Advertisement

ಮಹಿಳೆ ಸ್ವಾವಲಂಬಿಯಾಗಲಿ: ರಾಮಚಂದ್ರ

03:04 PM Dec 26, 2021 | Team Udayavani |

ಶಹಾಪುರ: ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೇ ತಮ್ಮ ಸಾಮರ್ಥ್ಯ, ಕೌಶಲ್ಯ, ಜ್ಞಾನ ಬಳಸಿಕೊಂಡು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಕಲಬುರಗಿಯ ಎಸ್‌.ಜಿ. ಯೋಜನಾಧಿಕಾರಿ ರಾಮಚಂದ್ರ ಹೇಳಿದರು.

Advertisement

ನಗರದ ಶಿವಂ ಶಿಕ್ಷಣ, ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಸಿಯುಐ ಕೋ-ಆಪರೇಟಿವ್‌ ಫೀಲ್ಡ್‌ ಪ್ರಾಜೆಕ್ಟ್ ಫಾರ್‌ ಎಸ್‌.ಸಿ. ಎಸ್ಟಿ ಕಲಬುರಗಿ ಆಶ್ರಯದಲ್ಲಿ ನಗರದ ಸಂಸ್ಥೆಯ ಕಚೇರಿಯಲ್ಲಿ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣೆ ಮತ್ತು ಉಚಿತ ಟೇಲರಿಂಗ್‌ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವತಃ ದುಡಿದು ಬದುಕುವ ಶಕ್ತಿ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಂಸ್ಥೆ ಮಹಿಳೆಯರಿಗೆ ವಿವಿಧ ಕೆಲಸ ಕಾರ್ಯಗಳಲ್ಲಿ ಅನುಕೂಲ ಕಲ್ಪಿಸಲಿದೆ. ಟೇಲರಿಂಗ್‌ ಸೇರಿದಂತೆ ಇತರೆ ವೃತ್ತಿ ಕೌಶಲ್ಯ ಕಲಿಯಬೇಕು. ಅದರಿಂದ ಬದುಕಿಗೆ ಆಶ್ರಯವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಐಶ್ವರ್ಯ, ಲಕ್ಷ್ಮೀ, ತಾಯಮ್ಮ ಸೇರಿದಂತೆ ಇತರೆ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ವೇಳೆ ನಿವೃತ್ತ ಸಿಡಿಪಿಒ ಟಿ.ಪಿ. ದೊಡ್ಮನಿ, ನಿವೃತ್ತ ಶಿಕ್ಷಕ ಎನ್‌.ಎಸ್‌. ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next