Advertisement

ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಶಿಕ್ಷಕರು ಶ್ರಮಿಸಲಿ

08:53 AM Mar 15, 2019 | Team Udayavani |

ಭಾಲ್ಕಿ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೆಲ್ಲರ ಶ್ರಮವೂ ಇರುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಅಂಜಲಿ ದುಬಲಗುಂಡೆ ಹೇಳಿದರು. ಭಾಗ್ಯನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 6ನೇ ವಾರ್ಷಿಕೋತ್ಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವುದು ಪಾಲಕರ ಕಾಳಜಿ. ಆದ್ದರಿಂದ ಶಿಕ್ಷಕರು ಚನ್ನಾಗಿ ಪಾಠ ಮಾಡುವುದರೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣರಾಗಬೇಕು. ವಿದ್ಯಾರ್ಥಿಗಳೂ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಏಕಚಿತ್ತದಿಂದ ಆಲಿಸಿ, ಮನದಟ್ಟು ಮಾಡಿಕೊಂಡು ಮುಂದೆ ಬರಬೇಕು ಎಂದು ಹೇಳಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ನಾ ರುದನೂರ ಮಾತನಾಡಿ, ಸರ್ಕಾರಿ ಶಾಲೆಗಳೂ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂದು ಹೇಳುವುದಕ್ಕೆ ಭಾಗ್ಯನಗರ ಪ್ರಾಥಮಿಕ ಶಾಲೆ ಮಾದರಿಯಾಗಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು, ಬಿಇ, ಎಂಬಿಬಿಎಸ್‌, ಎಂಬಿಎ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ. 

ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣದೊಂದಿಗೆ ಸರ್ಕಾರದಿಂದ ಸಿಗುವ ಎಲ್ಲಾ ಉಚಿತ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಒದಗಿ ಬರುವವು. ಕಾರಣ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ, ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಸಲಹೆ ನೀಡಿದರು.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ, ಮಲ್ಲಿಕಾರ್ಜುನ ಹಲಮಂಡಗೆ, ಇಸಿಒ ನಾಗಭೂಷಣ ಮಾಮಡಿ, ಬಿಆರ್‌ಪಿ ಬಸವರಾಜ ದಾನಾ, ಉದಯಕಾಂತ, ದತ್ತು ಮುದಾಳೆ, ಸಿಆರ್‌ಪಿ ವಿಜಯಕುಮಾರ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಅಶೋಕ ಕುಂಬಾರ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಕುರಿತು ಮಾತನಾಡಿದರು.

Advertisement

ವೆಂಕಟರಾವ್‌ ಹಿಪ್ಪಳಗಾಂವೆ, ಸಿದ್ದಲಿಂಗ ಮುದಾಳೆ, ಸಂತೋಷ ಬಿಜಿಪಾಟೀಲ, ಕೆ.ಡಿ.ಗಣೇಶ, ರವೀಂದ್ರ, ಕುಪೇಂದ್ರ, ಲಕ್ಷ್ಮೀಬಾಯಿ, ಮೀನಾಕುಮಾರಿ, ಜಗದೇವಿ, ಲೋಕೇಶ ಕುಮಾರಚಿಂಚೋಳಿ, ದಶರಥ ಹಿಪ್ಪಳಗಾವೆ, ನವನಾಥ ಮುದಾಳೆ, ವಿಠ್ಠಲ ಲದ್ದೆ, ಶಿವರಾಜ, ಗಣಪತಿ, ಜಗನ್ನಾಥ ಬಿರಾದಾರ, ಸುಮಾವಂತೆ ಭುಸಗುಂಡೆ, ಕಮಲಾ ಕುರಣೆ, ಪ್ರಿಯಾಂಕಾ, ಭುವನೇಶವರಿ, ರುಕ್ಮಿಣಿ, ರಾಜೇಶ್ವರಿ, ಪಾರ್ವತಿ, ಪ್ರಭು ದುಬಲಗುಂಡೆ ಇದ್ದರು. ಮುಖ್ಯ ಶಿಕ್ಷಕ ಷಡಕ್ಷರಿ ಹಿರೇಮಠ ಸ್ವಾಗತಿಸಿದರು. ಸಂಜಯಕುಮಾರ ಸೋನಕಾಂಬಳೆ ನಿರೂಪಿಸಿದರು. ಪಂಡಿತರಾಯ ಬಿರಾದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next