Advertisement
ಇಲ್ಲಿನ ಸರ್ಕಾರಿ ಕಲಾ ಕಾಲೇಜಿನ ಮಹಿಳಾ ಸಬಲೀಕರಣ ಕೋಶದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾರ್ಚ್ ತಿಂಗಳಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ಬದಲು ವರ್ಷವಿಡಿ ಆಚರಿಸುವಂತಾಗಬೇಕು. ಹೆಣ್ಣು ಶೋಷಣೆಗೆ ಒಳಗಾಗಿರಬಹುದು, ಆದರೆ ಹೆಣ್ಣಿಗೆ ವಿಶೇಷಸ್ಥಾನಮಾನ ನೀಡಲಾಗಿದೆ. ತಾಯಿ, ಮಗಳು, ಸೊಸೆ, ಸಹೋದರಿ, ಮಡದಿಯಾಗಿ ಹೆಣ್ಣು ತನ್ನ ಪಾತ್ರವನ್ನು ಚಾಚೂ ತಪ್ಪದೆ ನಿಭಾಯಿಸುತ್ತಾಳೆ. ಹೆಣ್ಣನ್ನು ನಾರಿ, ಸ್ತ್ರೀ, ಮಾತೆ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಶೋಷಣೆಯಾದರೆ ದೂರು ನೀಡಿ ರಕ್ಷಣೆ ಪಡೆದುಕೊಳ್ಳಲು ಮಹಿಳಾ ಸಬಲೀಕರಣ ಕೋಶ ತೆರೆಯಲಾಗಿದೆ ಎಂದರು.
ಎಲ್ಲದಕ್ಕೂ ಕಾನೂನಿನಿಂದಲೇ ಪರಿಹಾರ ಕಂಡುಕೊಳ್ಳುವ ಬದಲು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವುದನ್ನು ಕಲಿತಾಗ ಮಾತ್ರ ಜೀವನದಲ್ಲಿ ಯಾವ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಿದರು.
Related Articles
ಪುರುಷರನ್ನು ಅವಲಂಬಿಸುವ ಬದಲು ಸ್ವಾವಲಂಬಿಗಳಾಗಬೇಕು. ಪ್ರತಿಷ್ಠೆ ಬಿಟ್ಟರೆ ಸಂಸಾರ ನೆಮ್ಮದಿಯಿಂದ ಇರುತ್ತದೆ. ಸತಿ-ಪತಿ ಹೊಂದಾಣಿಕೆಯಿಂದ ಇರಬೇಕು ಎನ್ನುವುದಕ್ಕಿಂತ ಅತ್ತೆ- ಸೊಸೆ ಬಾಂಧವ್ಯವೂ ಮಧುರವಾಗಿರಬೇಕು ಎಂದರು.
Advertisement
ಒಂದು ಕಾಲದಲ್ಲಿ ಹೆಣ್ಣು ವಿದ್ಯೆ ಕಲಿಯುವುದೇ ಅಪರಾಧ ಎನ್ನುವಂತಾಗಿತ್ತು. ಈಗ ಶೇ. 60 ರಷ್ಟು ಮಹಿಳೆಯರು ಶಿಕ್ಷಣಕಲಿಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ಮಂಜುಳಾ, ಮಹಿಳಾ ಘಟಕದ ಸಂಚಾಲಕಿ ಸುನೀತಾ ಇದ್ದರು. ವಿಜಯಾ ಪ್ರಾರ್ಥಿಸಿದರು. ಜ್ಯೋತಿ ಸ್ವಾಗತಿಸಿದರು.