Advertisement

“ಹಲಸು ಮೌಲ್ಯವರ್ಧನೆ ಪ್ರಯೋಗ ನಡೆಯಲಿ’

11:28 PM Jul 12, 2019 | mahesh |

ಕಲ್ಲಡ್ಕ: ಬಡವರ ಹಸಿವು ನೀಗಿಸುವ ಹಣ್ಣು ಎಂದೇ ಖ್ಯಾತಿ ಪಡೆದ ಹಲಸು ಯಾವುದೇ ರಾಸಾಯನಿಕದ ಬಳಸದ ಪ್ರಕೃತಿದತ್ತ ಪರಿಪೂರ್ಣ ಆಹಾರ. ಹಲಸಿನ ವೈವಿಧ್ಯದ ಮೇಲೆ ಇನ್ನಷ್ಟು ಸಂಶೋಧನೆ ಆಗಬೇಕಾಗಿದೆ. ಅದರ ಮೌಲ್ಯವರ್ಧನೆ ಪ್ರಯೋಗ ನಡೆಯಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹೇಳಿದರು.

Advertisement

ಜು. 12ರಂದು ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ದಶಮಾ ನೋತ್ಸವ ಪ್ರಯುಕ್ತ ಆಯೋಜಿಸಿದ ಹಲಸು ಮೇಳ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಸೇಡಿಯಾಪು ಜನಾರ್ಧನ ಭಟ್‌ ಮಾತನಾಡಿ, ಹಲಸು ಆಹಾರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಪೂರಕ ವಾದುದು. ಹಲಸಿನ ಮರದ ಚಕ್ಕೆ ಹೋಮಕ್ಕೆ, ಎಲೆಯನ್ನು ಮಡಚಿ ಅಕ್ಕಿಯ ತಿಂಡಿ ಬೇಯಿಸುತ್ತಾರೆ. ಹಲಸಿನ ಎಲೆಯಲ್ಲಿ ನೀಡುವ ದನದ ತುಪ್ಪ ವಾತ ಮುಂತಾದ ರೋಗ ಶಮನ ಕಾರಿ ಎಂದು ಗುರುತಿಸಲಾಗಿದೆ. ಹಲಸಿನ ಹಣ್ಣಾದಾಗ ಸೊಳೆ ತಿನ್ನಲು, ಕಾಯಿ ಸೊಳೆ ಇದ್ದಾಗ ಉಪ್ಪಿನಲ್ಲಿ ಹಾಕಲು ಉಪಯೋಗ ಆಗುತ್ತದೆ. ರಚ್ಚೆ ಜಾನುವಾರುಗಳಿಗೆ ಉತ್ತಮ ಆಹಾರ. ಮಯಣ ಇಲ್ಲದ, ಬೀಜ ಇಲ್ಲದ, ಹಳದಿ-ಬಿಳಿ-ಕೆಂಪು ಮಿಶ್ರ ಬಣ್ಣದ ಸೊಳೆಗಳಿರುವ ಹಣ್ಣು ಲಭ್ಯವಿದೆ ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಉಪಸ್ಥಿತ ರಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮೀ ವಂದಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸ್ವರ್ಣಗೌರಿ ನಿರೂಪಿಸಿದರು.

ಜೀವನ ವಿಜ್ಞಾನ
ಹಲಸಿನ ಪರಿಮಳ ಆಹ್ಲಾದಕರ, ಹಲಸು ಮೇಳದಿಂದಾಗಿ ಜೀವನ ವಿಜ್ಞಾನವನ್ನೂ ಬೋಧಿಸಿದಂತಾಗಿದೆ. ಹಲಸು ಮೇಳ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹೆಜ್ಜೆಯಾಗಿದೆ. ಈ ಹಿಂದೆ ನಡೆದ ಹಲಸು ಮೇಳಗಳು ಪೂರಕಶಕ್ತಿಯನ್ನು ಒದಗಿಸಿದೆ.
 -ಎಸ್‌.ಆರ್‌. ಸತೀಶ್ಚಂದ್ರ
ಕ್ಯಾಂಪ್ಕೋ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next