Advertisement

ಮದುವೆ ಹುಡುಗನ ಔಟ್‌ಫಿಟ್‌ ಹೀಗಿರಲಿ

10:09 PM Nov 28, 2019 | mahesh |

ಮದುವೆಯಲ್ಲಿ ಹುಡುಗ ಹುಡುಗಿಯೇ ಸೆಂಟರ್‌ ಆಫ್ ಅಟ್ರಾಕ್ಷನ್‌ ಆಗಿರುತ್ತಾರೆ. ಈ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳು ತಮ್ಮ ಮದುವೆಯ ದಿನ ಉತ್ತಮವಾಗಿ ಕಾಣ ಬಯಸುತ್ತಾರೆ. ಆದೆರ ಈಗ ಟ್ರೆಂಡ್‌ ಬದಲಾಗಿದೆ. ಮದುವೆ ಹುಡುಗನೂ ತಾನು ಚಂದವಾಗಿ ಕಾಣಬೇಕೆಂದು ಬಯಸುತ್ತಾನೆ. ಮದುವೆ ಹಾಗೂ ಆನಂತರ ನಡೆಯುವ ರಿಸೆಪ್ಷನ್‌ನಲ್ಲಿ ಅದ್ಭುತವಾಗಿ ಕಾಣ ಬೇಕೆಂದು ಬಯಸುವುದು ಎಲ್ಲರ ಆಸೆ. ಇತ್ತೀಚೆಗೆ ರಿಸೆಪ್ಶನ್‌ನಲ್ಲಿ ಹುಡುಗ ಹುಡುಗಿ ಒಂದೇ ರೀತಿಯ ಬಣ್ಣದ ಬಟ್ಟೆಗಳನ್ನು ಧರಿಸುವುದೂ ಇದೆ.

Advertisement

ಮದುವೆ ದಿನ ವರನ ಔಟ್‌ಫಿಟ್‌ಗಳು ತುಂಬಾ ಚೆನ್ನಾಗಿ ಕಾಣ ಬೇಕಾದರೆ ಇಲ್ಲಿವೆ ಕೆಲವು ಕುರ್ತಾ ಡಿಸೈನ್‌ ಮದುವೆ ವರನ ಉಡುಪುಗಳನ್ನು ಆಯ್ಕೆ ಮಾಡುವಾಗ ಕುರ್ತಾ ನಿಮ್ಮ ಮೊದಲ ಆಯ್ಕೆಯಾಗಿರಲಿ. ಮದುವೆಯ ದಿನ‌ ಹುಡುಗನಿಗೆ ಗ್ರ್ಯಾಂಡ್‌ಲುಕ್‌ ನೀಡುತ್ತದೆ. ಆದರೆ ಕುರ್ತಾವನ್ನು ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಬೇಕು. ಯಾಕೆಂದರೆ ನಿಮ್ಮ ಎತ್ತರ ಹಾಗೂ ಬಣ್ಣಕ್ಕೆ ಅನುಸರಿಸುವಂತಹ ಬಟ್ಟೆಗಳನ್ನು ಆಯಕೆ ಮಾಡುವುದು ಉತ್ತಮ. ಉದ್ದ ಕಡಿಮೆಯಿರುವವರು ಸಣ್ಣ ಕುರ್ತಾ ಹಾಗೂ ಉದ್ದವಿರುವವರು ದೊಡ್ಡ ಅಳತೆಯ ಕುರ್ತಾವನ್ನು ಧರಿಸಿದರೆ ಚಂದ ಕಾಣುತ್ತಾರೆ.

ಇಂಡೋ ವೆಸ್ಟರ್ನ್ ಕುರ್ತಾ
ಸಿಂಪಲ್‌ ಆಗಿರುವ ಕುರ್ತಾಗಳಿಗೆ ಗ್ರ್ಯಾಂಡ್‌ ಓವರ್‌ಕೋಟ್‌ ರುವುದು ಇಂಡೋ ವೆಸ್ಟರ್ನ್ ಕುರ್ತಾಗಳ ವಿಶೇಷತೆ. ಗಿಡ್ಡ ವ್ಯಕ್ತಿಗಳಿಗೆ ಈ ಕುರ್ತಾ ಹೆಚ್ಚು ಸೂಕ್ತವಾಗುತ್ತದೆ.

ಓವರ್‌ಕೋಟ್‌ ಸ್ಟೈಲ್‌ ಕುರ್ತಾ
ಇಂದಿನ ಯುವ ಜನರ ನಡುವೆ ಹೆಚ್ಚು ಟ್ರೆಂಡ್‌ ಆಗಿ ಬಳಕೆಯಲ್ಲಿರುವ ಕುರ್ತಾ ಇದು. ಮೂರು ಕಟ್‌ಗಳನ್ನು ಹೊಂದಿದ್ದು ಡಿಸೈನ್‌ಗಳ ಜತೆ ಬಟನ್‌ ಕೂಡ ಇದೆ. ಕಾಟನ್‌ ಹಾಗೂ ಸಿಲ್ಕ್ ಮೆಟೀರಿಯಲ್‌ಗ‌ಳಲ್ಲಿ ಈ ಕುರ್ತಾ ಲಭ್ಯವಾಗುತ್ತದೆ.

ವೆಲ್ವೆಟ್‌ ಪಟಿಯಾಲ ಕುರ್ತಾ
ವೆಲ್ವೆಟ್‌ ಬಟ್ಟೆಯೇ ಒಂದು ವಿಧವಾದ ಶೈನಿಂಗ್‌ ಹೊಂದಿರುವುದರಿಂದ ಇದರಲ್ಲಿ ತಯಾರಾದ ಉಡುಪುಗಳೂ ಅದೇ ರೀತಿಯಲ್ಲಿರುತ್ತವೆ. ಗಾಢ ಬಣ್ಣದ ವೆಲ್ವೆಟ್‌ ಕುರ್ತಾಗಳು ಮದುವೆ ಗಂಡಿಗೆ ಹೇಳಿ ಮಾಡಿಸಿದಂತಿರುತ್ತದೆ. ಈ ಕುರ್ತಾಗಳ ಜತೆ ಮ್ಯಾಚಿಂಗ್‌ ಶೂ ಹಾಗೂ ಶಾಲ್‌ಗ‌ಳನ್ನು ಧರಿಸಿದರೆ ಮದುವೆ ಹುಡುಗನ ಅಲಂಕಾರ ಅದ್ಭುತವಾಗಿರುತ್ತದೆ.

Advertisement

ಶೇರ್‌ವಾನಿ ಕುರ್ತಾ
ಸ್ಟ್ರೈಟ್‌ಕಟ್‌ನ ಜತೆ ಬರುವ ಶೇರ್‌ವಾನಿ ಕುರ್ತಾಗಳು ಸಿಂಪಲ್‌ ಆಗಿದ್ದರೂ ಗ್ರ್ಯಾಂಡ್‌ ಲುಕ್‌ ನೀಡುತ್ತವೆ. ಹೆಚ್ಚಾಗಿ ಗಾಢ ಬಣ್ಣಗಳಲ್ಲಿ ಈ ಕುರ್ತಾಗಳು ಲಭ್ಯವಾಗುತ್ತವೆ.

ರಾಜ್‌ವಾಡಿ ಕುರ್ತಾ
ಸಾಂಪ್ರದಾಯಿಕ ಶೈಲಿಯ ಈ ಕುರ್ತಾ ದೋತಿ ಕುರ್ತಾವೆಂದೇ ಕರೆಯಲ್ಪಡುತ್ತದೆ. ಮದುವೆ ಸಾಂಪ್ರದಾಯಿಕ ಶೈಲಿಯಲ್ಲಿದ್ದರೆ ಈ ಕುರ್ತಾಗಳು ಹೆಚ್ಚು ಸೂಕ್ತ.

-  ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next