Advertisement

ಯುವಕರಿಗೆ ಪುಸ್ತಕದ ಹುಚ್ಚು ಹಿಡಿಯಲಿ!!

11:52 AM Apr 23, 2018 | |

ಮೊನ್ನೆತಾನೇ ಕ್ಲಾಸಿನಲ್ಲಿ ‘ಬುಕ್‌’ ಓದಬೇಕು  ಅನ್ನೋ ನನ್ನಒಂದು ಮಾತಿಗೆ ಹುಡುಗನೊಬ್ಬ ಹಿಂದಿನ ಸಾಲಿನಿಂದ ‘ಪೇಸುºಕಾ ಸರ್‌’? ಅಂತ ಚಟಾಕಿ ಹಾರಿಸಿದ! ಎಲ್ಲರೂ ನಕ್ಕು ಸುಮ್ಮನಾದರು. ನನಗೆ ಅವನ ಮಾತಿನಲ್ಲಿ ಜೋಕ್‌ ಕಾಣಿಸಲಿಲ್ಲ! ಅದು ಸತ್ಯವೇ ಅನಿಸಿತು. ಈಗ ಬುಕ್‌ ಅಂದರೆ ಅದು ಪೇಸ್ಬುಕ್ಕೇ ಅನ್ನುವುದರ ಮಟ್ಟಿಗೆ ಅರ್ಥಕ್ಕೆ ಇಳಿಸಲಾಗಿದೆ. ಟೈಮ್‌ ಕಿಲ್ಲರ್‌ ಪೇಸ್ಬುಕ್‌ಗೆ ಮಾರ್ಕ್‌ಜ್ಯೂಕರ್‌ ಬರ್ಗ್‌ ಯಾವ ಗಳಿಗೆಯಲ್ಲಿ ಆ ಹೆಸರಿನ್ನಿಟ್ಟನೊ ಬುಕ್‌ಗಳು ಕೆಳಗೆ ಬಿದ್ದು ಹೋದವು. 

Advertisement

ನಮ್ಮ ಯುವಕರಿಗೆ ಓದುವುದು ಎಂದರೆ ತರಗತಿಯ ಪಠ್ಯವನ್ನು ಓದುವುದಷ್ಟೇ ಎಂಬಂತೆ ಅರ್ಥವಾಗಿರುವಂತಿದೆ! ಹತ್ತಾರು ಪಾಠಗಳಿರುವ ನೂರು ಮಾರ್ಕಿಗೆ ನಲವತ್ತು ತಗೆಯಲು ಏನು, ಎಷ್ಟು ಓದಬೇಕೊ ಅಷ್ಟು ಓದುತ್ತಾರೆ ಎಂಬುದನ್ನು ತಾವೇ ಒಪ್ಪಿಕೊಂಡಿರುವ ನಮ್ಮ ರ್‍ಯಾಂಕ್‌ ‘ಮಾರ್ಕ್ಸ್’ವಾದಿಗಳ ಬಗ್ಗೆ ಹೆಚ್ಚೇನೂ ವಿವರಿಸಬೇಕಿಲ್ಲ. ಆದರೆ ಒಂದು ಪುಸ್ತಕ ಉಂಟು ಮಾಡುವ ಪ್ರಭಾವ ಮತ್ತು ಪರಿಣಾಮದೆಯಲ್ಲ ಅದು ಅದ್ಬುತ!

ಪುಸ್ತಕಗಳೇ ಇಂದುವರೆಗೂ ಜಗತ್ತಿನ ಎಲ್ಲಾ ಹೋರಾಟಗಳು ಗೆಲ್ಲುವಂತೆ ಮಾಡಿರುವುದು. ಅಕ್ಷರಗಳು ಮಾಡುವ ಕ್ರಾಂತಿಗೆ ಬದಲು ಮತ್ತೂಂದಿಲ್ಲ. ರಷ್ಯಾದಲ್ಲಿ ಯುವಕರನ್ನು ‘ಮದರ್‌’ ಎನ್ನುವ ಒಂದೇ ಬುಕ್‌ ಯಾವ ಪರಿ ಎಚ್ಚರಿಗೊಳಿಸಿತು ಗೊತ್ತೆ? ಚೆ ಗುವಾರನ ಬರಹಗಳು ಮತ್ತು ಮಾತುಗಳು ಯುವಕರಲ್ಲಿ ಯಾವ ಪರಿ ಹುಚ್ಚು ಹತ್ತಿಸಿದವು ಗೊತ್ತೆ?

ಈಗ ಯಾಕೆ ಅಂತಹ ಪ್ರಯತ್ನಗಳಾಗುತ್ತಿಲ್ಲ!? ಹಾಗಾದರೆ ಎಲ್ಲವೂ ಸರಿಇದೆಯೆಂದೆ? ಇಲ್ಲವೆಂದ ಮೇಲೆ ನಮ್ಮ ಯುವಕರೇಕೆ ಸುಮ್ಮನಿದ್ದಾರೆ? ಅದರಗೊಡವೆಯೇ ಬೇಡವೆಂದೆ? ಅಥವಾ ಅದರ ಅರಿಲ್ಲದೆ ಸದಾ ಮೊಬೈಲ್‌ ಸ್ಕಿನ್‌ ತಿಡುತ್ತಾ ಅದರಲ್ಲೇ ಸುಖ ಹುಡುಕಿ ಕೊಳ್ಳುತ್ತಿದ್ದರಾ? ಈಗೆಲ್ಲಾ ಹೊತ್ತಿ ಉರಿಯುತ್ತಿರುವ ಸಮಸ್ಯೆಗಳಿಗೆ ಕಾರಣ ಯಾವುದು? ಆತ್ಮಹತ್ಯೆಗಳು, ಸಮಾಜ ರೋಧಿ ನಡೆಗಳು, ನಿರುದ್ಯೋಗ, ಲಂಚ, ಅರಾಜಕೀಯತೆಗೆ ಯಾವುದು ಕಾರಣರಬಹುದು ಗೊತ್ತೆ?  

ನಮ್ಮ ಯುವಕರಿಗೆ ಪರೀಕ್ಷೆಗೆ ಓದಿದ ಪಾಠಗಳು ಬಿಟ್ಟರೆ ಬೇರೇನು ಗೊತ್ತಿದೆ? ನೂರಕ್ಕೆ ತೊಂಭತ್ತೂಂಬತ್ತು ಅಂಕ ತಗೆದುಕೊಂಡು ಬಿಟ್ಟರೆ ಗೆದ್ದೆ ಅನ್ನುವ ಹುಚ್ಚುತನ ಬಿಟ್ಟರೆ ಬೇರೇನು ಗೊತ್ತಿದೆ? ನಮ್ಮ ದೇಶದಲ್ಲಿ ಯುವ ಸಂಪತ್ತು ಹೆಚ್ಚು. ಅದರ ಬಳಕೆಗೆ ಒಂದೇ ಒಂದು ಬಿಗಿ ಸಿಗುತ್ತಿಲ್ಲವೆಂದರೆ ಅದು ನಮ್ಮ ವ್ಯವಸ್ಥೆಯ ಸೋಲು. ಅದಕ್ಕೆ ಕಾರಣವೇ ಪ್ರಜ್ಞೆಯ ಕೊರತೆ! ಖಂಡಿತ ಅಂತಹ ಅಭಾವವನ್ನು ತುಂಬುವ, ಪ್ರಜ್ಞೆಯನ್ನು ತುಂಬುವ ತಾಕತ್ತು ಇರುವುದು ಪುಸ್ತಕಗಳಿಗೆ ಮಾತ್ರ.

Advertisement

ಈಗೀಗ ಪುಸ್ತಕ ಏನಿದ್ದರೂ ಯೌವ್ವನದಾಟಿದ ವಯಸ್ಕರಿಗೆ ಅನ್ನುವಂತಾಗಿದೆ. ನಿಜಕ್ಕೂ ಅವುಗಳ ಅವಶ್ಯಕತೆ ಇರುವುದು ಯುವಕರಿಗೆ. ಒಳ್ಳೆಯ ಪುಸ್ತಕಗಳಿಲ್ಲ ಎಂಬ ಮಾತನ್ನು ನಾನು ನಂಬಲಾರೆ! ಆದರೆ ಒಳ್ಳೆಯ ಕಣ್ಣುಗಳಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನಮ್ಮ ಭಾಷೆಯಲ್ಲಿಯಲ್ಲಾಗಲಿ, ಬೇರೆ ಭಾಷೆಯಲ್ಲಾಗಲಿ ಬರುತ್ತಿರುವ ಸಂಖ್ಯೆಯೇನು ಕಡಿಮೆುಲ್ಲ.

ಬರೆಯುವವರ ಸಂಖ್ಯೆಯೂ ಹೆಚ್ಚಿದೆ. ಪುಸ್ತಕಗಳು ಅಲಮೆರಾದಲ್ಲಿ ಧೂಳು ಸೆಳೆದುಕೊಂಡು ಮಲಗಿವೆ. ಅಕ್ಷರಗಳು ತಮ್ಮಷ್ಟಕ್ಕೆ ತಾವೇ ಓದಲು ಬರುವ ಕಣ್ಣುಗಳಿಗೆ ಕಾದುಕಾದು ಸತ್ತು ಹೋಗುತ್ತಿವೆ. ಲೇಖಕ ಸಮಾಜದ ಯಾವ ಷಯವನ್ನು ಮುಖ್ಯಗುರಿಯಾಗಿಟ್ಟುಕೊಂಡು ಬರೆದಿದ್ದನೊಅದು ಕೆಲವಾರು ವರ್ಷದಲ್ಲಿ ಧೂಳಾಗಿ ಹೋಗುತ್ತದೆ.

ಆದರೆ ನಮ್ಮ ಯುವಕರು ಮಾತ್ರ ಪಠ್ಯದ ನಾಲ್ಕಾರು ಪಾಠಗಳನ್ನು ಓದಿಕೊಂಡು ಮಾರ್ಕ್ಸ್ತಗೆದುಕೊಂಡು ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು ಕೆಲಸ ಆರಂಭಿಸುತ್ತಾರೆ. ಈ ಬೆಳವಣಿಗೆ ಮುಂದಿನ ದಿನಗಳಿಗೆ ಅಪಾಯಕಾರಿಯಾದದ್ದು. ದೇಶದ ಬೆನ್ನಲುಬು, ಆಸ್ತಿಯೇ ಆಗಬೇಕಾದ ಯುವಕರಿಗೆ ತಲೆಯಲ್ಲಿ ಬರೀರಕ್ತ, ಮಾಂಸ, ಮೆದುಳು ತುಂಬಿಕೊಂಡರೆ ವೇಕ, ಪ್ರಜ್ಞೆ, ಸಂಸ್ಕೃತಿ, ನೈತಿಕತೆಯನ್ನು ಚಿಕಿತ್ಸೆ ಮಾಡಿತೂರಿಸಲು ಸಾಧ್ಯವೇ? ಯುವಕರಿಗೆ ಪುಸ್ತಕದ ಹುಚ್ಚು ಡಿಸುವುದ ಬಿಟ್ಟು ಬೇರೆದಾರಿ ಇಲ್ಲ! ಅಲ್ಲವೆ!!?

* ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next