Advertisement

ಸುಭಿಕ್ಷೆಯ ಸಂಕೇತವೇ ದೀಪದ ಬೆಳಕು

01:02 PM Apr 05, 2020 | Sriram |

ಬೆಳ್ತಂಗಡಿ: ಮಾರಕ ಕೋವಿಡ್ 19 ಸೋಂಕಿನ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ದೇಶವಾಸಿಗಳಾದ ನಮ್ಮೆಲ್ಲರ ಪಾಲ್ಗೊಳ್ಳುವಿಕೆ ಅಗತ್ಯ. ಅದಕ್ಕೆ ಪೂರಕವಾಗಿ ಪ್ರಧಾನ ಮಂತ್ರಿಯವರು ರವಿವಾರ ರಾತ್ರಿ 9 ಗಂಟೆಗೆ ಇಡೀ ದೇಶದ ಪ್ರಜೆಗಳು ದೀಪವನ್ನು ಆರಿಸಿ ಮನೆಯಲ್ಲಿ ಜ್ಯೋತಿ ಬೆಳಗುವಂತೆ ಕರೆ ನೀಡಿದ್ದಾರೆ. ನಾಡಿನ ಸುಭಿಕ್ಷೆಯ ಸಂಕೇತವೇ ಬೆಳಕು; ಆದ್ದರಿಂದ ಪ್ರಧಾನಿಯವರ ಕರೆಗೆ ನಾವೆಲ್ಲರೂ ಸ್ಪಂದಿಸೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕರೆ ನೀಡಿದ್ದಾರೆ.

Advertisement

“ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ’ ಎಂದು ಪ್ರಾಜ್ಞರು ಹೇಳಿದ್ದಾರೆ. ಚಕ್ರವರ್ತಿಯೇ ಇರಲಿ ಶ್ರೀಸಾಮಾನ್ಯನೇ ಇರಲಿ ಅವನ ಮನೆಯನ್ನು ಬೆಳಗುವ ಜ್ಯೋತಿ ಒಂದೇ ರೀತಿಯ ಪ್ರಕಾಶವನ್ನು ಕೊಡುತ್ತದೆ. ರವಿವಾರ ರಾತ್ರಿ ಈ ಜ್ಯೋತಿಯನ್ನು ಹಚ್ಚಬೇಕು ಎಂದು ಪ್ರಧಾನಿ ಹೇಳಿದ್ದಾರೆ. ನಾವು ಕುಟುಂಬದ ಸದಸ್ಯರೆಲ್ಲ ಸೇರಿ ಮನೆಗೆ ಹಾಗೂ ಮನಸ್ಸಿಗೆ ಬೆಳಕನ್ನು ಕೊಟ್ಟರೆ ಇಡೀ ದೇಶ, ವಿಶ್ವವೇ ಸುಭಿಕ್ಷವಾಗಲಿದೆ ಎಂಬ ಸಂದೇಶ ಇದರಲ್ಲಿ ಅಡಕವಾಗಿದೆ. ಇದನ್ನು ನೀವೆಲ್ಲರೂ ದಯವಿಟ್ಟು ಪ್ರೀತಿಯಿಂದ ಸ್ವೀಕರಿಸಿ, ಆಸ್ವಾದಿಸಿ, ಆನಂದಿಸಿ. ರವಿವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಜ್ಯೋತಿ ಹಚ್ಚಿ ಶುಭವನ್ನು ಹಾರೈಸಿ. ಈ ಮೂಲಕ ನಮ್ಮ ನಾಡಿಗೆ, ರಾಷ್ಟ್ರಕ್ಕೆ, ವಿಶ್ವಕ್ಕೆ ಶುಭವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆ ತಿಳಿಸಿದ್ದಾರೆ.

ವಿಶೇಷ ಪ್ರಾರ್ಥನೆ
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಶದ ಒಳಿತನ್ನು ಹಾರೈಸಿ ವಿಶೇಷ ಪ್ರಾರ್ಥನೆಯೂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next