Advertisement

ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಸಂಸ್ಥೆಗಳನ್ನು ಮರೆಯಬಾರದು: ಕೋಟ

12:28 PM Sep 04, 2019 | Team Udayavani |

ಮುಂಬಯಿ, ಸೆ. 3: ರಾಷ್ಟ್ರವು ಭೌಗೋಳಿಕವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ರಾಷ್ಟ್ರದ ಭಾವಿ ಪ್ರಜೆಗಳಾದ ನಮ್ಮ ಮಕ್ಕಳು ಜಾಗತಿಕ ಅರಿವಿನ ಮೌಲಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಶೈಕ್ಷಣಿಕ ಕ್ಷೇತ್ರವು ಅದೆಷ್ಟೋ ಆವಿಷ್ಕಾರಗಳೊಂದಿಗೆ ಮುನ್ನಡೆ ಸಾಧಿಸಿದ್ದು ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಸ್ಪಂದಿಸುವ ಅಗತ್ಯವಿದೆ. ಆದರೆ ವಿಶ್ಷಕ್ಕೆ ಮಾದರಿಯಾದ ಭಾರತೀಯ ಸಂಸ್ಕೃತಿಯನ್ನು ಮರೆಯದೆ ಮಾತಾಪಿತರು, ಗುರುವರ್ಯರು ಹಾಗೂ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡಿದ ಇಂತಹ ಸಂಸ್ಥೆಗಳನ್ನು ಮರೆಯದೆ ಸುಶಿಕ್ಷಿತರಾದಾಗ ಮಾತ್ರ ನಿಮ್ಮ ಬಾಳು ಹಸನಾಗುವುದು ಎಂದು ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಮುಜರಾಯಿ ಖಾತೆ ಸಚಿವರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ನುಡಿದರು.

Advertisement

ಆ. 31ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಕನ್ನಡ ಸಂಘ ಸಾಂತಾಕ್ರೂಜ್‌ ತನ್ನ 62ನೇ ವಾರ್ಷಿಕ ಮಹಾಸಭೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮುಂಬಯಿಗರ ಕನ್ನಡಾಭಿಮಾನವನ್ನು ಕಂಡಾಗ ಸಂತೋಷವಾಗುತ್ತಿದೆ. ನಾಡು-ನುಡಿಯ ಬಲವರ್ಧನೆಗೆ ಇಲ್ಲಿನವರ ಕೊಡುಗೆ ಅಪಾರವಾಗಿದೆ ಎಂದರು.

ಅಧ್ಯಕ್ಷತೆಯನ್ನು ಅಧ್ಯಕ್ಷ ಎಲ್. ವಿ. ಅಮೀನ್‌ ವಹಿಸಿದ್ದು, ಸಂಘದ ಜತೆ ಕೋಶಾಧಿಕಾರಿ ದಿನೇಶ್‌ ಬಿ. ಅಮೀನ್‌, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ-ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಲಕ್ಷ್ಮೀ ಎನ್‌. ಕೋಟ್ಯಾನ್‌ ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್‌. ಶೆಟ್ಟಿ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ಸುಧಾಕರ್‌ ಉಚ್ಚಿಲ್ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಲಕ್ಷ್ಮೀ ಎನ್‌. ಕೋಟ್ಯಾನ್‌ ವಂದಿಸಿದರು.

ಶಿಕ್ಷಣ ಪ್ರೇಮಿಗಳಾದ ನಾವುಗಳು, ಈ ಸಂಘ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪ್ರೇರೇಪಿಸುತ್ತಿದ್ದೇವೆ. ಪ್ರತಿಭಾನ್ವಿತ ಮಕ್ಕಳಾಗಲಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಾಗಲೀ ಶಿಕ್ಷಣದಿಂದ ವಂಚಿತರಾಗದೆ ಸಾಕ್ಷರತೆಯನ್ನು ಸಾಧಿಸಬೇಕು ಅನ್ನುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ನೂರಾರು ವಿದ್ಯಾದಾನಿಗಳು ನಮ್ಮೊಂದಿಗೆ ಸ್ಪಂದಿಸುತ್ತಿದ್ದು ಎಲ್ಲರ ಸಹಯೋಗದಿಂದ ಈ ಕಾರ್ಯ ಸಾಧ್ಯವಾಗಿದೆ. ಆದ್ದರಿಂದಲೇ ಈ ಸಂಘ ಈ ಮಟ್ಟಕ್ಕೆ ಬೆಳೆದು ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಎಲ್. ವಿ. ಅಮೀನ್‌ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿ ಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ, ಉಪಾಧ್ಯಕ್ಷರಾದ ಹರೀಶ್‌ ಜಿ. ಅಮೀನ್‌, ಶ್ರೀನಿವಾಸ ಆರ್‌. ಕರ್ಕೇರ ಉಪಸ್ಥಿತರಿದ್ದು, ವಾರ್ಷಿಕವಾಗಿ ಕೊಡಮಾಡುವ 2019ನೇ ಸಾಲಿನ ದತ್ತು ಸ್ವೀಕೃತ ವಿದ್ಯಾರ್ಥಿಗಳ ವಿದ್ಯಾಸಹಾಯ ನಿಧಿಯನ್ನು ವಿತರಿಸಲಾಯಿತು. ಜಯ ಪೂಜಾರಿ ಮತ್ತು ಎನ್‌. ಎಂ. ಸನೀಲ್ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.

Advertisement

ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೋವಿಂದ ಆರ್‌. ಬಂಗೇರ, ಸುಮಾ ಎಂ. ಪೂಜಾರಿ, ಶಾಲಿನಿ ಎಸ್‌. ಶೆಟ್ಟಿ, ಸಲಹಾ ಸಮಿತಿಸದಸ್ಯರಾದ ನಾರಾಯಣ ಎಸ್‌. ಶೆಟ್ಟಿ, ಎನ್‌. ಎಂ. ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್‌, ವಿಜಯ ಕುಮಾರ್‌ ಕೆ. ಕೋಟ್ಯಾನ್‌, ಲಿಂಗಪ್ಪ ಬಿ. ಅಮೀನ್‌, ಸುಜಾತಾ ಸುಧಾಕರ್‌ ಉಚ್ಚಿಲ್, ಅಂತರಿಕ ಲೆಕ್ಕ ಪರಿಶೋಧಕ ರಾಜಶೇಖರ್‌ ಎ. ಅಂಚನ್‌,ದಿನೇಶ್‌ ಅಮೀನ್‌, ಶಿಕ್ಷಣ ಸಮಿತಿಯಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್‌, ಕಾರ್ಯದರ್ಶಿ ಶಕೀಲಾ ಪಿ. ಶೆಟ್ಟಿ ಸೇರಿದಂತೆ ಸದಸ್ಯರು ಹೆಚ್ಚಿನಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next