Advertisement
ತೊಕ್ಕೊಟ್ಟು ಪೇಟೆಯಲ್ಲಿ ದಕ್ಷಿಣ ರೈಲ್ವೇಯ ಪಾಲ್ಘಾಟ್ ವಿಭಾಗಕ್ಕೆ ಸೇರಿದ ಸುಮಾರು 100 ವರ್ಷಗಳಷ್ಟು ಹಳೆಯದಾದ ರೈಲು ನಿಲ್ದಾಣವೊಂದಿತ್ತು. ಲೋಕಲ್ ರೈಲುಗಳಿಗೆ ನಿಲುಗಡೆ, ಕ್ರಾಸಿಂಗ್ ನಿಲುಗಡೆಗಳಿಗೆ ಇಲ್ಲಿ ಅವಕಾಶವಿತ್ತು. 5 ವರ್ಷಗಳ ಹಿಂದೆ ನಿಲ್ದಾಣದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಇದೀಗ ಈ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತೆ ನಿಲುಗಡೆಯ ಬೇಡಿಕೆ ಬಲವಾಗಿದೆ.
Related Articles
Advertisement
ತೊಕ್ಕೊಟ್ಟಿನಲ್ಲಿ ಹಿಂದೆರೈಲು ನಿಲ್ದಾಣ ಇದ್ದಾಗ ಐದಾರು ಲೋಕಲ್ ರೈಲುಗಳು ನಿಲ್ಲುತ್ತಿದ್ದವು. ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗಕ್ಕೆ ಇದರಿಂದ ಅನುಕೂಲವಾಗಿತ್ತು. ನಿಲ್ದಾಣದ ಪಕ್ಕದಲ್ಲಿಯೇ ರಿಕ್ಷಾ ಸ್ಟ್ಯಾಂಡ್ ಕೂಡಾ ಇತ್ತು, ಆಂಬುಲೆನ್ಸ್‌ಗಳೂ ನಿಲ್ಲುತ್ತಿದ್ದವು. ಇದರಿಂದ ರೈಲಿನಲ್ಲಿ ಬರುವ ರೋಗಿಗಳಿಗೂ ಅನುಕೂಲವಾಗುತಿತ್ತು. ತೊಕ್ಕೊಟ್ಟು ರೈಲ್ವೇ ನಿಲ್ದಾಣಕ್ಕೆ ಉತ್ತಮ ರಸ್ತೆಯೂ ಇದೆ.
ನಿಲ್ದಾಣ ಆರಂಭ ತುರ್ತು ಅಗತ್ಯ
ತೊಕ್ಕೊಟ್ಟು ಪೇಟೆಗೆ ಹೊಂದಿಕೊಂಡಂತೆ ಇದ್ದ ರೈಲು ನಿಲ್ದಾಣ ರದ್ದಾಗಿ ಹಲವು ವರ್ಷಗಳೇ ಕಳೆದಿವೆ. ಸಂಸದರು, ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಿ, ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಿದರೆ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗಬಹುದು. ಆದ್ದರಿಂದ ಶೈಕ್ಷಣಿಕ, ವೈದ್ಯಕೀಯ, ವಾಣಿಜ್ಯ, ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ತೊಕ್ಕೊಟ್ಟಿನಲ್ಲಿ ರೈಲು ನಿಲ್ದಾಣ ಆರಂಭಿಸುವ ತುರ್ತು ಅಗತ್ಯವಿದೆ.
-ಜಗನ್ನಾಥ್ ಪೆರ್ಮನ್ನೂರು ಸ್ಥಳೀಯರು
ಈಗ ಹೇಗಿದೆ ತೊಕ್ಕೊ ಟ್ಟು ಸ್ಟೇಶನ್?
ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಪೊದೆಗಳಿಂದ ಆವೃತವಾಗಿದೆ. ಹಿಂದೆ ಫ್ಲಾಟ್‌ಫಾರಂ, ಛಾವಣಿ ಸಹಿತ ಸ್ಟೇಶನ್ ಇತ್ತು. ಸ್ಟೇಶನ್ ಮಾಸ್ಟರ್ ಟಿಕೆಟ್ ನೀಡುತ್ತಿದ್ದರು. ನಿಲ್ದಾಣ ರದ್ದು ಮಾಡಿದ ಬಳಿಕ ಇವುಗಳನ್ನು ತೆರವುಗೊಳಿಸಲಾಗಿದ್ದು, ಕಟ್ಟಡ ಪಾಳು ಬಿದ್ದಿದೆ.
ನಿಲ್ದಾಣ ಆರಂಭದಿಂದ ಸಾಕಷ್ಟು ಅನುಕೂಲ ಮಂಗಳೂರು ವಿವಿ, ಯೇನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನಿಟ್ಟೆ ವೈದ್ಯಕೀಯ ಕಾಲೇಜು, ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆ, ಕಣಚೂರು ವೈದ್ಯಕೀಯ ಕಾಲೇಜು, ಅಲೋಶಿಯಸ್ ಸಮೂಹ ವಿದ್ಯಾಸಂಸ್ಥೆಗಳು, ಮುಡಿಪುವಿನ ಇನ್ಫೋಸಿಸ್ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ, ವಾಣಿಜ್ಯ ಸಂಸ್ಥೆಗಳು, ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಈ ಭಾಗದಲ್ಲಿವೆ. ಕೇರಳ ಸೇರಿ ವಿವಿಧ ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು, ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ ಎನ್ನುವುದು ರೈಲು ನಿಲ್ದಾಣ ಬೇಡಿಕೆದಾರರ ಮಾತು.
– ಭರತ್ ಶೆಟ್ಟಿಗಾರ್