Advertisement

ಏಕರೂಪ ಶಿಕ್ಷಣ ನೀತಿ ಕರಡನ್ನು ರಾಜ್ಯ ಭಾಷೆಗಳಲ್ಲೇ ಸಲ್ಲಿಸಲಿ

11:40 PM Jun 23, 2019 | Lakshmi GovindaRaj |

ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ಶಿಕ್ಷಣ ನೀತಿ ಕರಡನ್ನು ಆಯಾ ರಾಜ್ಯದ ಭಾಷೆಯಲ್ಲಿ ಕಳುಹಿಸುವ ಮೂಲಕ ನಮ್ಮ ಒಕ್ಕೂಟದ ಬಹುತ್ವವನ್ನು ಕೇಂದ್ರ ಸರ್ಕಾರ ಗೌರವಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ|ಎಸ್‌.ಜಿ.ಸಿದ್ಧರಾಮಯ್ಯ ಒತ್ತಾಯಿಸಿದರು.

Advertisement

ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಏಕರೂಪ ಶಿಕ್ಷಣ ನೀತಿಯ ಕರಡನ್ನು ಎರಡು ಭಾಷೆಗಳಲ್ಲಿ ಮಾತ್ರ ಸಿದ್ಧಪಡಿಸಿ ರಾಜ್ಯಗಳಿಗೆ ಆಕ್ಷೇಪಣೆ, ಅಭಿಪ್ರಾಯ ಸಲ್ಲಿಸುವಂತೆ ಕಳುಹಿಸಿದೆ. ಆದರೆ, ಇದು ಸರಿಯಲ್ಲ.

ಕೇಂದ್ರ ಸರ್ಕಾರ ಕಳುಹಿಸಿರುವ ಕರಡು ಪ್ರತಿಗೆ ರಾಜ್ಯದ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿ ಸರ್ವರ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಬೇಕಾಗುತ್ತದೆ. ಆಯಾ ರಾಜ್ಯದ ಭಾಷೆಯಲ್ಲಿಯೇ ಏಕರೂಪ ಶಿಕ್ಷಣ ನೀತಿ ಕರಡನ್ನು ಕೇಂದ್ರ ಸರ್ಕಾರ ಕಳುಹಿಸಬೇಕು. ಅಲ್ಲದೇ, ಕರಡು ಬಗ್ಗೆ ಅಭಿಪ್ರಾಯ ಸಲ್ಲಿಸಲು ಜೂ.30ರ ಗಡುವು ವಿಧಿಸಿದ್ದು, ಇದನ್ನು ಮುಂದಿನ ಒಂದು ತಿಂಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next