ವಾಷಿಂಗ್ಟನ್: ಈ ಮೊದಲೇ ಎಚ್ಚರಿಸಿ ದ್ದಂತೆ, ರಷ್ಯಾ ಬಾಹ್ಯಾಕಾಶ ಸಂಸ್ಥೆ ರಾಸ್ಕೊಸ್ಮಸ್, ಬಹುರಾಷ್ಟ್ರಗಳ ಮೈತ್ರಿ ಯಿಂದ ರೂಪಿತಗೊಂಡಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ತಾನು ಹೊಂದಿದ್ದ ವಿಭಾಗವನ್ನು ಬೇರ್ಪಡಿಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ, ರಷ್ಯಾದ ಮೇಲೆ ಹಲವಾರು ದಿಗ್ಬಂಧನಗಳನ್ನು ಹೇರಿದ್ದವು.
ಇದರಿಂದ ಸಿಟ್ಟಿಗೆದ್ದಿದ್ದ ರಷ್ಯಾ, ಐಎಸ್‌ಎಸ್ ಅನ್ನು ಅಮೆರಿಕ ಅಥವಾ ಇನ್ನಿತರ ರಾಷ್ಟ್ರಗಳ ಮೇಲೆ ಕಳಚಿ ಬೀಳುವಂತೆ ಮಾಡುವುದಾಗಿ ಅಮೆರಿಕವನ್ನು ಹೆದರಿಸಿತ್ತು.
ಇದು ಕೇವಲ ಬೆದರಿಕೆ ಯೆಂದು ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ತಿಳಿದು ಕೊಂಡಿ ದ್ದವು. ಆದರೆ, ರಷ್ಯಾ ಹಠಾತ್ತಾಗಿ ಐಎಸ್‌ಎಸ್‌ನಿಂದ ಬೇರ್ಪಟ್ಟಿರುವುದು ಹಲವಾರು ಆತಂಕಗಳನ್ನು ಹುಟ್ಟುಹಾಕಿದೆ.