Advertisement

ಕಿತ್ತೂರಿನ ಸಂಪೂರ್ಣ ಇತಿಹಾಸ ಬೆಳಕಿಗೆ ಬರಲಿ

09:57 PM Oct 25, 2021 | Team Udayavani |

ಚನ್ನಮ್ಮನ ಕಿತ್ತೂರು: 1824ರ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಮುಂಬರುವ 2024ರಲ್ಲಿ 200 ವರ್ಷಗಳು ಪೂರ್ಣಗೊಳ್ಳುತ್ತಿದ್ದರೂ ಕಿತ್ತೂರು ಸಂಸ್ಥಾನಕ್ಕೆ ಸೇರಿರುವ ಆಶೋತ್ತರಗಳು ಪೂರ್ಣಗೊಳ್ಳದಿರುವುದು ಖೇದಕರ ಸಂಗತಿ ಎಂದು ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

Advertisement

ಕಿತ್ತೂರು ಉತ್ಸವದ ಎರಡನೇ ದಿನ ರವಿವಾರ ರಾಣಿ ಚನ್ನಮ್ಮಾಜಿ ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿ, ಕಿತ್ತೂರಿನ ಸಂಪೂರ್ಣ ಇತಿಹಾಸ ಬೆಳಕಿಗೆ ಬಂದಿಲ್ಲ. ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲ ಹೋರಾಟಗಾರರ ಹುಟ್ಟೂರು, ಜನ್ಮ ಸ್ಥಳ, ಅವರುಗಳ ತ್ಯಾಗ, ಬಲಿದಾನಗಳ ಸಂಪೂರ್ಣ ದಾಖಲೆಯುಳ್ಳ ಮಾಹಿತಿ 2024ರ ಒಳಗಾಗಿ ಹೊರಬೇಕಾಗಿದೆ.

ಈ ವಿಷಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಶೇಷ ಕಾಳಜಿಯುಳ್ಳವರಾಗಿದ್ದು, ಶಾಸಕರು, ಅಭಿವೃದ್ಧಿ ಪ್ರಾಧಿಕಾರದವರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಚನ್ನಮ್ಮನ ಪರಂಪರೆ, ಇತಿಹಾಸ ಉಳಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣ ಪೂರಕವಾಗಿರಲಿ ಎಂದು ಮಡಿವಾಳ ರಾಜಯೋಗೀಂದ್ರ ಶ್ರೀಗಳು ಹೇಳಿದರು.

ಬೆಂಗಳೂರಿನ ಪುರಾತತ್ವ ವಸ್ತು ಸಂಗ್ರಾಲಯಗಳ ಇಲಾಖೆಯ ನಿರ್ದೇಶಕ ಡಾ. ಆರ್‌. ಗೋಪಾಲ ಮಾತನಾಡಿ, ಬ್ರಿಟಿಷರು ಇತಿಹಾಸ ರಚನೆಯಲ್ಲಿ ಮುಂಚೂಣಿಯಲ್ಲಿದ್ದರು. ಲಂಡನ್‌ ವಸ್ತು ಸಂಗ್ರಾಲಯದಲ್ಲಿರುವ ಕಿತ್ತೂರು ಸಂಸ್ಥಾನಕ್ಕೆ ಸೇರಿರುವ ದಾಖಲೆಗಳನ್ನು
ಮರಳಿ ತರುವ ನಿಟ್ಟಿನಲ್ಲಿ ಕೆಲಸ ನಡೆಯಬೇಕು. ನಮ್ಮ ಇಲಾಖೆಯಿಂದ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷ ಡಾ. ಎಸ್‌.ಎಂ.ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಿತ್ತೂರು ನಾಡಿನ ಚರಿತ್ರೆ ನಿಗೂಢ ರಹಸ್ಯವಾಗಿದೆ. ಸಂಶೋಧಕರಿಂದ ಅಧ್ಯಯನ ನಡೆಸಿ ಕಿತ್ತೂರು ಚನ್ನಮ್ಮನ ಭವ್ಯ ಚರಿತ್ರೆ ಕಟ್ಟಲು ಹೊರಟ್ಟಿದ್ದೇವೆ ಎಂದರು.

ಧಾರವಾಡದ ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಆರ್‌.ಎಂ.ಷಡಕ್ಷರಯ್ಯ ಆಶಯ ನುಡಿಗಳನ್ನಾಡಿ, ಕಿತ್ತೂರು ಚನ್ನಮ್ಮನ ಸಾಹಸಮಯ ಹೋರಾಟ, ಅನುಭವಿಸಿದ ತೊಂದರೆ, ಆ ಪ್ರದೇಶಗಳ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದರು. ಮೊಡಿ ಭಾಷೆಯಲ್ಲಿರುವ ಮೌಖೀಕ ದಾಖಲೆಗಳನ್ನು ಊರು, ಊರುಗಳಲ್ಲಿ ಹುಡುಕಬೇಕಿದೆ. ಅಂದಾಗ ಮಾತ್ರ ನಮಗೆ ಕಿತ್ತೂರು ಸಂಸ್ಥಾನದ ಇತಿಹಾಸ ತಿಳಿಯುತ್ತದೆ ಎಂದು ಹೇಳಿದರು.

Advertisement

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಇತಿಹಾಸದ ಬಗ್ಗೆ ತಿಳಿದಿರುವ ವ್ಯಕ್ತಿಗಳು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಆ ನಿಟ್ಟಿನಲ್ಲಿ ಯುವ ಪೀಳಿಗೆ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಈ ಗೊಷ್ಠಿಗಳ ಮೂಲಕ ಮತ್ತೂಮ್ಮೆ ಕಿತ್ತೂರಿನ ಸಮಗ್ರ ಇತಿಹಾಸ ಹೊರಬರಲಿ ಎಂದು ಹೇಳಿದರು.

ಯು.ರು. ಪಾಟೀಲ, ಡಾ. ಸಿ. ಬಿ. ಗಣಾಚಾರಿ, ಡಾ. ಗವಿಸಿದ್ದಯ್ಯ, ಡಾ. ವಿಠಲ ಬಡಿಗೇರ, ಉಪವಿಭಾಗಾ ಧಿಕಾರಿ ಶಶಧರ ಬಗಲಿ, ತಹಶಿಲ್ದಾರ ಸೋಮಲಿಂಗ ಹಾಲಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಚಂದ್ರಕಾಂತ ಹೆ„ಬತ್ತಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next