ಹೊಸದಿಲ್ಲಿ: ಇದೇ 21ರಂದು ವಿಶ್ವ ಯೋಗದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ಸಾರ್ವಜನಿಕರ ಜತೆಗೆ ಯೋಗ ಮಾಡಲಿದ್ದು, ಆ ಹಿನ್ನೆಲೆಯಲ್ಲಿ ಅಂದು ವಿಶ್ವದಾದ್ಯಂತ ನಡೆಯುವ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕಿವಿ ಮಾತೊಂದನ್ನು ಹೇಳಿದ್ದಾರೆ.
ಯೋಗವನ್ನು ಆಡಂಬರದಲ್ಲಿ ಮಾಡುವುದಲ್ಲ, ಅದನ್ನು ಸರಳವಾಗಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಯೋಗದ ಚೆಲುವು ಅದರ ಸರಳತೆಯಲ್ಲಿದೆ. ಒಂದು ಯೋಗದ ಚಾಪೆ ಮತ್ತು ಒಂದಿಷ್ಟು ಜಾಗ ಮಾತ್ರ ನಿಮಗೆ ಬೇಕು. ಯೋಗವನ್ನು ಮನೆಯಲ್ಲಿ, ಕೆಲಸದ ನಡುವಿನ ಬಿಡುವಿನಲ್ಲಿ ಅಥವಾ ಗುಂಪುಗೂಡಿ ಮಾಡಬಹುದು. ನೀವು ದಿನನಿತ್ಯ ಯೋಗಾಭ್ಯಾಸ ಮಾಡುವಿರಿ ಎಂದು ಭರವಸೆಯನ್ನು ನಾನು ಹೊಂದಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.