Advertisement

ಗ್ರಾಮೀಣ ಮಕ್ಕಳ ಪ್ರತಿಭೆ ಬೆಳಗಲಿ

12:22 PM Aug 15, 2020 | Suhan S |

ನೆಲಮಂಗಲ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯಾಗಿದ್ದು, ಪ್ರತಿಭಾವಂತ ಮಕ್ಕಳ ಪ್ರತಿಭೆಗಳು ಅನಾವರಣವಾಗಬೇಕಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್‌ ಮುನಿಯಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಸೊಂಡೆಕೊಪ್ಪ ಬೈಪಾಸ್‌ ಸಮೀಪದ ದಿವ್ಯಜ್ಯೋತಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತ ನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿ ಗಳು ಮನೆಯಿಂದಲೇ ಪಾಠ ಕಲಿಯುವ ಅನಿವಾರ್ಯತೆ ಎದುರಾಗಿದ್ದು,  ಗ್ರಾಮೀಣ ಮಕ್ಕಳಿಗೆ ಕಷ್ಟವಾಗುತಿದೆ. ಅವರಿಗೆ ಉತ್ತಮ ಶಾಲಾ ಕಾಲೇಜುಗಳ ಆಸರೆ ಹಾಗೂ ಶಿಕ್ಷಕರ ಮಾರ್ಗದರ್ಶನ ಬೇಕಾಗಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ನೀಡುವ ಜನರಿಗೆ ಸರ್ಕಾರ ಸಹಕಾರ ನೀಡಬೇಕು ಎಂದರು.

ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ ಮಾತನಾಡಿ, ಕಾಲೇಜಿನ ನೂತನ ಕಟ್ಟಡ ಕೊರೊನಾದಂತಹ ಕಷ್ಟದ ಸಂದರ್ಭದಲ್ಲಿ ಆರಂಭವಾಗಿದ್ದು, ಪರಿಶ್ರಮ ಪಟ್ಟವರಿಗೆ ಯಶಸ್ಸು ದೊರೆಯಲಿದೆ ಎಂದರು.

ಮಾಜಿ ಸಂಸದ ಚಂದ್ರಪ್ಪ, ವಿಧಾನ ಪರಿಷತ್‌ ಸದಸ್ಯ ಕಾಂತರಾಜು, ಎನ್‌ಡಿಎ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್‌, ಆರ್‌ಟಿಐ ಮಾಜಿ ಆಯುಕ್ತ ಎಲ್‌.ಕೃಷ್ಣಮೂರ್ತಿ, ಕಾಲೇಜು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು, ಎಪಿಎಂಸಿ ಸದಸ್ಯ ಬೂದಿಹಾಳ್‌ ಗೋವಿಂದರಾಜು, ಪ್ರಾಂಶುಪಾಲ ಶ್ರೀನಿವಾಸ್‌, ಮುಖಂಡರಾದ ಬೂದಿಹಾಳ್‌ಕಿಟ್ಟಿ, ಪಿಳ್ಳಪ್ಪ, ಜಯರಾಮು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next