Advertisement

ಯುವಕರು ದೇಶಪ್ರೇಮಿ, ಧರ್ಮವಂತರಾಗಲಿ; ಸಚಿವ ಭಗವಂತ ಖೂಬಾ

05:52 PM Aug 01, 2022 | Team Udayavani |

ಬೀದರ: ಧರ್ಮ ಉಳಿಯಲು ದೇಶ ಸುರಕ್ಷಿತವಾಗಿರಬೇಕು. 1947ರಲ್ಲಿ ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾಗಿದ್ದು, ನೋವಿನ ಸಂಗತಿ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ರವಿವಾರ ಲಿಂಗಾಯತ ಮಹಾಮಠದಿಂದ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸಂಭ್ರಮ ಹಾಗೂ ಗುರುವಚನ ಪ್ರವಚನ ಅಭಿಯಾನದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಹೋರಾಟಗಾರರು ಕರಾಳ ದಿನಗಳನ್ನು ಎದುರಿಸಿ, ತಮ್ಮ ಪ್ರಾಣ ಬಲಿದಾನಗೈದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಜಗತ್ತಿನಲ್ಲಿ ದುರ್ಬಲರ ಮೇಲೆ ಪ್ರಬಲರು ದಾಳಿ ಮಾಡುತ್ತಾರೆ. ಪರಕೀಯರ ನಮ್ಮತ್ತ ಕಣ್ಣೆತ್ತಿ ನೋಡಬಾರದು ಎಂದರೆ ನಾವು ಬಲಿಷ್ಠರಾಗಬೇಕು. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ “ಅಗ್ನಿಪಥ’ ಯೋಜನೆ ಜಾರಿಗೊಳಿಸಿದ್ದಾರೆ.

ಯುವಕರು ಸ್ವಾರ್ಥ ಬಿಟ್ಟು ದೇಶಪ್ರೇಮಿಗಳಾಗಬೇಕು ಮತ್ತು ಧರ್ಮವಂತರಾಗಬೇಕು. ಈ ದಿಸೆಯಲ್ಲಿ ಅಕ್ಕ ಅನ್ನಪೂರ್ಣ ತಾಯಿಯವರು 75 ಗ್ರಾಮಗಳಲ್ಲಿ ಆಜಾದಿ ಅಮೃತ ಮಹೋತ್ಸವ ಮಾಡಿದ್ದು ಪ್ರಶಂಸನೀಯ ಎಂದು ಶ್ಲಾಘಿಸಿದರು. ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮೊದಲು ದೇಶ ಸುರಕ್ಷಿತವಾಗಿದ್ದರೆ ಎಲ್ಲರೂ ಕ್ಷೇಮದಿಂದಿರಲು ಸಾಧ್ಯವಿದೆ. ರಾಷ್ಟ್ರ ಕಾರ್ಯಕ್ಕೆ ಕೈಗೂಡಿಸಿದ ಅಕ್ಕನವರು ಅಭಿನಂದಾರ್ಹರು ಎಂದರು.

ಬುಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಬೀದರನ ಎಲ್ಲ ಉದ್ಯಾನಗಳಲ್ಲಿ ಆ.13ರಿಂದ ಮೂರು ದಿನಗಳ ಕಾಲ ಧ್ವಜ ಹಾರಿಸಲಾಗುವುದು ಎಂದರು.

Advertisement

ಪ್ರಭು ದೇವರು ಪ್ರಾಸ್ತಾವಿಕ ಮಾತನಾಡಿ, 75 ದಿನಗಳ ಸ್ವಾತಂತ್ರ್ಯ ಸಂಭ್ರಮ ಯಾತ್ರೆಯ ಅನುಭವ ಹಂಚಿಕೊಂಡರು. ಕರ್ನಲ್‌ ಶರಣಪ್ಪ ಸಿಕೇನಪುರ ಮತ್ತು ಬಸವಕುಮಾರ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ, ರಾಜಾರಾಮ ಚಿಟ್ಟಾ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ, ಪತ್ರಕರ್ತ ಶಿವಶರಣಪ್ಪ ವಾಲಿ, ರೇವಣಸಿದ್ದಪ್ಪ ಜಲಾದೆ, ಮಡಿವಾಳಪ್ಪ ಮಂಗಲಗಿ, ರಾಜು ಕೋಟೆ, ಆನಂದ ದೇವಪ್ಪ, ವಿರೂಪಾಕ್ಷ ಗಾದಗಿ, ಸಜಾನಂದ ಕಂದಗೂಳೆ, ಜಯರಾಜ ಖಂಡ್ರೆ, ಚಂದ್ರಶೇಖರ ಹೆಬ್ಟಾಳೆ, ಅಶೋಕ ಎಲಿ, ವಿವೇಕ ವಾಲಿ ಇತರರಿದ್ದರು. ಮಾಣಿಕಪ್ಪ ಗೊರನಾಳೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು. ಅಶ್ವಿ‌ನಿ ರಾಜಕುಮಾರ ಅವರ ಸಂಗೀತ ಮತ್ತು ಪೂರ್ಣಚಂದ್ರ ಮೈನಾಳೆ ತಂಡದ ಕ್ರಾಂತಿ ರೂಪಕಗಳು ಜನ ಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next