಾರನ್ನೂ ದೂಷಿಸಲು ಹೋಗುವುದಿಲ್ಲ. ನನ್ನ ಮೇಲೆಯೇ ತಪ್ಪು ಹಾಕಿಕೊಳ್ಳುತ್ತೇನೆ. ಆಗಿದ್ದರ ಬಗ್ಗೆ ಯೋಚಿಸಿ ಫಲವಿಲ್ಲ ಎಂದು ಹೇಳಿದರು.
ತುಮಕೂರು ಲೋಕಸಭೆ ಚುನಾವಣೆಯಲ್ಲಿ ನಾನು ಸೋತಿದ್ದು ದೇವರ ತೀರ್ಮಾನ ಎಂದುಕೊಳ್ಳುತ್ತೇನೆ. ನನ್ನನ್ನು ಸೋಲಿಸಲು ಯತ್ನಿಸಿದ ಪುಣ್ಯಾತ್ಮರಿಗೆ ಮಹಾನುಭಾವರಿಗೆ ಒಳ್ಳೆಯದಾಗಲಿ. ನಾನು ಯಾರಿಗೂ ಕೆಡುಕು ಬಯಸುವುದಿಲ್ಲ ಎಂದು ಹೇಳಿದರು.