Advertisement

ಸೌಲಭ್ಯ ಸದ್ಬಳಕೆಯಾಗಲಿ

05:04 PM Oct 04, 2019 | Team Udayavani |

ಸಕಲೇಶಪುರ: ಪರಿಶಿಷ್ಟ ಜಾತಿಯ ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಸರ್ಕಾರ ಇಂದು ಅನೇಕ ಯೋಜನೆಗಳನ್ನು ರೂಪಿಸಿದ್ದು, ಇದರ ಪ್ರಯೋಜನವನ್ನು ಪಡೆ ಯಲು ಯುವ ಜನಾಂಗ ಮುಂದಾಗಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತ ಹೇಳಿದರು.

Advertisement

ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೈಮತ್ತು ಜವಳಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಭಾವಿ ಜವಳಿ ಉದ್ದಿಮೆದಾರರಿಗೆ ನೂತನ ಜವಳಿ ನೀತಿ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ತಾಲೂಕು ಪಂಚಾಯಿತಿ ಸದಸ್ಯ ಎಡೆಹಳ್ಳಿ.ಆರ್‌.ಮಂಜುನಾಥ್‌ ಮಾತನಾಡಿ, ಪುರಾತನ ಕಾಲದಲ್ಲಿ ಮನುಷ್ಯ ಬಟ್ಟೆ ಇಲ್ಲದೇ ಮಾನ ಮುಚ್ಚಿಕೊಳ್ಳಲು ಸೊಪ್ಪನ್ನು ಸುತ್ತಿಕೊಳ್ಳುತ್ತಿದ್ದ . ಈಗ ಕಾಲ ಬದಲಾಗಿದ್ದು ಆಧುನಿಕ ಯುಗದಲ್ಲಿ ಮನುಷ್ಯ ಇಂದು ವಿಕಾಸಗೊಂಡಿದ್ದು, ತನ್ನ ವಸ್ತ್ರಗಳಿಗಾಗಿಯೇ ಸಾವಿರಾರು ರೂ. ಖರ್ಚು ಮಾಡುತ್ತಿದ್ದಾನೆ. ಸರ್ಕಾರ ಜಾರಿಗೆ ತಂದಿರುವ ಇಂತಹ ಯೋಜನೆಗಳಲ್ಲಿ ತರಬೇತಿಯನ್ನು ಪಡೆದು ತಮ್ಮ ಭವಿಷ್ಯದ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಣಕಾಸು ನಿಗಮ(ಕೆಎಸ್‌ಎಫ್ಸಿ)ಯ ವ್ಯವಸ್ಥಾಪಕರಾದ ಪರಶಿವಮೂರ್ತಿ ಅವರು ಸಾಲ ಸೌಲಭ್ಯಗಳನ್ನು ಯಾವರೀತಿಯಲ್ಲಿ ನೀಡಲಾಗುತ್ತದೆ, ಸಬ್ಸಿಡಿಗಳು ಹೇಗೆ ದೊರೆಯುತ್ತದೆ ಎಂಬುದಾಗಿ ಸಂಕ್ಷಿಪ್ತವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಕೃಷ್ಣೇಗೌಡ , ಸದಸ್ಯರಾದ ರುಕ್ಮಿಣಿ ,ಚಂದ್ರಮತಿ , ಪುರಸಭಾ ಸದಸ್ಯರಾದ ಕಾಡಪ್ಪ, ಅಣ್ಣಪ್ಪ , ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗಪ್ಪ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next