Advertisement

ಲೈಂಗಿಕ ದೌರ್ಜನ್ಯದ ತನಿಖೆಯಾಗಲಿ: ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಅಭಿಪ್ರಾಯ

11:36 PM Sep 05, 2024 | Team Udayavani |

ಮಂಗಳೂರು: ಸಿನೆಮಾ ರಂಗದಲ್ಲಿ ಕೇಳಿಬಂದ ಲೈಂಗಿಕ ಶೋಷ ಣೆಯ ದೂರಿನಂಥ ಪ್ರಕರಣಗಳು ರಾಜಕೀಯ ಪಕ್ಷಗಳಲ್ಲೂ ಲ್ಲಿ ಈ ರೀತಿ ದೌರ್ಜನ್ಯ ಆಗಿದ್ದಲ್ಲಿ ತನಿಖೆ ಆಗಬೇಕು. ಇದಕ್ಕಾಗಿ ಆಂತರಿಕ ಸಮಿತಿ ರಚಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಆಗ್ರಹಿಸಿದ್ದಾರೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧದ ಸುದ್ದಿಗಾರರ ಪ್ರಶ್ನೆಗೆ, ತನಿಖೆಯಾಗ ಬೇಕು. ಮಹಿಳೆ ಯಾರ ಸರಕೂ ಅಲ್ಲ. ತನ್ನ ಮೇಲಿನ ಅನ್ಯಾಯವನ್ನು ಪ್ರತಿಭಟಿಸದೇ ಸಹಿಸುವುದು ತನಗೆ ತಾನು ಮಾಡಿಕೊಳ್ಳುವ ಅನ್ಯಾಯ ಎಂದರು.

ದುರ್ಯೋಧನ, ದುಶ್ಯಾಸನರು
ಒಂದು ರಾಜಕೀಯ ಪಕ್ಷ ಬೆಳೆಯುತ್ತಿದ್ದಂತೆ ಅದರಲ್ಲಿ ಎಲ್ಲ ರೀತಿಯ ಜನರೂ ಬರುತ್ತಾರೆ. ಮಹಿಳಾ ದೌರ್ಜನ್ಯ ಎಸಗುವವರನ್ನು ಆಯಾ ಪಕ್ಷವೇ ಉಚ್ಛಾಟಿಸಬೇಕು. ನಮ್ಮ ಪಕ್ಷದಲ್ಲಿ ದ್ದರೂ ಅವರನ್ನು ಉಚ್ಛಾಟಿಸಲು ಶಿಫಾರಸು ಮಾಡುವೆ. ಎಲ್ಲಾ ಕಡೆ ದುರ್ಯೋಧನರೂ, ದುಶ್ಯಾಸನರೂ ಇದ್ದಾರೆ ಎಂದರು.

ಸಿನೆಮಾ ರಂಗದಲ್ಲಿ ಕೇವಲ 150 ಕಲಾವಿದ ರಲ್ಲ, ಸಾಕಷ್ಟು ಕಲಾವಿದರಿದ್ದಾರೆ. ಹಾಲಿ ಹೈಕೋರ್ಟ್‌ ನ್ಯಾಯಾ ಧೀಶರ ಸುಪರ್ದಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಇದರ ಬಗ್ಗೆ ತನಿಖೆ ಮಾಡುವಂತೆ ಸಮಿತಿ ರಚಿಸಲಿ. ಇಲ್ಲಿಯವರೆಗೂ ಹೆಣ್ಮಕ್ಕಳು ಅನುಭವಿಸಿದ್ದನ್ನು ಬಹಿರಂಗಪಡಿಸಲಿ ಎಂದರು.

ದ್ವಂದ್ವ ನಿಲುವು ಇಲ್ಲ
ಕಾರ್ಕಳದಲ್ಲಿ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಪ್ರಕರ ಣಕ್ಕೆ ಸಂಬಂಧಿಸಿ ಹಿಂದೂ ಸಂಘಟನೆ ಯುವಕ ಭಾಗಿಯಾದ ಹಿನ್ನೆಲೆ ಬಿಜೆಪಿ ಸುಮ್ಮನಿದೆ ಎಂಬ ಪ್ರಶ್ನೆಗೆ, ಈ ವಿಷಯದಲ್ಲಿ ದ್ವಂದ್ವ ನಿಲು ವು ಇಲ್ಲ. ಪಕ್ಷದಿಂದ ಮಾಹಿತಿ ಪಡೆಯುವೆ ಎಂದರು.

Advertisement

ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರ ಣಗಳು ಹೆಚ್ಚುತ್ತಿದ್ದು, ಗೃಹ ಸಚಿವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಕೂಡ ಮಹಿಳೆಯರ ಬೆಂಬಲಕ್ಕೆ ನಿಂತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಹಿಳಾ ಸುರಕ್ಷೆ ಬಗ್ಗೆ ಸಭೆ ನಡೆಸುತ್ತಿಲ್ಲ. ಕರಾವಳಿಯಲ್ಲಿ ಡ್ರಗ್ಸ್‌ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮ ಆಗಿಲ್ಲ ಎಂದು ಆರೋಪಿಸಿದರು.ಮಂಜುಳಾ ರಾವ್‌, ಶ್ವೇತಾ ಪೂಜಾರಿ, ಶಿಲ್ಪಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next