ತುಮಕೂರು: ಭಾರತದಲ್ಲಿ 2020ರಿಂದ ಪ್ರಾರಂಭ ವಾದ ಕೋವಿಡ್ ಸಾಂಕ್ರಾಮಿಕ ಇದುವರೆಗೂ ದೇಶದಲ್ಲಿ 3.35 ಕೋಟಿ ಜನರನ್ನು ಸೋಂಕಿತರನ್ನಾಗಿಸಿದೆ. ಕರ್ನಾಟಕದಲ್ಲಿ 29.71ಲಕ್ಷ, ತುಮಕೂರು
ಜಿಲ್ಲೆಯಲ್ಲಿ 1.20 ಲಕ್ಷ ಸೋಂಕಿತರನ್ನಾಗಿಸಿದೆ ವರ್ತ ಮಾನದಲ್ಲಿ ಈ ಸಾಂಕ್ರಾಮಿಕ 2024ರ ವರೆಗೂ ಮನುಷ್ಯರ ಜೀವನ ಕ್ರಮದೊಂದಿಗೆ ಇರುವುದು ಗೋಚರಿಸಿದೆ. ಹೀಗಾಗಿ ಕೊರೊನಾ 3ನೇ ಅಲೆ ಯಲ್ಲಿಸ್ಲಂ ಮಕ್ಕಳನ್ನು ರಕ್ಷಣೆಗಾಗಿ ನಾವು ಜಾಗೃತ ರಾಗಬೇಕಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಮೂರ್ತಿ ಹೇಳಿದರು.
ನಗರದ ಎಸ್.ಎನ್.ಪಾಳ್ಯದಲ್ಲಿ ನಡೆದ ಕೋವಿಡ್-19ಸಾರ್ವಜನಿಕ ಜಾಗೃತಿ ಸಭೆಯಲ್ಲಿ ಕರಪತ್ರ ಮತ್ತು ಸ್ಟಿಕ್ಕರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ದಿಂದ ರಕ್ಷಿಸಿಕೊಳ್ಳಲು ಕೋವಿಶೀಲ್ಡ್, ಕೋವ್ಯಾಕ್ಸಿನ್ ಜನಸಾಮಾನ್ಯರಿಗೆ ಲಭ್ಯವಿದೆ. ಕಡ್ಡಾಯವಾಗಿ ನಾವು ಲಸಿಕೆಗಳನ್ನು ಪಡೆದುಕೊಳ್ಳುವಮೂಲಕ ಸಾಮಾನ್ಯ ಎಚ್ಚರಿಕೆಗಳನ್ನು ಮುಂಜಾಗ್ರತೆಯಾಗಿ ವಹಿಸಿದಲ್ಲಿ ಈ ಸಾಂಕ್ರಾಮಿಕದಿಂದ ಪಾರಾಗಬಹುದಾಗಿದೆ. ಒಂದು ವೇಳೆ
ಕೊರೊನಾ ಸಾಮಾನ್ಯ ಲಕ್ಷಣಗಳು ಅಥವಾ ಗಂಭೀರ ಲಕ್ಷಣಗಳುಕಾಣಿಸಿಕೊಂಡಲ್ಲಿ ತಕ್ಷಣವೇ ಹತ್ತಿರದ ಹಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯ ಬೇಕು. ಮಕ್ಕಳಿಗೆ ಮನೆಯನ್ನು ಸ್ವತ್ಛವಾಗಿಟ್ಟುಕೊಂಡು ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಕೊಡುವ ಜೊತೆಗೆ ನಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು ಎಂದು ಹೇಳಿದರು.
ಸ್ವಚ್ಛಗೆ ಆದ್ಯತೆ ನೀಡಿ: ನಗರ ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು ಮಾತನಾಡಿ, ತುಮಕೂರಿ ನಲ್ಲಿ ಕೋವಿಡ್ ಪ್ರಮಾಣ ಕಡಿಮೆ ಆಗಿದೆ. ಆದರೆ, ಡೇಂ ಉಲ್ಬಣಗೊಳ್ಳುತ್ತಿರುವುದರಿಂದ ಬಡ ಜನರುವಾಸಿಸುವ ಕೊಳಚೆ ಪ್ರದೇಶದ ಮಕ್ಕಳಿಗೆ ವ್ಯಾಪಿಸುವ ಎಲ್ಲಾವಾತಾವರಣವಿರುವುದರಿಂದ ನಾವು ಚರಂಡಿ ಮತ್ತು ಸ್ನಾನದ ಗೃಹಗಳನ್ನು ಹಾಗೂ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೋವಿಡ್ ಲಸಿಕೆ ನಮ್ಮನ್ನು ಖಾಯಿಲೆಯಿಂದ ರಕ್ಷಿಸುವ ಬೂಸ್ಟ್ ಆಗಿದ್ದು, ಶಾಶ್ವತ ಔಷಧಿ ದೊರೆ ಯುವ ಹೊರೆಗೂ ಮುನ್ನೆಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ 1ನೇ ವಾರ್ಡಿನ ಮುಖಂಡರಾದ ಮೋಹನ್, ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಶಂಕರಯ್ಯ, ಮೋಹನ್ ಟಿ. ಆರ್, ಶಾಖಾ ಸಮಿತಿಯ ರಂಗನಾಥ್, ಗುಲಾ°ಜ್ ಮುಂತಾದವರು ಪಾಲ್ಗೊಂಡಿದ್ದರು.