Advertisement

ಯಕ್ಷಗಾನ ರೆಪರ್ಟರಿ ಸ್ಥಾಪನೆಯಾಗಲಿ

12:38 AM Dec 24, 2021 | Team Udayavani |

ಯಕ್ಷಗಾನ ಹಾಗೂ ನಾಟಕ ಸ್ವತಂತ್ರ ಕಲೆಯಾಗಿದ್ದು ಇವೆರಡು ಕಲಾ ಪ್ರಕಾರಗಳು ಪರಸ್ಪರ ಸಮೀಕರಣಗೊಂಡಲ್ಲಿ ಅವುಗಳ ಅಸ್ಮಿತೆಗೆ ಅಪಾಯ ಎದುರಾಗುವ ಸಂಭವವಿದೆ. ಈಗಂತೂ ಯಕ್ಷಗಾನ ಕ್ಷೇತ್ರವು ಅಗ್ಗದ ಪ್ರಚಾರಕ್ಕೆ ಒಗ್ಗಿಕೊಂಡು ಕ್ಷಣಿಕವಾದ ಜನಾಕರ್ಷಣೆಯನ್ನು ಹೊಂದುವ ಅಭಿಲಾಷೆಯಿಂದ ನಾಟಕ, ಸಿನೆಮಾ, ಟಿವಿ, ಧಾರಾವಾಹಿಗಳ ಅನುಕರಣೆ ಯನ್ನು ಮಾಡಿ ಸಾಂಪ್ರದಾಯಿಕ ಯಕ್ಷಗಾನ ವನ್ನು ಕಾಣೆಯಾಗಿಸಿ ಯಕ್ಷನಾಟಕವೇ ವಿಜೃಂ ಭಿಸಿ ಪ್ರದರ್ಶನಗೊಳ್ಳುತ್ತಿದೆ. ಈ ಮೂಲಕ ಯಕ್ಷಗಾನ ಕಲೆ ಕುಲಗೆಡುವತ್ತ ಸಾಗಿದೆ.

Advertisement

ಈ ಪರಿಸ್ಥಿತಿಯಲ್ಲಿ ಯಕ್ಷಗಾನ ಹಾಗೂ ನಾಟಕ ಕಲೆಯನ್ನು ಒಂದೇ ಸೂರಿನಡಿ ತಂದಲ್ಲಿ ಯಕ್ಷನಾಟಕಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿ ಇನ್ನಷ್ಟು ಹಾಳಾಗುವುದು ನಿಶ್ಚಯ. ಪ್ರಸ್ತುತ ನಾಟಕರಂಗ ಸಂಸ್ಥೆಗಳು ಕಲಾ ಅಭಿನಯಕ್ಕೆ ಅನುಕೂಲವಾಗುವ ಲಯ, ತಾಳ ನರ್ತನದ ಪ್ರಾಥಮಿಕ ಅಭ್ಯಾಸಕ್ಕಾಗಿ ನಾಟಕ ಕಲಿಯುವ ಆಸಕ್ತರನ್ನು ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಳುಹಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ಯಕ್ಷಗಾನ ಹಾಗೂ ನಾಟಕ ಕಲೆಗಳಿಗೆ ಅವುಗಳದ್ದೇ ನಿರ್ವಚನ, ನಿರೂಪಣೆಯಿಂದ ಕೂಡಿದ ರಂಗ ಹಾಗೂ ಕ್ಷೇತ್ರ ಇದೆ. ಅದೇ ರೀತಿಯಲ್ಲಿ ರಂಗಾಯಣ ಸಂಸ್ಥೆಯನ್ನು ಹುಟ್ಟು ಹಾಕಿರುವ ಬಿ. ವಿ. ಕಾರಂತರ ಉದ್ದೇಶವೂ ನಾಟಕ ರಂಗದ ಅಭ್ಯಾಸಕ್ಕೆ ಅನುಕೂಲವಾಗಿರ ಲೆಂದೇ ಆಗಿತ್ತು (ಸ್ವತಃ ಬಿ.ವಿ.ಕಾರಂತರೆ ಯಕ್ಷಗಾನದ ಅಂಶಗಳನ್ನು ನಾಟಕದಲ್ಲಿ ಸಮರ್ಥವಾಗಿ ಬಳಸಿಕೊಂಡವರು). ಕಡಲ ತಡಿಯ ಭಾರ್ಗವರೆನಿಸಿದ ಕೋಟ ಶಿವರಾಮ ಕಾರಂತರು ಯಕ್ಷಗಾನ ಕಲೆಯ ಸಂರಕ್ಷಣೆಗಾಗಿ, ಅಧ್ಯಯನಕ್ಕಾಗಿ ಹುಟ್ಟು ಹಾಕಿದ ಉಡುಪಿ ಯಕ್ಷಗಾನ ಕೇಂದ್ರವು ವಿಶ್ವದೆÇÉೆಡೆ ಯಕ್ಷಗಾನದ ಕಂಪನ್ನು ಪಸರಿಸಿದ ಏಕೈಕ ಖಾಸಗಿ ಸಂಸ್ಥೆ.

ಇಂತಹ ಇತಿಹಾಸ ಇರುವ ಎರಡು ವಿಭಿನ್ನವಾದ ಕಲೆಗಳನ್ನು ಒಂದೇ ಸೂರಿನಡಿ ತಂದು ಯಕ್ಷಗಾನ ಹಾಗೂ ನಾಟಕವನ್ನು ಮಿಶ್ರಗೊಳಿಸಿ ಯಕ್ಷರಂಗಾಯಣ ಎಂದು ಸಂಕರಗೊಳಿಸುವ ಬದಲು ಅದು ಕೇವಲ ರಂಗಾಯಣವಾಗಿಯೇ ಇರಲೆಂದು ಆಶಯ.

ಇದನ್ನೂ ಓದಿ:ಸಿದ್ದರಾಮಯ್ಯಗೆ ವಯಸ್ಸಾಗಿಲ್ಲ ಎಂದ ಈಶ್ವರಪ್ಪ

Advertisement

ಯಕ್ಷಗಾನ ಕಲೆಯ ಸರ್ವಾಂಗೀಣ ಅಧ್ಯಯನಕ್ಕಾಗಿಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳಾಗಿಸಿ ಯಕ್ಷಗಾನ ಅಕಾಡೆಮಿಯನ್ನು ಒಳಗೊಂಡ ಒಂದು ರಂಗಾಯಣ ಮಾದರಿಯ ರೆಪರ್ಟರಿ ಸಂಸ್ಥೆಯನ್ನು ಸರಕಾರದ ವತಿಯಿಂದ ನಡೆ ಸುವ ಅಗತ್ಯವಿದೆ. ಇದರಿಂದ ಈಗಾಗಲೇ ಅನ್ಯರಂಗದ ಅಪಸವ್ಯಗಳ ಮೂಲಕ ಹಾದಿ ತಪ್ಪಿರುವ ಪ್ರಪಂಚದೆÇÉೆಡೆ ಖ್ಯಾತಿ ಹೊಂದಿದ ಯಕ್ಷಗಾನ ಕಲೆಯ ಸಾಂಪ್ರದಾಯಿಕ ಸೊಗ ಡನ್ನು ಮುಂದಿನ ಪೀಳಿಗೆಗೆ ಅನನ್ಯವಾಗಿ ಕಾಯ್ದಿರಿಸಬಹುದಾಗಿದೆ. ಈ ರೀತಿಯ ಕೆಲಸವನ್ನು ಈಗಾಗಲೇ ನೆರೆಯ ರಾಜ್ಯ ಕೇರಳದಲ್ಲಿ ಸರಕಾರದ ವತಿಯಿಂದ ಕಥಕ್ಕಳಿ ಕಲೆಯ ಉಳಿವಿಗಾಗಿ “ಕಲಾಮಂಡಲ’ ಎಂಬ ಸಂಸ್ಥೆಯ ಮೂಲಕ ಮಾಡಲಾಗುತ್ತಿದ್ದು ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಸುಮಾರು 600 ವರ್ಷಗಳಿಗೂ ಮಿಕ್ಕಿದ ಇತಿಹಾಸ ಇರುವ ಉಡುಪಿಯನ್ನೇ ಕೇಂದ್ರ ವಾಗಿಸಿ ಆರಂಭಗೊಂಡು ಅವಿಭಜಿತ ದಕ್ಷಿಣ ಕನ್ನಡ ಜಿÇÉೆಯಲ್ಲಿ ಭದ್ರ ನೆಲೆ ಕಂಡುಕೊಂಡ ಯಕ್ಷಗಾನ ಕಲೆಯ ಉಳಿವಿಗೆ ಸದ್ಯ ಒಂದು ಅಕಾಡೆಮಿಕ್‌ ರೆಪರ್ಟರಿಯು ಅತೀ ಅಗತ್ಯವಿದೆ. ರಂಗಾಯಣವು ಉಡುಪಿ ಜಿಲ್ಲೆಯಲ್ಲಿ ಎಲ್ಲಾದರೂ ತುರ್ತಾಗಿ ಸ್ಥಾಪನೆಯಾಗಬೇಕು. ಅದು ಕಾರ್ಕಳದ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನ ಆವರಣದಲ್ಲಿ ಸ್ಥಾಪಿಸಿದಲ್ಲಿ ಅದೊಂದು ಐತಿಹಾಸಿಕ ತೀರ್ಮಾ ನವೂ ಆಗಬಹುದು. ಜತೆಗೆ ಯಕ್ಷ ಗಾನ ಅಕಾಡೆಮಿಕ್‌ ರೆಪರ್ಟರಿಯೂ ಆಗಲಿ.

– ಸುರೇಂದ್ರ ಪಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next